ಬೆಂಗಳೂರು: ಹೊಸೂರು ರಸ್ತೆಯ ಟ್ರಾಫಿಕ್‌ನಲ್ಲಿ ಸಂಚಾರ ಮಾಡುವವರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದ್ದು, ಅದರಲ್ಲೂ ವೀಕೆಂಡ್ ನಲ್ಲಂತೂ ಖಾಸಗಿ ಬಸ್ ಗಳು ಅಕ್ರಮವಾಗಿ ರಸ್ತೆಗಳಲ್ಲಿ ನಿಲುಗಡೆ ಮಾಡುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. 19 ಕಿಮೀ ಉದ್ದದ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಹೊಸೂರು ರಸ್ತೆಯ ಜನದಟ್ಟಣೆಯನ್ನು ಕಡಿಮೆ ಮಾಡುತ್ತಿದ್ದು, ಇದಕ್ಕೆಲ್ಲ ಜೂನ್ 2023 ರಲ್ಲಿ ಸಾರ್ವಜನಿಕರಿಗೆ ಸಂಚಾರಕ್ಕೆ ಸಿಗಲಿದೆ ಎಂದು ತಿಳಿಸಲಾಗಿದೆ. ಹೇಳಿರುವ ಗಡುವನ್ನು ಅನುಸರಿಸಿದರೆ ಪ್ರಯಾಣಿಕರ ಸಮಸ್ಯೆಗೆ ಪರಿಹಾರ ನೀಡಿದಂತಾಗುತ್ತದೆ.
ಶೆಲ್ಲಿ ಒಬೆರಾಯ್ ಎಎಪಿಯ ದೆಹಲಿ ಮೇಯರ್ ಅಭ್ಯರ್ಥಿ
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಸಹ ಬಸ್ ನಿಲ್ದಾಣಗಳು, ಪಾದಚಾರಿ ಮಾರ್ಗಗಳು, ಫುಟ್ ಬ್ರಿಡ್ಜ್‌ಗಳು ಮತ್ತು ಮುಂಬರುವ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಒಳಚರಂಡಿಯನ್ನು ನಿರ್ಮಿಸಲು ಯೋಜಿಸುತ್ತಿದೆ. ಈ ಎಲೆಕ್ಟ್ರಾನಿಕ್ ಸಿಟಿ ಹಳದಿ ಮಾರ್ಗವು ರಾಷ್ಟ್ರೀಯ ವಿದ್ಯಾಲಯ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ (ಆಕ್ಸ್‌ಫರ್ಡ್ ಕಾಲೇಜು), ಕುಡ್ಲು ಗೇಟ್ (ಮುನೇಶ್ವರ ನಗರ), ಸಿಂಗಸಂದ್ರ (ಚಿಕ್ಕಬೇಗೂರು), ಹೊಸ ರಸ್ತೆ (ಚಿಕ್ಕಬೇಗೂರು), ಹೊಸ ರಸ್ತೆ ( ಬಸಾಪುರ ರಸ್ತೆ), ಬೆರಟೆನ ಅಗ್ರಹಾರ (ಹೊಸ ರಸ್ತೆ), ಎಲೆಕ್ಟ್ರಾನಿಕ್ಸ್ ಸಿಟಿ, ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ (ಎಲೆಕ್ಟ್ರಾನಿಕ್ಸ್ ಸಿಟಿ – II), ಹುಸ್ಕೂರು ರಸ್ತೆ, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರ ಮೂಲಕ ಹಾದು ಹೋಗಲಿದೆ. ಹಳದಿ ಮಾರ್ಗವು 2021 ರಲ್ಲಿ ಪೂರ್ಣಗೊಳ್ಳಬೇಕಿತ್ತು. ನಂತರ ಅದನ್ನು ಡಿಸೆಂಬರ್ 2022 ಕ್ಕೆ ಮುಂದೂಡಲಾಗಿತ್ತು. ಮತ್ತೆ ಅದನ್ನು ಜೂನ್ 2023 ಕ್ಕೆ ವಿಸ್ತರಿಸಲಾಗಿದೆ.