Tuesday, August 5, 2025

Latest Posts

BENGALURU: ಪೋಸ್ಟರ್ ಅಂಟಿಸಿ ಸೌಂದರ್ಯಕ್ಕೆ ಧಕ್ಕೆ CT ರವಿ & ಛಲವಾದಿ ವಿರುದ್ಧ FIR

- Advertisement -

ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್‌ ಅಂಟಿಸಿ ನಗರದ ಸೌಂದರ್ಯಕ್ಕೆ ಧಕ್ಕೆ ತಂದ ಆರೋಪದಡಿ ಬಿಜೆಪಿಯ 13 ಮುಖಂಡರ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯರಾದ ಸಿ.ಟಿ.ರವಿ, ಎನ್‌.ರವಿಕುಮಾರ್, ಮುಖಂಡರಾದ ಉಮೇಶ್‌ ಶೆಟ್ಟಿ, ಶಿವಕುಮಾರ್‌, ಹರ್ಷ ಹೆಗ್ಡೆ, ವೆಂಕಟ್‌, ಕರುಣಾಕರ್‌, ನಾಗೇಶ್‌, ಪ್ರಶಾಂತ್‌, ಯದುವೀರ್‌, ರಾಜೇಂದ್ರ ಮೂರ್ತಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪಿಎಸ್‌ಐ ಶಶಿಧರ್‌ ವಣ್ಣೂರು ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ರೇಸ್‌ಕೋರ್ಸ್‌ ರಸ್ತೆಯ ಮಾಧವನಗರ ಜಂಕ್ಷನ್‌ನಲ್ಲಿ ಮಂಗಳವಾರ ಛಲವಾದಿ ನಾರಾಯಣ ಸ್ವಾಮಿ ಅವರ ನೇತೃತ್ವದಲ್ಲಿ 10ರಿಂದ 12 ಮಂದಿ ಗುಂಪುಗೂಡಿಕೊಂಡು, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವಂತೆ ಜಮಾವಣೆಗೊಂಡಿದ್ದರು. ಅಲ್ಲದೇ ಪ್ರಿಯಾಂಕ್‌ ಖರ್ಗೆ ರಾಜೀನಾಮೆ ನೀಡಿ ಎಂದು ಆಗ್ರಹಿಸುತ್ತಾ, ‘ಸೂಸೈಡ್‌, ಸುಪಾರಿ ಭಾಗ್ಯ ನೀಡಿದ ಸರ್ಕಾರಕ್ಕೆ ಧಿಕ್ಕಾರ’ ಎಂಬ ಪೋಸ್ಟರ್‌ಗಳನ್ನು ನಗರದ ಸೌಂದರ್ಯಕ್ಕೆ ಧಕ್ಕೆ ಆಗುವಂತೆ ಅಂಟಿಸಿರುವುದು ಕಂಡುಬಂದಿತ್ತು. ಸ್ಥಳದಲ್ಲಿದ್ದ ಮುಖಂಡರಿಗೆ ಪೋಸ್ಟರ್‌ ಅಂಟಿಸದಂತೆ ತಿಳಿವಳಿಕೆ ನೀಡಲಾಗಿತ್ತು. ಆದರೂ ಅವರು ಪೋಸ್ಟರ್ ಅಂಟಿಸುವ ಕೆಲಸ ಮುಂದುವರಿಸಿದ್ದರು. ತಕ್ಷಣವೇ ಅವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಸಾರ್ವಜನಿಕ ಸ್ವತ್ತಿಗೆ ಹಾನಿ ಮಾಡುವ ಉದ್ದೇಶದಿಂದ ಪೋಸ್ಟರ್ ಅಂಟಿಸಲಾಗಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ದೂರು ನೀಡಲಾಗಿದೆ. ಆ ದೂರು ಆಧರಿಸಿ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ’ ಅಂತ ಪೊಲೀಸರು ತಿಳಿಸಿದ್ದಾರೆ.

- Advertisement -

Latest Posts

Don't Miss