ಬೇಡಿಕೆ ಕುಸಿದಿದ್ದರಿಂದ, ಎಲೆಕ್ಟ್ರಿಕ್ ಉತ್ಪನ್ನಗಳ ಉತ್ಪಾದನಾ ಕಂಪನಿ ಮಿಟ್ಸುಬಿಷಿಗೆ ಬೀಗ ..!

ರಾಮನಗರ: ಉತ್ಪನ್ನಗಳ ಬೇಡಿಕೆ ಕುಸಿತ ಹಿನ್ನೆಲೆ, ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಬಿಡದಿಯಲ್ಲಿರುವ ಉತ್ಪದನಾ ಘಟಕದ ಟ್ರಾಕ್ಷನ್ ಮೋಟಾರ್ ಮತ್ತು ವಿವಿವಿಎಫ್ ಇನ್ವರ್ಟರ್ ಗಳ ಉತ್ಪಾದನೆ ಸ್ಥಗಿತಗೊಳಿಸಿದೆ.

ಉತ್ಪನ್ನಗಳಿಗೆ ಬೇಡಿಕೆ ಕುಸಿದಿದ್ದರಿಂದ ಕಂಪನಿ ಈ ಕ್ರಮ ಕೈಗೊಂಡಿದ್ದು,ಕಾರ್ಖಾನೆಯಲ್ಲಿರುವ ತನ್ನ 6 ಕಾರ್ಮಿಕರನ್ನು ನವೆಂಬರ್ 5ರಿಂದ ಸೇವೆಯಿಂದ ತೆಗೆದಿದೆ. ಕಂಪನಿಯಲ್ಲಿ ಕೆಲೆಸ ಮಾಡುತ್ತಿದ್ದ ಕೆಲಸಗಾರರಿಗೆ  ಕನೂನುಬದ್ಧವಾಗಿ ಪರಿಹಾರ ನೀಡಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿ ಹಾಗೂ ಸಮೂಹವು ಭಾರತದಲ್ಲಿ ಹೂಡಿಕೆ ಮತ್ತು ತನ್ನ ಪ್ರಗತಿಯನ್ನು ಮುಂದೆವರೆಸಿ, ತನ್ನ ಇನ್ನುಳಿದ ಉದ್ಯಮಗಳಾದ ಫ್ಯಾಕ್ಟರಿ ಆಟೋಮೇಷನ್, ಏರ್ ಕಂಡಿಷನಿಂಗ್ ಮತ್ತು ಇನ್ನಿತರ ಉದ್ಯಗಳು ಮುಂದುವರೆಯಲಿದೆ ಎಂದು ಮಿಟ್ಸುಬಿಷಿ ಸಮೂಹದ ವ್ಯವಸ್ಥಾಪಕ ಕಝಹಿಕೊ ತಮುರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಕಂಪನಿ 2010ರಲ್ಲಿ ಆರಂಭವಾಗಿದ್ದು. ಏರ್ ಇಂಡಿಯಾ ಮತ್ತು ಫ್ಯಾಕ್ಟರಿ ಆಟೋಮೇಷನ್ ಉತ್ಪನ್ನಗಳಂತಹ ವಿದ್ಯುತ್ ಉಪಕರಣಗಳ ಸಗಟು ವಿತರಣೆಯನ್ನಳೊಗೊಂಡಿದೆ.

About The Author