ಬೆಂಗಳೂರು: ಅಖಿಲ ಭಾರತ ಅಗರಬತ್ತಿ ಉತ್ಪಾದನಾ ಸಂಘವು ನಗರದಲ್ಲಿ ಮೂರು ದಿನಗಳ ‘ಅಗರಬತ್ತಿ ಎಕ್ಸ್ ಪೋ’ ಗೆ ಗುರುವಾರ ಚಾಲನೆ ನೀಡಿದೆ. ಸಾಂಪ್ರಾದಾಯಿಕ ಆಧುನಿಕ ಎಂಬ ವಿಷಯದ ಸುತ್ತ ಪರಿಕಲ್ಪನೆಗೊಂಡ ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಇಲ್ಲಿ ದೇಶಾದ್ಯಂತ ಮತ್ತು ಯುರೋಪಿಯನ್ ದೇಶಗಳಿಂದ 170ಕ್ಕೂ ಹೆಚ್ಚು ಪ್ರದರ್ಶಕರು ಭಾಗಿಯಾಗಲಿದ್ದಾರೆ.
ಮಲೇಷ್ಯಾದ ನೂತನ ಪ್ರಧಾನಿ ಅನ್ವರ್ ಇಬ್ರಾಹಿಂಗೆ ಪ್ರಧಾನಿ ಮೋದಿ ಅಭಿನಂದೆನೆ
ಲ್ಯಾಂಡ್ ಮಾರ್ಕ್ ಎಕ್ಸ್ ಪೋಗೆ ಸುಮಾರು 8,000 ಪ್ರತಿನಿಧಿಗಳು ಭೇಟಿ ನೀಡುತ್ತಿದ್ದಾರೆ. ಅಂಚೆ ಇಲಾಖೆಯಿಂದ ಚಿತ್ರ ಅಂಚೆ ಕಾರ್ಡ್ ಗಳ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಎಕ್ಸ್ ಪೋ 500 ಅಂಗಡಿಗಳನ್ನುಹೊಂದಿದ್ದು, ಕ್ಯುರೆಟೆಡ್ ಸ್ಪೀಕರ್ ಸೆಷನ್ ಗಳು ಮತ್ತು ಭಾರತೀಯ ಚಿಲ್ಲರೆ ಭವಿಷ್ಯ ಪ್ಯಾಕೇಜಿಂಗ್ ನಲ್ಲಿನ ನಾವಿನ್ಯತೆಗಳು ಮತ್ತು ಡ್ಯುಪ್ಲೆಕ್ಸ್ ಮತ್ತು ಕೊರಗೇಷನ್ ನ ಭವಿಷ್ಯ ಭಾರತದಲ್ಲಿನ ಸುಗಂಧ ಪ್ರವೃತ್ತಿಗಳು ಮತ್ತು ಮುಂತಾದ ವ್ಯಾಪಕ ವಿಷಯಗಳ ಕುರಿತು ಚರ್ಚೆಗಳು ಇಲ್ಲಿ ನಡೆಯುತ್ತವೆ. ಕಾರ್ಯಕ್ರಮದಲ್ಲಿ ಅಖಿಲ ಭಾರತಿ ಅಗರಬತ್ತಿ ಉತ್ಪಾದನಾ ಸಂಘದ ಅಧ್ಯಕ್ಷ ಅರ್ಜುನ್ ರಂಗ ಮಾತನಾಡಿ, ಭಾರತೀಯ ಅಗರಬತ್ತಿಗಳು ಪ್ರಪಂಚದ ಇತರೆ ಭಾಗಗಳಿಗಿಂತ ಭಿನ್ನವಾಗಿರುವುದು ಸುಗಂಧ ದ್ರವ್ಯಗಳ ಗುಣಮಟ್ಟದಿಂದಾಗಿ ಎಂದು ಹೇಳಿದರು. ಅಗರಬತ್ತಿ ಉದ್ಯಮ ಇನ್ನು ಮುಂದೆ ಕರ್ನಾಟಕದ ಸುತ್ತಲೂ ಕೇಂದ್ರೀಕೃತವಾಗಿಲ್ಲ. ಇಂದು ಇದು ಗುಜರಾತ್, ಮಹಾರಾಷ್ಟ್ರದಾದ್ಯಂತ ಹರಡುತ್ತಿದೆ ಎಂದು ಹೇಳಿದರು.
ಮಠ, ಮಂದಿರಗಳು, ಸಂಘ ಸಂಸ್ಥೆಗಳಿಗೆ 23 ಕೋಟಿ ಅನುದಾನ ಬಿಡುಗಡೆ ಮಾಡಿದ ಸರ್ಕಾರ