Saturday, July 5, 2025

Latest Posts

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ : ಪತಿಯೇ ಕೊಂದಿರುವ ಶಂಕೆ

- Advertisement -

ಬೆಂಗಳೂರು: ನೇಣುಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿದ್ದು, ಕುಟುಂಬದವರೆ ಕೊಲೆ ಮಾಡಿರುವ ಶಂಕೆ ಇದೆ. ಸುದ್ದಗುಂಟೆಪಾಳ್ಯದ ಗುರಪ್ಪನಪಾಳ್ಯದ ಮನೆಯೊಂದರಲ್ಲಿ ಘಟನೆ ನಡೆದಿದೆ. ಕತೀಜಾ ಕೊಬ್ರ (29) ಮೃತ ಗೃಹಿಣಿ. ಪತಿ ಮೆಹಬೂಬ್ ಪತ್ನಿಯನ್ನು ಕೊಂದಿದ್ದಾನೆಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಮೆಹಬೂಬ್ ಪರೀಷ್, ಮಾವ ಮತ್ತು ನಾದಿನಿಯನ್ನು ಸುದ್ದಗುಂಟೆಪಾಳ್ಯ ಪೊಲೀಸರು ವಶಪಡೆಸಿಕೊಂಡಿದ್ದಾರೆ. ಮೃತ ಗೃಹಿಣಿ ತಂದೆ ಘಟನೆ ಕುರಿತು ಮಾತನಾಡಿ ಮದುವೆಯಾದಗಿನಿಂದ ಪತ್ನಿ ಜೊತೆ ಜಗಳವಾಡುತ್ತಿದ್ದ, ಅಳಿಯನಿಗೆ ಬೇರೆ ಯುವತಿಯೊಂದಿಗೆ ಸಂಬಂಧವಿದೆ ಹಾಗಾಗಿ ಅವನೇ ನನ್ನ ಮಗಳನ್ನು ಕೊಂದಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ಪತಿಗೆ ಶಿಕ್ಷೆಯಾಗಬೇಕು ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ರಟ್ಟಿನ ಡಬ್ಬಿಯಲ್ಲಿಟ್ಟಿದ್ದ ಹಸುಗೂಸನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿ

ನಾರದರಿಂದ ಶ್ರೀವಿಷ್ಣು ಮಾಡಿದ ಅವಮಾನಕ್ಕೆ ಸಿಕ್ಕ ಶಾಪವೆಂಥದ್ದು ಗೊತ್ತೇ..?

ನಿಮಗೆ ಎಷ್ಟೇ ಶ್ರೀಮಂತಿಕೆ ಇದ್ದರೂ ಈ 4 ಗುಣವನ್ನು ಮಕ್ಕಳಿಗೆ ಹೇಳಿಕೊಡಿ..

- Advertisement -

Latest Posts

Don't Miss