Monday, December 23, 2024

Latest Posts

Traffic police: ಕರ್ತವ್ಯ ನಿರತ ಪೋಲಿಸ್ ಮೇಲೆ ಹಲ್ಲೆ

- Advertisement -

ಬೆಂಗಳೂರು: ಇತ್ತೀಚಿಗೆ ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘನೆ ಮಾಡಿ ತಮಗೆ ಇಷ್ಟವಾದ ರೀತಿ ವಾಹನವನ್ನು ಓಡಿಸುವುದು, ಹಾಗೂ ತಮಗೆ ತೋಚಿದ ಜಾಗದಲ್ಲಿ ವಾಹನ ನಿಲ್ಲಿಸುವುದು ಸಾಮಾನ್ಯವಾಗಿದೆ. ಸಂಚಾರಿ ಇಲಾಖೆ ಎಷ್ಟೇ ನಿಯಮ ಜಾರಿಗೆ ತಂದರೂ ವಾಹನ ಸವಾರು ,ಮಾತ್ರ ತಮ್ಮ ಅತಿರೇಕವನ್ನು ನಿಲ್ಲಿಸುತ್ತಿಲ್ಲ

ಜುಲೈ 11 ರಂದು ಸಂಜೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಸುಲೇಮಾನ್ ಎನ್ನುವ ವ್ಯಕ್ತಿ ನೋ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಒಂದನ್ನು ನಿಲ್ಲಿಸಿದ್ದ ಇದನ್ನು ನೋಡಿದ ಸಂಚಾರಿ ಪೋಲಿಸ್ ಪೇದೆ  ಉಮೇಶ್ ಎನ್ನುವವರು ವಾಹನಕ್ಕೆ ಕ್ಲಾಂಪ್ ಹಾಕಿದ್ದಾರೆ. ಇದೇ ಕಾರಣಕ್ಕೆ ಕರ್ತವ್ಯದಲ್ಲಿರುವ ಉಮೇಶ್ ಮೇಲೆ ಹಲ್ಲೆ  ಮಾಡಿದ್ದಾನೆ.

ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದ್ದರು ಆದ ಕಾರಣ ಕ್ಲಾಂಪ್ ಹಾಕಿದ್ದಕ್ಕೆ ವಾಹನ ಸವಾರ ಹಲ್ಲೆ ಮಾಡಿರುವುದಾಗಿ ದೂರನ್ನು ದಾಖಲಿಸಿದ್ದಾರೆ.ದೂರು ದಾಖಲಿಸಿಕೊಂಡು ಹಲ್ಲೆ ಮಾಡಿದ ಪ್ರಮುಖ ಆರೋಪಿಯನ್ನು ಬಂಧಿದಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಲಾಗುವುದು ಎಂದು ಜಂಟಿ ಪೋಲಿಸ್ ಆಯುಕ್ತ ಎಂ ಎನ್ ಅನುಚೇತ್ ಟ್ವೀಟ್ ಮಾಡಿದ್ದಾರೆ

Women : ಡ್ರೈನೇಜ್ ನಲ್ಲಿ ಮಹಿಳೆಯ ಶವ ಪತ್ತೆ

Rain : ಕಲಬುರುಗಿಯಲ್ಲೂ ಭಾರೀ ಮಳೆ …!

Duke: ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು

- Advertisement -

Latest Posts

Don't Miss