ಬೆಂಗಳೂರು ಗ್ರಾಮಾಂತರ: ಇಂದಿನಿಂದ 5 ದಿನಗಳ ಕಾಲ ಜಿ-20 ಶೃಂಗಸಭೆ ನಡೆಯಲಿದ್ದು, 40 ದೇಶಗಳ ಪ್ರಮುಖ ಗಣ್ಯರು ಭಾಗಿಯಾಗುತ್ತಿದ್ದಾರೆ. ದೇವನಹಳ್ಳಿ ತಾಲೂಕಿನ ಹೊರವಲಯದ ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ ನಲ್ಲಿ ಜಿ-20 ಶೃಂಗಸಭೆ ನಡೆಯಲಿದೆ. ಈ ಹಿನ್ನೆಲೆ ಹೋಟೆಲ್ ಹತ್ತಿರ ನಂದಿ ಮಂಟಪ ಮಾದರಿಯಲ್ಲಿ ದ್ವಾರ ಬಾಗಿಲುಗಳ ನಿರ್ಮಾಣ ಮಾಡಲಾಗಿದೆ. ಇನ್ನು ಶೃಂಗ ಸಭೆಗೆ ಆಗಮಿಸುವ ಗಣ್ಯರ ಭದ್ರತೆಗೆ ಮೂರು ಹಂತಗಳಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಹೋಟೆಲ್ ಸುತ್ತಮುತ್ತ 2 ಕಿ.ಮೀ ವರೆಗೆ ಪೊಲೀಸ್ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಎರಡು ಹಂತದಲ್ಲಿ 5 ದಿನಗಳ ಕಾಲ ನಡೆಯುವ ಶೃಂಗ ಸಭೆಯಲ್ಲಿ ಮೋದಲನೇ ಹಂತದಲ್ಲಿ 40 ದೇಶಗಳ ಪ್ರಮುಖ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ನಂತರ ವಿದೇಶಿ ವಿತ್ತ ಸಚಿವರು 2 ದಿನದ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಹೆಸರು ಕಾಳು ಬಳಸಿ ನಿಮ್ಮ ತ್ವಚೆ ಮತ್ತು ಕೂದಲನ್ನ ಚೆಂದಗೊಳಿಸಿಕೊಳ್ಳಿ..
ಮಸಾಲೆ ಪದಾರ್ಥಗಳನ್ನ ಅಡುಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..