Health tips:
ಹುಣಸೇಮರ ಕಂಡರೆ ಸಾಕು ತಕ್ಷಣ ಬಾಯಲ್ಲಿ ನೀರು ಬರುತ್ತದೆ ,ಇನ್ನು ಈ ಚಿಗುರುಗಳಿಂದ ಹಲವು ಆಹಾರ ಪದಾರ್ತಗಳನ್ನು ತಯಾರು ಮಾಡಲಾಗುತ್ತದೆ. ಚಿಗುರಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಉಪಯೋಗ ಎಂದು ಹೇಳಲಾಗುತ್ತದೆ ,ಇದರಲ್ಲಿರುವ ಫೈಬರ್ ಅಂಶ ಜಾಸ್ತಿಯಾಗಿರುವುದರಿಂದ ಮೂತ್ರ ವಿಸರ್ಜನೆ ಮತ್ತು ಮಲಬದ್ದತ್ತೆ ಇಂದ ಕಾಡುವ ಸಮಸ್ಯೆಗಳು ದುರವಾಗುತ್ತದೆ ,ಇನ್ನು ಇದು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಿ ,ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯಲ್ಲಿ ಜಂತು ಸಮಸ್ಯೆಗಳು ಇರುವವರು ಇದನ್ನು ಸೇವಿಸಿದರೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು .
ಇನ್ನು ಹುಣಸೆ ಹಣ್ಣಿನ ಚಿಗುರನ್ನು ಹಸಿಯಾಗಿ ತಿಂದರೆ ಸಾಕಷ್ಟು ಪೋಷಕಾಂಶಗಳು ಸಿಗುತ್ತದೆ ,ಇದರಲ್ಲಿ ಎಲ್ಲಾ ಪೋಷಕಾಂಶಗಳು ಇರುವುದರಿಂದ ಮಕ್ಕಳ ಬೆಳವಣಿಗೆಗೆ ಇದು ತುಂಬಾ ಉಪಯೋಗವಾಗುತ್ತದೆ, ಇದನ್ನು ಸೇವನೆ ಮಾಡುವುದರಿಂದ ಶುಗರ್ ಕೂಡ ಕಂಟ್ರೋಲ್ ಆಗುತ್ತದೆ. ತಾಯಿಯ ಹಾಲನ್ನು ಹೆಚ್ಚಿಸುವುದರಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ ,ಬಾಯಿಯ ದುರ್ವಾಸನೆಯಿಂದ ಬಳಲುತ್ತಿರುವವರು ಪ್ರತಿದಿನ ಇದನ್ನು ಜಗಿದರೆ ಅದರಿಂದ ಮುಕ್ತಿ ಹೊಂದಬಹುದು .
ಹುಣಸೆ ಎಲೆ ಚಿಗುರನ್ನು ಒಣಗಿಸಿ ಪುಡಿಮಾಡಿ ನಿಂಬೆರಸ ದೊಂದಿಗೆ ನೋವು ಇದಲ್ಲಿ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ಕಾಮಾಲೆ ರೋಗಕ್ಕೆ ಹಾಗೂ ಮಲೇರಿಯಾ ಸಮಸ್ಯೆಗೆ ಇದು ರಾಮಬಾಣವಾಗಿ ಕೆಲಸಮಾಡುತ್ತದೆ. ಈ ಚಿಗರನ್ನು ನೀವು ಸದಾ ಸೇವನೆ ಮಾಡಿದರೆ ಇದು ನಿಮ್ಮನ್ನ ಯವ್ವನವಾಗಿ ಕಾಣುವಂತೆ ಮಾಡುತ್ತದೆ, ವಯಸ್ಸು ಚಿಕ್ಕದಾಗಿ ಕಾಣುತ್ತದೆ. ಇದರಲ್ಲಿ ವಿಟಮಿನ್ “ಸಿ” ಇರುವುದರಿಂದ ದೇಹದ ಆರೋಗ್ಯ ಹೆಚ್ಚಾಗಿ, ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನು ಮಹಿಳೆಯರಿಗೆ ಋತುಸಮಯದಲ್ಲಿ ಬರುವಂತಹ ಎಲ್ಲ ಸಮಸ್ಯೆಗಳನ್ನು ಇದು ಕಡಿಮೆ ಮಾಡುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ಹಿಡಿತಕ್ಕೆ ತರುತ್ತದೆ. ಇನ್ನು ಕ್ಯಾನ್ಸರ್ ನಂಥ ಕಾಯಿಲೆಗೂ ಕೂಡ ಇದು ರಾಮಬಾಣವಾಗಿ ಕೆಲಸಮಾಡುತ್ತದೆ. ಹಾಗೂ ಇದರ ಸೇವನೆಯಿಂದ ಅಧಿಕ ತೂಕವನ್ನು ಕಡಿಮೆ ಮಾಡಬಹುದು. ಈ ಹುಣಸೆಹಣ್ಣಿನ ಚಿಗುರಿನ ಮಹತ್ವ ಅಷ್ಟಿಷ್ಟಲ್ಲ ಆದ್ದರಿದ ಇದನ್ನು ಸಾಧ್ಯವಾದಷ್ಟು ಸೇವನೆ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.