ಬೆಂಗಳೂರು: ಬೆಸ್ಕಾಂ ವಿದ್ಯುತ್ ಬಿಲ್ ಪಾವತಿಸಲು ವಿಳಂಬ ಮಾಡಿದಲ್ಲಿ ದೊಡ್ಡ ಶಾಕ್ ಕಾದಿರುತ್ತದೆ. ಎಷ್ಟೋ ಜನರು ವಿದ್ಯುತ್ ಬಿಲ್ ಅದೇ ತಿಂಗಳು ಕಟ್ಟುವುದನ್ನು ನಿರ್ಲಕ್ಷ್ಯ ಮಾಡಿ ಮುಂದಿನ ತಿಂಗಳು ಕಟ್ಟಿದರಾಯಿತು ಎಂದು ಯೋಚಿಸುತ್ತಿದ್ದರೆ ಅಂತಹವರಿಗೆ ಬೆಸ್ಕಾಂ ಬಿಗ್ ಶಾಕ್ ನೀಡಿದೆ. ಇನ್ಮುಂದೆ ವಿದ್ಯುತ್ ಬಿಲ್ ತಿಗಳಿಗೆ ಸರಿಯಾಗಿ ಪಾವತಿಸದಿದ್ದಲ್ಲಿ ಬೆಸ್ಕಾಂ ಮನೆಯ ವಿದ್ಯುತ್ ಸಂಪರ್ಕದ ಲೈಸನ್ಸ್ ಅನ್ನು ರದ್ದು ಮಾಡುತ್ತದೆ.
ಇದು ನೀವು ಬಿಡಬೇಕಾದ 17 ಕೆಟ್ಟ ಚಟಗಳು.. ಭಾಗ 2
3 ತಿಂಗಳು ಕಾಲ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದಾದರೆ ಮನೆಯ ವಿದ್ಯುತ್ ಸಂಪರ್ಕದ ಲೈಸನ್ಸ್ ಅನ್ನು ರದ್ದು ಮಾಡುತ್ತದೆ. ವಿದ್ಯುತ್ ಸಂಪರ್ಕ ರದ್ದು ಗೊಂಡರೆ ಮತ್ತೆ ಹೊಸ ಅರ್ಜಿ ಸಲ್ಲಿಸಿ ವಿದ್ಯುತ್ ಸಂಪರ್ಕ ಪಡೆಯಬೇಕು. ಬೆಸ್ಕಾಂನ ಈ ಯೋಜನೆಯಿಂದ ಗ್ರಾಹಕರಿಗೆ ಆತಂಕ ಶುರುವಾಗಬಹುದು. ಆದರೆ ತಿಂಗಳಿಗೆ ಸರಿಯಾಗಿ ಬಿಲ್ ಪಾವತಿಸಿದ್ದವರ ವಿರುದ್ಧ ಈ ಕ್ರಮ ತೆಗೆದುಕೊಳ್ಳಲಾಗುವುದೆಂದು ಬೆಸ್ಕಾಂ ಎಂ.ಡಿ ಮಹಾಂತೇಶ್ ಬೀಳಗಿ ಟ್ವೀಟ್ ಮೂಲಕ ಗ್ರಾಹಕರಿಗೆ ಎಚ್ಚರಿಸಿದ್ದಾರೆ.
‘ಸಿದ್ದರಾಮಯ್ಯನವರ ಕೋಲಾರ ಪ್ರವಾಸದ ಪಟಾಕಿ ಸಿಡಿಯುವ ಬದಲು ಟುಸ್ ಆಗಿದೆ’
ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿಗೆ ಗೌರವ ಡಾಕ್ಟರೇಟ್ ಪ್ರದಾನ