ಬೆಂಕಿಯ ಬಲೆ, ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಸಿನಿಮಾ.. ಅನಂತ್ ನಾಗ್ ಹಾಗೂ ಲಕ್ಷ್ಮೀ ಜೋಡಿಯಾಗಿ ನಟಿಸಿದ ಆ ಚಿತ್ರವನ್ನ ಯಾರ್ ತಾನೇ ಮರೆಯೋಕೆ ಸಾಧ್ಯ.. ಇದೀಗ ಸ್ಯಾಂಡಲ್ ವುಡ್ ನಲ್ಲಿ ಮತ್ತೊಮ್ಮೆ ಅದೇ ಟೈಟಲ್ ನ್ನಿಟ್ಕೊಂಡು, ವಿಭಿನ್ನ ಲವ್ ಸ್ಟೋರಿ ಹೇಳಲು ಹೊರಟಿದೆ ಹೊಸಬರ ಚಿತ್ರತಂಡ.. ಶಿವಾಜಿ ಮೈಸೂರು ಅನ್ನುವ ನವನಿರ್ದೇಶಕರು ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.. ಇದು ಅವರ ನಿರ್ದೇಶನದ ಮೊದಲ ಸಿನಿಮಾ.. ಕ್ಯಾನ್ಸರ್ ರೋಗ ಪೀಡಿತ ತಮ್ಮ ತಾಯಿಯನ್ನ ಕಳೆದುಕೊಂಡು ಜೀವನದಲ್ಲಿ ಹೆಚ್ಚು ನೊಂದಿರುವ ಶಿವಾಜಿ ಮೈಸೂರು ಅವರು ಒಂದೊಳ್ಳೆ ಉದ್ದೇಶವನ್ನಿಟ್ಕೊಂಡು ಈ ಚಿತ್ರವನ್ನ ಮಾಡಿದ್ದಾರೆ..
ಅಂದಹಾಗೆ ಬೆಂಕಿಯ ಬಲೆ ಅನ್ನುವ ಟೈಟಲ್ ಗೆ ಪ್ರೀತಿಯ ಕೊಲೆ ಅನ್ನು ಸಬ್ ಟೈಟಲ್ ಕೂಡ ಇದೆ.. ವಿಶೇಷ ಅಂದ್ರೆ ಪ್ರೀತಿ, ಪ್ರೇಮದ ಕಥೆಯ ಜೊತೆಗೆ ಹೆಣ್ಣಿನ ಶೋಷಣೆ, ಕ್ಯಾನ್ಸರ್ ರೋಗಿಯೊಬ್ಬನ ವ್ಯಥೆ ಹೀಗೆ ಹಲವಾರು ಎಳೆಗಳನ್ನಿಟ್ಕೊಂಡು ಸಿನಿಮಾ ಮಾಡಿದ್ದಾರಂತೆ ನಿರ್ದೇಶಕರು.. ಇದೊಂದು ಗ್ರಾಮೀಣ ಭಾಗದಲ್ಲಿ ನಡೆಯುವಂತಹ ಕಥೆಯಾಗಿದ್ದು, ಶಿವಾಜಿ ಮೈಸೂರು ಅವರು ತಮ್ಮ ಕನಸುಗಳನ್ನ ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ.. ಇನ್ನೂ ಈ ಚಿತ್ರದಲ್ಲಿ ಇಬ್ಬರು ನಾಯಕರಿದ್ದಾರೆ.. ನಟರಾದ ನಿರಂಜನ್ ಹಾಗೂ ಸಲ್ಮಾನ್ ಇಬ್ಬರು ಚಿತ್ರದ ನಾಯಕರ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.. ಈ ನಟರಿಗೂ ಕೂಡ ಇದು ಮೊದಲ ಸಿನಿಮಾ.. ಚಿತ್ರದಲ್ಲಿ ಇಬ್ಬರೂ ನಾಯಕಿಯರೂ ಸಹ ಇದ್ದಾರೆ.. ನಟಿಯರಾದ ಪ್ರೀತಿ ಎಶು ಹಾಗೂ ಪವಿತ್ರ ನಾಯಕಿಯರ ಪಾತ್ರಗಳಲ್ಲಿ ನಟಿಸಿದ್ದಾರೆ..
ಶಿವಾಜಿ ಮೈಸೂರು ಅವರು ಈ ಚಿತ್ರವನ್ನ ನಿರ್ದೇಶನ ಮಾಡೋದ್ರ ಜೊತೆಗೆ ಈ ಚಿತ್ರದಲ್ಲಿ ವಿಲನ್ ರೋಲ್ ನಲ್ಲಿ ನಟಿಸಿದ್ದಾರೆ.. ಜೊತೆಗೆ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನೂ ಶಿವಾಜಿ ಅವರೇ ಹೊತ್ತಿದ್ದಾರೆ.. ನಟ ಮಿರ್ಲೆ ಮಂಜು ಅವರು ಈ ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರೆ.. ಶಿವಾಜಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿಬರ್ತಿದೆ.. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳು ಹಾಗೂ ಮೂರು ಫೈಟ್ಸ್ ಇದ್ಯಂತೆ.. ಅತಿಶಯ ಜೈನ್ ಅವರು ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.. ಸುಮಾರು ಮೂರು ವರ್ಷಗಳು ಈ ಚಿತ್ರವನ್ನ ಚಿತ್ರೀಕರಣ ಮಾಡಲಾಗಿದ್ಯಂತೆ.. ಸದ್ಯ ಚಿತ್ರೀಕರಣವನ್ನ ಕಂಪ್ಲೀಟ್ ಮಾಡಿಕೊಂಡಿರುವ ಚಿತ್ರತಂಡ, ಚಿತ್ರಮಂದಿರಗಳು ರೀಓಪನ್ ಆದ ಕೂಡ್ಲೇ ಚಿತ್ರವನ್ನ ರಿಲೀಸ್ ಮಾಡಲು ತಯಾರಿ ನಡೆಸಿದೆ.. ಇನ್ನೂ ಈ ಚಿತ್ರಕ್ಕೆ ಮಹಿಳೆಯರಿಗೆ ಉಚಿತ ಪ್ರವೇಶವಿದ್ಯಂತೆ.. ಅಲ್ಲದೆ ಈ ಸಿನಿಮಾದಿಂದ ಬರುವ ಹಣವನ್ನ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಕೊಟ್ಟು ಸಹಾಯ ಮಾಡುವ ಸದುದ್ದೇಶವನ್ನ ಹೊಂದಿದೆ ಚಿತ್ರತಂಡ.. ಚಿತ್ರಮಂದಿರಗಳು ರೀಓಪನ್ ಆದ ಕೂಡ್ಲೇ ಬೆಂಕಿಯ ಬಲೆ ಚಿತ್ರವನ್ನ ಥಿಯೇಟರ್ ಗಳಲ್ಲಿ ನೀವು ವೀಕ್ಷಿಸಬಹುದು..
ಚಂದನ.ಎಸ್, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ

