Bengaluru News: ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನವಾಗಿದೆ. ಅನೆಕಲ್ ತಾಲೂಕಿನ ಜಿಗಣಿಯಲ್ಲಿದ್ದ ಶಂಕಿತ ಉಗ್ರನನ್ನು ಅಸ್ಸಾಂ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಗಿರೀಶ್ ಬೋರಾ ಅಲಿಯಾಸ್ ಗೌತಮ್ ಬಂಧಿತ ಆರೋಪಿಯಾಗಿದ್ದು, ಉಲ್ಫಾ ಸಂಘಟನೆಗೆ ಸೇರಿದ ಉಗ್ರ ಅಂತಾ ಅಂದಾಜಿಸಲಾಗಿದೆ. ಗುವಾಹಟಿಯಲ್ಲಿ 5 ಐಇಡಿ ಬಾಂಬ್ ಇಟ್ಟು, ಕುಟುಂಬ ಸಮೇತನಾಗಿ ಬೆಂಗಳೂರಿಗೆ ಬಂದು, ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದ.
ಗುವಾಹಟಿಯಲ್ಲಿ ಈತ ಗಿರೀಶ್ ಬೋರಾ ಎಂದು ಕರೆಯಲ್ಪಡುತ್ತಿದ್ದು, ಬೆಂಗಳೂರಿಗೆ ಬಂದ ಬಳಿಕ ಗೌತಮ್ ಎಂದು ಹೆಸರು ಬದಲಾಯಿಸಿಕೊಂಡಿದ್ದ. ಹೀಗಾಗಿ ಈತನನ್ನು ಹುಡುಕಿಕೊಂಡೇ, ಬೆಂಗಳೂರಿಗೆ ಬಂದಿದ್ದ ಅಸ್ಸಾಂ ಎನ್ಐಎ ಅಧಿಕಾರಿಗಳು, ಜಿಗಣಿಯಲ್ಲಿ ವಾಸವಿದ್ದ ಗೌತಮ್‌ನನ್ನು ಅರೆಸ್ಟ್ ಮಾಡಿದ್ದಾರೆ. ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಅಸ್ಸಾಂಗೆ ಕರೆದೊಯ್ದಿದ್ದಾರೆ.




