Movie
ಕಾಂತಾರ ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದ್ದು, ಈಗ ಎಬಿ ಡಿವಿಲಿಯರ್ಸ್ ಬಾಯಲ್ಲೂ ಈ ಸಿನಿಮಾದ ಹೆಸರು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಮಿಸ್ಟರ್ 360 ಡಿಗ್ರಿ ಎಂದು ಖ್ಯಾತಿ ಪಡೆದ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯರ್ಸ್ ಮತ್ತೆ ಬೆಂಗಳೂರಿಗೆ ಆಗಮಿಸಿದ್ದು, ಅವರ ಎಂಟ್ರಿ ಎಲ್ಲರಿಗೂ ಕುತೂಹಲ ಹೆಚ್ಚಿಸಿದೆ. ಇನ್ನೊಂದು ಅಚ್ಚರಿ ವಿಷಯವೆಂದರೆ ಬೆಂಗಳೂರಿಗೆ ಎಂಟ್ರಿ ಕೊಡುತ್ತಿದ್ದಂತೆಯೆ ‘ಕಾಂತಾರ’ ಸಿನಿಮಾ ಬಗ್ಗೆ ಮಾತನಾಡಿ, ರಿಷಬ್ ಶೆಟ್ಟಿ ಮತ್ತು ಎಬಿ ಡಿವಿಲಿಯರ್ಸ್ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡು ಇಬ್ಬರೂ ‘ಕಾಂತಾರ’ ಎಂದು ಕೂಗಿದ್ದಾರೆ. ಈ ವಿಡಿಯೋವನ್ನು ‘ಹೊಂಬಾಳೆ ಫಿಲ್ಮ್ಸ್ ಮತ್ತು ರೆಷಬ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ಇಬ್ಬರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಕಾಂತಾರ ಸಿನಿಮಾ ವಿಶ್ವದೆಲ್ಲೆಡೆ ಅಬ್ಬರಿಸುತ್ತಿದ್ದು, ಎಲ್ಲ ಸೆಲೆಬ್ರೇಟಿ ಬಾಯಲ್ಲೂ ‘ಕಾಂತಾರ’ದ್ದೆ ಮಾತು ಕೇಳಿ ಬರುತ್ತಿದೆ. ಈಗಲೂ ಹೌಸ್ ಪುಲ್ ಪ್ರದರ್ಶನ ಕಾಣುತ್ತಿರುವ ಸಿನಿಮಾ ಈಗ ಎಬಿ ಡಿವಿಲಿಯರ್ಸ್ ಬಾಯಲ್ಲೂ ಈ ಸಿನಿಮಾದ ಹೆಸರು ಕೆಳಿ ಅಭಿಮಾನಿಗಳಿಗೆ ಥ್ರಿಲ್ ಆಗಿದೆ. ‘ ಇದು ಪಂದ್ಯ, ನಿಜವಾದ 360 ಯನ್ನು ಇಂದು ಭೇಟಿ ಮಾಡಿದ್ದೇನೆ. ನಮ್ಮ ಬೆಂಗಳೂರಿಗೆ ಸೂಪರ್ ಹೀರೋ ಮತ್ತೆ ಬಂದಿದ್ದಾರೆ’ ಎಂದು ರಿಷಬ್ ಶೆಟ್ಟಿ ಈ ವಿಡಿಯೋಗೆ ಕ್ಯಾಪ್ಶನ್ ನೀಡಿದ್ದಾರೆ. ಅಭಿಮಾನಿಗಳು ಫುಲ್ ಖುಷಿಯಿಂದ ಕಮೆಂಟ್ ಮಾಡಿದ್ದು ‘ರಿಷಬ್ ಶೆಟ್ಟಿ ಮತ್ತು ಎಬಿ ಡಿವಿಲಿಯರ್ಸ್ ಇಬ್ಬರೂ ಕೂಡ ಕ್ಲೈಮ್ಯಾಕ್ಸ್ ತಜ್ಞರು. ಕೊನೆಯ 20 ನಿಮಿಷದಲ್ಲಿ ಸಖತ್ ಥ್ರಿಲ್ ನೀಡುತ್ತಾರೆ.’ ಎಂದು ಫ್ಯಾನ್ಸ್ ಹೊಗಳಿದ್ದಾರೆ. ಆರ್ ಸಿಬಿ ಪರವಾಗಿ 10 ಆವೃತ್ತಿಗಳಲ್ಲಿ ಐಪಿಎಲ್ ಆಡಿರುವ ಅವರು ಬೆಂಗಳೂರಿನಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. 2021ರಲ್ಲಿ ಅವರ ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದಾಗ ಅಭಿಮಾನಿಗಳಿಗೆ ಬೇಸರವನ್ನುಂಟುಮಾಡಿತ್ತು.
ಈ ವರ್ಷದ ಐಪಿಎಲ್ ಹರಾಜಿಗೂ ಮುನ್ನ ಎಬಿ ಡಿವಿಲಿಯರ್ಸ್ ಬೆಂಗಳೂರಿಗೆ ಬಂದಿದ್ದಾರೆ. ಅವರನ್ನು ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡ ಗ್ರ್ಯಾಂಡಾಗಿ ಬರಮಾಡಿಕೊಂಡಿದೆ.
ಕಾಂತಾರ ಸಿನಿಮಾ ಯಶಸ್ಸಿನ ಬೆನ್ನಲ್ಲೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ ದಂಪತಿ
ಕಾಂತಾರ ಸಿನಿಮಾದ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿದ ಯುವತಿಯಿಂದ ತಪ್ಪೊಪ್ಪಿಗೆ