bengalore news
ಮೂವತ್ತು ಮೂವತೈದರ ಹರೆಯದ ಅಪರಿಚಿತ ಮಹಿಳೆಯ ಶವ ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಆವರಣದಲ್ಲಿ ತಡರಾತ್ರಿಯಲ್ಲಿ ಡ್ರಮ್ ನೊಳಗೆ ಪತ್ತೆಯಾಗಿದೆ. ಸೋಮವಾರ ಮುಂಜಾನೆ (12.16 ಗಂಟೆ) ಆಟೋದಲ್ಲಿ ಮೂವರು ವ್ಯಕ್ತಿಗಳು ಬಂದಿದ್ದು, ಡ್ರಮ್ ಇಟ್ಟು ಪರಾರಿಯಾಗಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ರಾತ್ರಿ 7.30 ರ ಸುಮಾರಿಗೆರೈಲ್ವೆ ಪೋಲಿಸ್ ಫೋರ್ಸ (ಆರ್ಪಿಎಫ್) ಪೊಲೀಸರಿಗೆ ನಿಲ್ದಾಣದ ಮುಂಭಾಗದ ಸ್ವಯಂಚಾಲಿತ ಸ್ಲೈಡಿಂಗ್ ಡೋರ್ನ ಮುಂದೆ ಇರಿಸಲಾದ ನೀಲಿ ಡ್ರಮ್ ಬಗ್ಗೆ ಅನುಮಾನ ಉಂಟಾದಾಗ ಘಟನೆಯು ಬಯಲಾಗಿದೆ. ನಿನ್ನೆ ಮಧ್ಯಾಹ್ನ 2 ಗಂಟೆಯಲ್ಲಿ ಪೋಲೀಸರೊಬ್ಬರು ಡ್ರಮ್ ಗಮನಿಸಿದ್ದಾರೆ. ಅನೇಕರು ದೂರದ ಪ್ರಯಾಣಿಕರು ರೈಲಿನಲ್ಲಿ ಅನೇಕ ವಸ್ತುಗಳನ್ನು ಸಾಗಿಸಲು ಇಂತಹ ಡ್ರಮ್ಗಳನ್ನು ಬಳಸುತ್ತಾರೆ ಮತ್ತು ಆದ್ದರಿಂದ ಇದು ಯಾರೊ ಪ್ರಯಾಣಿಕರ ಸಾಮಾನು ಎಂದು ಭಾವಿಸಲಾಗಿದೆ. ಆದರೆ, ರಾತ್ರಿ 7.30ರವರೆಗೆ ಅದೇ ಸ್ಥಳದಲ್ಲಿದ್ದಾಗ, ಅನುಮಾನ ಬಂದಿದ್ದು, ಆರ್ಪಿಎಫ್ ಡ್ರಮ್ ತೆರೆದಿದ್ದಾರೆ. ದುರ್ವಾಸನೆಯಿಂದ ಅದು ಶವ ಎಂದು ತಿಳಿದು ಬಂದಿದ್ದು, ಸರ್ಕಾರಿ ರೈಲ್ವೆ ಪೊಲೀಸರಿಗೆ (ಜಿಆರ್ಪಿ) ಮಾಹಿತಿ ನೀಡಿದ್ದಾರೆ. ಪೋಲಿಸ್ ತಂಡ ಸ್ಥಳಕ್ಕೆ ಧಾವಿಸಿದಾಗ ಡ್ರಮ್ ನೊಳಗೆ ಬಟ್ಟೆಗಳ ನಡುವೆ ಶವವನ್ನು ಇಡಲಾಗಿತ್ತು. ಈ ಬಗ್ಗೆ ವಿಧಿ ವಿಜ್ಞಾನ ಮತ್ತು ಬೆರಳಚ್ಚು ತಂಡಗಳಿಗೆ ಮಾಹಿತಿ ನೀಡಿದ್ದೇವು. ಇದು 31 ರಿಂದ 35 ವರ್ಷ ವಯಸ್ಸಿನ ಮಹಿಳೆಯ ಸ್ಪಷ್ಟ ಕೊಲೆಯಂತೆ ಕಾಣುತ್ತದೆ. ಸಾಕ್ಷ್ಯ ನಾಶಪಡಿಸಲು ಮತ್ತು ದೇಹವನ್ನು ಸಾಗಿಸಲು ಪ್ರಯತ್ನಿಸಲಾಗಿದೆ.
ಪೋಲಿಸ್ ಇಲಾಖೆ ಎಷ್ಟೆ ಮುಂಜಾಗೃತೆ ಕ್ರಮ ಕೈಗೋಂಡರೂ ಎಂತಹ ಕೊಲೆ ದರೋಡೆ ಪ್ರಕರಣಗಳು ಜಾಸ್ತಿ ಆಗ್ತಿವೆ.
ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ಹಾವಳಿ ಕುರಿತು ಸೆಲಬ್ರೆಟಿಗಳಿಗೆ ಎಚ್ಚರಿಕೆ




