Sunday, September 8, 2024

Latest Posts

ಕಬ್ಬಿನ ಹಾಲನ್ನು ಕುಡಿಯುವುದರಿಂದ ಆಗುವ ಲಾಭಗಳೇನು..?

- Advertisement -

ಆರೋಗ್ಯಕ್ಕೂ ಉತ್ತಮವಾದ, ಸ್ವಾದದಲ್ಲೂ ರುಚಿಕರವಾದ ಜ್ಯೂಸ್ ಅಂದ್ರೆ ಕಬ್ಬಿನ ಜ್ಯೂಸ್. ಉಷ್ಣ ಪದಾರ್ಥಗಳಲ್ಲಿ ಒಂದಾದ ಈ ಕಬ್ಬಿನ ಜ್ಯೂಸ್ ಕುಡಿದ್ರೆ ಏನೆಲ್ಲ ಲಾಭವಿದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಬ್ಬಿನ ಹಾಲು ಎನರ್ಜಿ ಡ್ರಿಂಕ್ ಆಗಿದ್ದು, ನಮ್ಮ ದೇಹಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ನಿಮಗೆ ಸುಸ್ತಾಗಿದೆ ಅಂತಾ ಅನ್ನಿಸಿದ್ರೆ ಒಂದು ಗ್ಲಾಸ್ ಕಬ್ಬಿನ ಹಾಲು ಕುಡಿಯಿರಿ. ಆಗ ನಿಮ್ಮ ದೇಹಕ್ಕೆ ತಕ್ಷಣ ಶಕ್ತಿ ಬರುತ್ತದೆ. ನಿಮ್ಮ ಸುಸ್ತೆಲ್ಲ ಮಾಯವಾಗಿ ನಿಮಗೆ ಕೆಲಸ ಮಾಡಲು ಎನರ್ಜಿ ಸಿಗುತ್ತದೆ.

ಹಳದಿ ಜಾಯಿಂಡಿಸ್ ಆದ್ರೆ ಅಂಥವರಿಗೆ ಕಬ್ಬಿನ ಹಾಲು ಕುಡಿಯೋಕ್ಕೆ ಕೊಡಲಾಗುತ್ತದೆ. ಮೂರು ದಿನದಲ್ಲಿ ಜಾಯಿಂಡಿಸ್ ಕಡಿಮೆ ಮಾಡತ್ತೆ ಅಂತಾ ಹಲವು ಬಾರಿ ಸಾಬೀತಾಗಿರುವ ಕಾರಣ, ಕಾಮಾಲೆ ರೋಗ ಬಂದವರಿಗೆ ಕಬ್ಬಿನ ಹಾಲು ಕುಡಿಯೋಕ್ಕೆ ಕೊಡಲಾಗುತ್ತದೆ.

ಇನ್ನು ಡಯಾಬಿಟಿಸ್ ಇದ್ದವರು, ಕಬ್ಬಿನ ಹಾಲನ್ನು ಸೇವಿಸಬಹುದು. ಇದನ್ನು ಸೇವಿಸುವುದರಿಂದ ದೇಹದಲ್ಲಿ ಗ್ಲುಕೋಸ್ ಪ್ರಮಾಣ ಸಮತೋಲನದಲ್ಲಿರುತ್ತದೆ. ಕಬ್ಬಿನ ಹಾಲನ್ನು ಕುಡಿಯುವುದರಿಂದ ರೋಗ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದಷ್ಟು ಖಾಯಿಲೆಗೆ ತುತ್ತಾಗುವುದು ಕಡಿಮೆಯಾಗುತ್ತದೆ.

ನಿಮಗೆ ಪದೇ ಪದೇ ಮುಖಕ್ಕೆ ಮೊಡವೆಯಾದರೆ, ನೀವು ಕಬ್ಬಿನ ಹಾಲನ್ನ ಕುಡಿಯಿರಿ. ಇದರಿಂದ ನಿಮ್ಮ ಮುಖದ ಮೇಲಿನ ಗುಳ್ಳೆ ಕಡಿಮೆಯಾಗುತ್ತದೆ. ಉರಿಮೂತ್ರದ ಸಮಸ್ಯೆಗೂ ಕಬ್ಬಿನ ಹಾಲು ಪರಿಹಾರವಾಗಿದೆ. ನಿಮಗೆ ಮೂತ್ರ ಸಂಬಂಧಿತ ಸಮಸ್ಯೆಗಳಿದ್ದರೆ, ಕಬ್ಬಿನ ಹಾಲು ಕುಡಿದರೆ ಪರಿಹಾರ ಸಿಗುತ್ತದೆ.

ವಾರದಲ್ಲಿ ಒಂದೆರಡು ಬಾರಿ ಕಬ್ಬಿನ ಹಾಲು ಕುಡಿದರೆ ಉತ್ತಮವೆಂದು ಹೇಳಲಾಗುತ್ತದೆ. ಆದ್ರೆ ಕೆಲವರಿಗೆ ಕಬ್ಬಿನ ಹಾಲು ಕುಡಿದರೆ, ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಾಗುತ್ತದೆ. ಅಂಥವರು ವಾರಕ್ಕೊಮ್ಮೆ ಕಬ್ಬಿನ ಹಾಲು ಕುಡಿದರೆ ಸಾಕು. ಇನ್ನು ನಿಮಗೆ ಕಬ್ಬಿನ ಹಾಲು ಕುಡಿದರೆ ಅಲರ್ಜಿ ಎಂದಾದ್ದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಕಬ್ಬಿನ ಹಾಲು ಸೇವಿಸುವುದು ಉತ್ತಮ.

- Advertisement -

Latest Posts

Don't Miss