ಬೆಂಗಳೂರು: ನೈಋತ್ಯ ರೈಲ್ವೆ ವಿಭಾಗದಿಂದ ಅಂತರರಾಷ್ಟ್ರೀಯ ಯೋಗ ದಿನ ಆಚರಣೆ

ಬೆಂಗಳೂರು: ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಇಂದು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿತು. ಈ ಕಾರ್ಯಕ್ರಮದ ಅಂಗವಾಗಿ, ಯೋಗ ಶಿಬಿರವನ್ನು ರೈಲ್ವೆ ಮೈದಾನದಲ್ಲಿ, ಮಹಾತ್ಮ ಗಾಂಧಿ ರೈಲ್ವೆ ಕಾಲೋನಿ, ಬೆಂಗಳೂರು – 560 023 ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಶ್ಯಾಮ್ ಸಿಂಗ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಕುಸುಮಾ ಹರಿಪ್ರಸಾದ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ನಿರ್ವಾಹಕರು), ಅಮನ್ ದೀಪ್ ಕಪೂರ್ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಕಾರ್ಯಾಚರಣೆಗಳು), ಶ್ರೀ ಲಕ್ಷ್ಮಣ್ ಸಿಂಗ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಆಡಳಿತ), ಹಾಗೂ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗಾಸನ ಪ್ರದರ್ಶಿಸಿದರು.

ಜೂನ್ 21, ಡಿಸೆಂಬರ್ 2014 ರಲ್ಲಿ ವಿಶ್ವ ಸಂಸ್ಥೆಯ ಘೋಷಣೆಯ ಪ್ರಕಾರ ವಿಶ್ವದ ಹಲವು ಭಾಗಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆಯು ಜೂನ್ 21 ದಿನವನ್ನು ಅಂತರರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಿದೆ ಏಕೆಂದರೆ ಇದು ವರ್ಷದ ಸುದೀರ್ಘ ದಿನವಾಗಿದೆ ಮತ್ತು ಅನೇಕ ದೇಶಗಳಲ್ಲಿ ಇದನ್ನು ಪ್ರಮುಖವೆಂದು ಪರಿಗಣಿಸಲಾಗಿದೆ.

ವಿಶ್ವಸಂಸ್ಥೆಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕುರಿತು ಪ್ರಸ್ತಾಪಿಸಿದ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಮೈಸೂರಿನಲ್ಲಿಂದು ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಜನರನ್ನು ಮುನ್ನಡೆಸಿದರು.

ಇದಕ್ಕೆ ಅನುಗುಣವಾಗಿ, ರೈಲ್ವೆ ತನ್ನ ಕಚೇರಿಗಳು, ಕಾರ್ಯಾಗಾರ ಮತ್ತು ಇತರ ಘಟಕಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಿತು.

About The Author