ಬೆಂಗಳೂರು: ಬೆಂಗಳೂರಿನ ಹೆಗ್ಗನಹಳ್ಳಿ, ಸಂಜೀವಿನಿ ನಗರದಲ್ಲಿದ್ದ ಸಹನಾ ಪಾಲಿ ಕ್ಲಿನಿಕ್ ನಡೆಸುತ್ತಿದ್ದ ಮಾಲೀಕ ಕುಮಾರಸ್ವಾಮಿ, ನಕಲಿ ವೈದ್ಯ ನಾಗರಾಜ್ನನ್ನು ರಾಜಗೋಪಾಲ್ ನಗರ ಪೊಲೀಸರು ಬಂಧಿಸಿದ್ದಾರೆ. ಜ್ವರ ಬಂದಿದೆ ಎಂದು ಚಿಕಿತ್ಸೆಗೆ ಹೋಗಿದ್ದ ಜ್ಯೋತಿ ಎಂಬುವರಿಗೆ ಸಂಕಷ್ಟ ಎದುರಾಗಿದ್ದು, ಚಿಕಿತ್ಸೆ ನೀಡುವಾಗ ನಕಲಿ ವೈದ್ಯ ಒಂದೇ ಜಾಗಕ್ಕೆ ಎರಡು ಸಲ ಇಂಜೆಕ್ಷೆನ್ ಹಾಕಿದ್ದ ನಕಲಿ ವೈದ್ಯ. ಇದರಿಂದ ಇಂಜೆಕ್ಷನ್ ಕೊಟ್ಟ ಜಾಗ ಸಂಪೂರ್ಣ ಕೊಳೆತು ಕೀವು ತುಂಬಿಕೊಂಡಿತ್ತು. ಬೇರೆ ವೈದ್ಯರ ಬಳಿ ಚಿಕಿತ್ಸೆಗೆ ತೆರಳಿದಾಗ ಶಸ್ತ್ರ ಚಿಕಿತ್ಸೆ ಮಾಡಿಸುವಂತೆ ಜ್ಯೋತಿಯವರಿಗೆ ಸೂಚಿಸಿದ್ದರು.
ಮಂಡ್ಯದಲ್ಲಿ 2 ತಿಂಗಳೊಳಗೆ ಇನ್ನೊಂದು ಉದ್ಯೋಗ ಮೇಳ : ಕೆ. ಗೋಪಾಲಯ್ಯ
ಈ ಹಿನ್ನೆಲೆ ನಕಲಿ ವೈದ್ಯನ ವಿರುದ್ಧ ಜ್ಯೋತಿ ದೂರು ನೀಡಿದ್ದರು. ಎರಡು ಕ್ಲಿನಿಕ್ ನಡೆಸುತ್ತಿದ್ದ ಆರೋಪಿ ನಕಲಿ ವೈದ್ಯ ನಾಗರಾಜನನ್ನು, ಜ್ಯೋತಿಯವರ ದೂರಿನ ಮೇರೆಗೆ ಪೊಲೀಸರು ವಿಚಾರಣೆ ನಡೆಸಿದರು ವಿಚಾರಣೆ ವೇಳೆ ನಾಗರಾಜ್ ನಕಲಿ ವೈದ್ಯ ಎಂದು ಸಾಬೀತಾಗಿದ್ದರಿಂದ ಪೊಲಿಸರು ಕ್ಲಿನಿಕ್ ನಡೆಸುತ್ತಿದ್ದ ಮಾಲೀಕ ಕುಮಾರಸ್ವಾಮಿ ಮತ್ತು ನಾಗರಾಜನ್ನು ಬಂಧಿಸಿದ್ದಾರೆ.
ಕೊಪ್ಪಳಕ್ಕೆ ಇಂದು ಜೆ.ಪಿ. ನಡ್ಡಾ ಆಗಮನ : ಬಿಜೆಪಿ ಕಾರ್ಯಾಲಯ ಉದ್ಘಾಟನೆ