Thursday, November 21, 2024

Latest Posts

ಗಾರ್ಡನ್ ಸಿಟಿ ಯುನಿವರ್ಸಿಟಿಯ ಬಗ್ಗೆ ಅತ್ಯುತ್ತಮ ಮಾಹಿತಿ: ವಿಶೇಷ ಸಂದರ್ಶನ

- Advertisement -

Special Story: ಬೆಂಗಳೂರಿನಲ್ಲಿರುವ ಅತ್ಯುತ್ತಮ ಯುನಿವರ್ಸಿಟಿಯಲ್ಲಿ ಗಾರ್ಡನ್ ಸಿಟಿ ಯುನಿವರ್ಸಿಟಿ ಕೂಡ ಒಂದು. ಡಾ.ಜೋಸೆಫ್ ವಿ.ಜಿ ಎಂಬುವವರು ಈ ವಿಶ್ವವಿದ್ಯಾಲಯವನ್ನು ಕಟ್ಟಿಸಿದ್ದು, ಇಲ್ಲಿ ಸಾವಿರಾರು ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಕರ್ನಾಟಕ ಟಿವಿಯಲ್ಲಿ ಪ್ರಸಾರವಾಗುವ ದಾರಿದೀಪ ಕಾರ್ಯಕ್‌ರಮದಲ್ಲಿ ಮಾತನಾಡಿರುವ ಡಾ.ಜೋಸೆಫ್ ಅವರು, ತಮ್ಮ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ.

1982, ಫೆಬ್ರವರಿ 27ಕ್ಕೆ ಜೊಸೆಫ್ ಅವರು ಕಂಪ್ಯೂಟರ್ ಇನ್‌ಸ್ಟಿಟ್ಯೂಟ್ ಮಾಡಿದರು. ಎಲ್ಲರಿಗೂ ಜೀವನ ನಡೆಸಲು ಹೇಗೆ ಒಂದು ದುಡಿಮೆ ಇರಬೇಕೋ, ಅದೇ ರೀತಿ, ಜೊಸೆಫ್ ಅವರು ಕೂಡ, ತನ್ನ ಜೀವನ ನಡೆಸಲು, ಕಂಪ್ಯೂಟರ್ ಇನ್‌ಸ್ಟಿಟ್ಯೂಟ್ ಆರಂಭಿಸಿದರು. ಕೆಲ ತಿಂಗಳ ಕಾಲ ಈ ಇನ್‌ಸ್ಟಿಟ್ಯೂಟ್ ಚೆನ್ನಾಗಿ ನಡೆಯಿತು. ಆದರೆ ಅದಾದ ಬಳಿಕ, ಬರೀ ಇದಕ್ಕಾಗಿಯೇ ತಾನು ಜೀವನ ಮಾಡಬಾರದು. ಸಂಸ್ಥೆಯನ್ನು ಇನ್ನೂ ಚೆನ್ನಾಗಿ ಅಭಿವೃದ್ಧಿ ಮಾಡಬೇಕು. ಇದಕ್ಕಾಗಿ ನನ್ನ ಜೀವನವನ್ನು ಮುಡಿಪಾಗಿಡಬೇಕೆಂದು ಜೊಸೆಫ್ ನಿರ್ಧರಿಸಿದರು.

ಅದಾದ ಬಳಿಕ ಅವರ ಪರಿಶ್ರಮದ ಫಲವೇ, ಗಾರ್ಡನ್ ಸಿಟಿ ಯುನಿವರ್ಸಿಟಿ. ಇಲ್ಲಿ ಬರೀ ಭಾರತದ ವಿದ್ಯಾರ್ಥಿಗಳಷ್ಟೇ ಅಲ್ಲ. ಬದಲಾಗಿ, ಬೇರೆ ಬೇರೆ ದೇಶದ ವಿದ್ಯಾರ್ಥಿಗಳು ಕೂಡ, ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ.

ವಿಶೇಷ ಅಂದ್ರೆ, ಇಲ್ಲಿ ಹಳೆಯ ರೀತಿಯಲ್ಲಿ ವಿದ್ಯಾಭ್ಯಾಸ ಹೇಳಿಕೊಡುವುದಿಲ್ಲ. ಬದಲಾಗಿ ಮಾಡರ್ನ್ ಸ್ಟೈಲ್‌ನಲ್ಲಿಯೇ ಶಿಕ್ಷಣ ವ್ಯವಸ್ಥೆ ಇದೆ. ಅಲ್ಲದೇ, ನೀವು ಈ ಕಾಲೇಜಿನಲ್ಲಿ ನಟನಾ ತರಬೇತಿ ಕೂಡ ನೀಡಲಾಗುತ್ತದೆ. ನಟನೆಯಲ್ಲಿ ಕೂಡ ವಿದ್ಯಾರ್ಥಿಗಳು ಇಲ್ಲಿ, ಗ್ರ್ಯಾಜುಯೇಟ್ ಆಗಬಹುದು.

ಇಲ್ಲಿ ಯಾವುದೇ ಕೋರ್ಸ್ ಇದ್ದರೂ, 6 ತಿಂಗಳಿಗೊಮ್ಮೆ ಅದನ್ನು ಅಪ್ಡೇಟ್ ಮಾಡಲಾಗುತ್ತದೆ. ಏಕೆಂದರೆ, ಜೊಸೇಫ್ ಅವರು ಬೇರೆ ಬೇರೆ ದೇಶಗಳಿಗೆ ಹೋಗಿ, ಅಲ್ಲಿನ ಯುನಿವರ್ಸಿಟಿಗಳಿಗೆ ಭೇಟಿ ನೀಡಿ, ಅಲ್ಲಿ ಯಾವ ರೀತಿ ಶಿಕ್ಷಣ ಕೊಡಿಸಲಾಗುತ್ತಿದೆ ಎಂದು ತಿಲಿದುಕೊಳ್ಳುತ್ತಾರೆ. ಮತ್ತು ತಮ್ಮ ಕಾಲೇಜಿನಲ್ಲಿ ಯಾವ ರೀತಿ ಅದನ್ನು ಕಾರ್ಯಗತ ಮಾಡಬಹುದು ಎಂಬ ಬಗ್ಗೆ ಯೋಚಿಸುತ್ತಾರೆ. ಹಾಗಾಗಿಯೇ ಗಾರ್ಡೆನ್ ಸಿಟಿ ಯುನಿವರ್ಸಿಟಿ, ವಿದೇಶಿ ವಿಶ್ವವಿದ್ಯಾಲಯಗಳಿಗೆ ಸಮವಾಗಿದೆ. ಈ ಬಗ್ಗೆ ಇನ್ನೂ ತಿಳಿದುಕೊಳ್ಳಲು ಸಂದರ್ಶನದ ವೀಡಿಯೋ ನೋಡಬಹುದು.

- Advertisement -

Latest Posts

Don't Miss