ಬೆಂಗಳೂರು: ಬೆಂಗಳೂರು ಮೆಟ್ರೋ 2025ರಷ್ಟರಲ್ಲಿ 175 ಕಿಮೀ ಸಂಪರ್ಕವನ್ನು ಹೊಂದಲಿದೆ ಎರಡನೇ ಮತ್ತು ಮೂರನೇ ಹಂತದ ಮೆಟ್ರೋ ಯೋಜನೆಗಳು ನಗರದಾದ್ಯಂತ ಮೆಟ್ರೋ ಸಂಪರ್ಕವನ್ನು ಹೊಂದುವ ಗುರಿಯನ್ನಿಟ್ಟುಕೊಂಡಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಶುಕ್ರವಾರ ಹೇಳಿದರು. ಇತ್ತಿಚೆಗೆ ನಡೆದ ಟೆಕ್ ಶೃಂಗಸಭೆಯಲ್ಲಿ ಮಾತನಾಡಿದರು. ಜೂನ್ 2025ರ ವೇಳಗೆ ಬೆಂಗಳೂರು ಮೆಟ್ರೋ 175 ಕಿಮೀ ಸಂಪರ್ಕವನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ವೋಟರ್ ಐಡಿ ಅಕ್ರಮ ವಿಚಾರ : ಚಿಲುಮೆ ಮುಖ್ಯಸ್ಥ ರವಿಕುಮಾರ್ ಪತ್ನಿ, ಕೃಷ್ಣೇಗೌಡ ಪತ್ನಿ ಪೊಲೀಸರ ವಶ
ಎರಡನೇ ಮತ್ತು ಮೂರನೇ ಹಂತದ ಮೆಟ್ರೋ ಯೋಜನೆಗಳು 2041ರ ವೇಳೆಗೆ ಬೆಂಗಳೂರು 314 ಕಿಮೀ ಮೆಟ್ರೋ ರೈಲು ಸಂಪರ್ಕ ಹೊಂದುವ ಗುರಿಯನ್ನಿಟ್ಟುಕೊಂಡಿದೆ. ಬೆಂಗಳೂರು ದೇವನಹಳ್ಳಿ ಪ್ರದೇಶದಲ್ಲಿ ಲೈನ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದು ಪೂರ್ಣವಾದ ನಂತರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದು ಸಂಪರ್ಕಿಸುತ್ತದೆ ಎಂದು ಹೇಳಿದ್ದಾರೆ. ನಗರದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು ಇದನ್ನು ಕಡಿಮೆ ಮಾಡಲು ಮತ್ತು ಮೆಟ್ರೋದಿಂದ ತಮ್ಮ ನಗರಗಳಿಗೆ ಪ್ರಯಾಣಿಸಲು ಸಾರಿಗೆ ವ್ಯವಸ್ಥೆಗಳನ್ನು ಪೂರಕವಾಗಿ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದ ರೈತರು ಶ್ರೀಗಂಧ ಬೆಳೆಯಲು ಇನ್ನು ನಿರ್ಬಂಧವಿಲ್ಲ: ಶ್ರೀಗಂಧ ನೀತಿಗೆ ಸಚಿವ ಸಂಪುಟ ಸಮ್ಮತಿ