Sunday, April 20, 2025

Latest Posts

ಅಂಜೂರವನ್ನ ಪ್ರತಿದಿನ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳಿವು..

- Advertisement -

ಡ್ರೈ ಫ್ರೂಟ್ಸ್‌ಗಳಲ್ಲಿ ಎಲ್ಲವೂ ರುಚಿಯಾಗಿಯೇ ಇರತ್ತೆ. ಆದ್ರೆ ಡಿಫ್ರಂಟೆ ಟೇಸ್ಟ್ ಇರೋ ಒಣ ಹಣ್ಣು ಅಂದ್ರೆ, ಅಂಜೂರ. ಇಂಗ್ಲೀಷ್‌ನಲ್ಲಿ ಇದನ್ನ ಫಿಗ್ ಅಂತಾ ಕರೀತಾರೆ. ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹಾಗಾದ್ರೆ ಅಂಜೂರ ತಿಂದ್ರೆ, ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಹೃದಯ ಸಂಬಂಧಿ ಖಾಯಿಲೆಯನ್ನು ತಡೆಗಟ್ಟುವಲ್ಲಿ ಅಂಜೂರ ಪ್ರಮುಖ ಪಾತ್ರ ವಹಿಸುತ್ತದೆ. ಹೃದಯ ಸಮಸ್ಯೆ ಇದ್ದವರು ಪ್ರತಿದಿನ ಒಂದು ಅಂಜೂರ ತಿಂದ್ರೆ ಸಾಕು. ಅವರ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಂಜೂರ ಹಣ್ಣನ್ನು ತಿಂದು, ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಸಕ್ಕರೆ ಖಾಯಿಲೆ ಹಿಡಿತದಲ್ಲಿರುತ್ತದೆ. ಶುಗರ್ ಇದ್ದವರಿಗೆ ಕೆಲ ಬಾರಿ ತಲೆ ಸುತ್ತುವುದು, ಶಕ್ತಿ ಕುಂದುವುದೆಲ್ಲ ಆಗುತ್ತದೆ. ಅಂಥವರು ಪ್ರತಿದಿನ ಹೀಗೆ ಮಾಡಿ.

ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇದ್ರೆ, ಅಂಥವರು, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಅಂಜೂರವನ್ನು ತಿನ್ನಬೇಕು. ಇದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ. ಹಾಗಾಗಿಯೇ ಇದನ್ನ ಗರ್ಭಿಣಿಯರಿಗೆ ತಿನ್ನಲು ಹೇಳುತ್ತಾರೆ. ಇನ್ನು ಅಸ್ತಮಾ ಇರುವವರು ಕೂಡ ಇದನ್ನ ಸೇವನೆ ಮಾಡಬಹುದು. ಜೀರ್ಣಕ್ರಿಯೆ ಮಲಬದ್ಧತೆ ಸಮಸ್ಯೆ ಇದ್ದರೂ ಕೂಡ, ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದರಿಂದ ಎರಡು ಅಂಜೂರ ಸೇವಿಸಬೇಕು. ಇದರಿಂದ ತಿಂದಿರುವ ಆಹಾರ, ಜೀರ್ಣವಾಗುತ್ತದೆ. ಮತ್ತು ಮಲಬದ್ಧತೆ ಸಮಸ್ಯೆ ಕೂಡ ಬರುವುದಿಲ್ಲ.

ಆದ್ರೆ ಈ ಬಗ್ಗೆ ಮುಖ್ಯವಾದ ಮಾತಿದೆ. ಏನಂದ್ರೆ, ಪ್ರತಿದಿನ ಎರಡು ಅಂಜೂರವನ್ನ ಮಾತ್ರ ಸೇವಿಸಿ, ಎರಡಕ್ಕಿಂತ ಹೆಚ್ಚು ಅಂಜೂರ ಸೇವಿಸದ್ದಲ್ಲಿ, ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಯಾವುದೇ ಡ್ರೈ ಫ್ರೂಟ್ಸ್ ಆಗಲಿ, ಮಿತವಾಗಿ ತಿನ್ನಬೇಕು. ಇಲ್ಲದಿದ್ದಲ್ಲಿ ಹೊಟ್ಟೆ ನೋವಿನ ಸಮಸ್ಯೆ ಶುರುವಾಗಬಹುದು. ಡ್ರೈ ಫ್ರೂಟ್ಸ್ ತಿಂದ ಬಳಿಕ, ಬಿಸಿ ಹಾಲು, ಅಥವಾ ಬಿಸಿ ನೀರು ಕುಡಿಯಿರಿ. ಉಗುರು ಬೆಚ್ಚಿನ ನೀರು ಕುಡಿದರೂ ಪರ್ವಾಗಿಲ್ಲಾ. ಇನ್ನು ನಿಮಗೆ ಅಂಜೂರ ತಿಂದ್ರೆ ಅಲರ್ಜಿ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.

- Advertisement -

Latest Posts

Don't Miss