ಕ್ರೈಮ್ ಸುದ್ದಿ:
ತಂದೆ ತಾಯಿಗಳು ಮಕ್ಕಳ ಮೇಲೆ ಅಪಾರವಾದ ಪ್ರೀತಿಯನ್ನು ಇಟ್ಟುಕೊಂಡಿರುತ್ತಾರೆ. ಮಕ್ಕಳು ಚೆನ್ನಾಗಿ ಓದಲಿ ಸಮಾಜದಲ್ಲಿ ಅವಳು ಒಳ್ಳೆಯ ಸ್ಥಾನದಲ್ಲಿ ಇರಲಿ ಎಂದು ಕನಸನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಆ ಮಕ್ಕಳೆ ಕಣ್ಣಮುಂದೆ ಪ್ರಾಣ ಕಳೆದುಕೊಂಡರೆ ಹೆತ್ತವರಿಗೆ ಹೇಗಾಗಬೇಡ , ಇಂತಹದೊಂದು ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ತುಮಕೂರು ರಸ್ತೆಯ ಜಾಲಹಳ್ಳಿ ಜಂಕ್ಷನ್ ಹತ್ತಿರ ಇಂದು ಮುಂಜಾನೆ ಖಾಸಗಿ ಮತ್ತು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಿಂದಾಗಿ ಒಂದು ದ್ವಿತಿಯ ಪಿಯುಸಿಯ ವಿದ್ಯಾರ್ಥಿನಿಯಾಗಿರು ದಿಶಾ ಪ್ರಾಣ ಕಳೆದುಕೊಂಡಿದ್ದಾಳೆ. ದಿಶಾಳ ತಂದೆ ತನ್ನ ಮಗಳು ಎಂಜಿನಿಯರಿಂಗ್ ಮಾಡಬೇಕು ಎಂದು ಒಳ್ಳೆ ಖಾಸಗಿ ಕಾಲೇಜಗೆ ಸೇರಿಸಿದ್ದರು, ಪಿಸಿಎಂ ವಿಭಾಗದಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ದಿಶಾ ಕಾಲೇಜಿಗೆ ಬಸ್ ನಲ್ಲಿ ಓಡಾಡುವುದು ಲೇಟ್ ಅಗುತ್ತದೆ ಎಂದು ಸ್ವತಃ ತಾವೆ ನಿತ್ಯ ಕಾಲೇಜಿಗೆ ಕರೆದುಕೊಂಡು ಹೋಗುವುದು, ವಾಪಸ್ ಕರೆದುಕೊಂಡು ಬರುವುದು ಮಾಡುತ್ತಿದ್ದರು. ಇಂದು ಮುಂಜಾನೆ ಪೀಣ್ಯದ ರೆಡ್ಡಿ ಕಟ್ಟೆ ಬಳಿಯಿಂದ ಕಾಲೇಜೆಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತಿದ್ದ ವೇಳೆ ಜಾಲಹಳ್ಳಿ ಕ್ರಾಸ್ ಸಿಗ್ನಲ್ ಪಾಸ್ ಮಾಡುವಾಗ ಖಾಸಗಿ ಬಸ್ ಚಾಲಕನ ಅಜಾಗರುಕತೆಯಿಂದ ಅಪ್ಪ ಮಗಳು ಇಬ್ಬರು ಅಪಘಾತಕ್ಕೆ ಈಡಾಗಿದ್ದಾರೆ.ಅಪಘಾತದಲ್ಲಿ ತಂದೆ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರೆ ಮಗಳ ದಿಶಾ ಕಾಲಿಗೆ ತೀವ್ರ ಪೆಟ್ಟಗಾಗಿತ್ತು. ಕೂಡಲೇ ಸ್ಥಳೀಯರು ಆಕೆಯನ್ನು ಬೆಂಗಳೂರಿನ ದಾಸರಹಳ್ಳಿ ಬಳಿ ಇರುವ ಪೀಪಲ್ ಟ್ರೀ ಆಸ್ಪತ್ರೆಗೆ ಸೇರಿಸಿದರು. ಚಿಕಿತ್ಸೆ ಫಲಕಾರಿಯಾಗದೆ ತೀವ್ರ ರಕ್ತಸ್ತರಾವದಿಂದ ಆಸ್ಪತ್ರೆಯಲ್ಲಿ ದಿಶಾ ಕೊನೆಯುಸಿರು ಎಳೆದಿದ್ದಾಳೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹೀಗೆ ಗೋಳಾಡುತ್ತಿರುವವರು ಇವರು ತನ್ನ ಮಗಳು 18 ವರ್ಷದ ದಿಶಾಳನ್ನು ಅಪಘಾತದಲ್ಲಿ ಕಳೆದುಕೊಂಡು ದುಖಃದ ಮಡುವಿನಲ್ಲಿದ್ದಾರೆ.