ಸಿದ್ಧಾರೂಢರ ತೆಪ್ಪೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ: ಎಲ್ಲೆಡೆಯೂ ಓಂಕಾರ ನಾದ…!

Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಆರಾಧ್ಯದೈವ ಎಂದೇ ನಾಮಾಂಕಿತರಾದ ಸದ್ಗುರು ಸಿದ್ಧಾರೂಢರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಾಗೂ ಸಿದ್ಧಾರೂಢ ಸ್ವಾಮೀಜಿಯವರ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ತೆಪ್ಪೋತ್ಸವ ಅದ್ದೂರಿಯಾಗಿ ಜರುಗಿದೆ. ಎಲ್ಲೆಡೆಯೂ ಓಂಕಾರ ನಾದದಿಂದ ಸಿದ್ಧಾರೂಢರ ಮಠದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಸದ್ಗುರು ಸಿದ್ಧಾರೂಢರ 95ನೇ ವರ್ಷದ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ತೆಪ್ಪೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ಮೂಲಕ ಸಿದ್ದರೂಢ ಶ್ರೀಗಳ ಕೃಪೆಗೆ ಪಾತ್ರರಾದರು. ಹೌದು.. ನಗರದ ಸಿದ್ಧಾರೂಢರ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಟ್ರಸ್ಟ್ ಕಮಿಟಿ ಆಶ್ರಯದಲ್ಲಿ ನಡೆದ ತಪ್ಪೋತ್ಸವಕ್ಕೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಸಾಕ್ಷಿಯಾದರು.

ಇನ್ನೂ ಕಣ್ಣು ಹಾಯಿಸಿದ ಕಡೆಯಲ್ಲಿ ಜನ ಸಾಗರವೇ ನೆರೆದಿತ್ತು. ಓಂ ನಮ: ಶಿವಾಯ ನಾಮಸ್ಮರಣೆಗಳು ಅನುರುಣಿಸಿದವು. ಕಲ್ಯಾಣಿಯಲ್ಲಿ ತೇರು ಐದು ಸುತ್ತ ಪ್ರದಕ್ಷಿಣೆ ಹಾಕಿತು. ಕಲ್ಯಾಣಿಯ ಸುತ್ತ ಕಿಕ್ಕಿರಿದು ಸೇರಿದ ಭಕ್ತರು ಉತ್ತತ್ತಿ, ಬಾಳೆಹಣ್ಣು, ಲಿಂಬೆಹಣ್ಣು ಎಸೆದು ಸ್ವಾಮಿ ಆಶೀರ್ವಾದ ಪಡೆದು ಕೃತಾರ್ಥರಾದರು. ರಾಜ್ಯ ಅಲ್ಲದೇ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶದಿಂದ ಆಗಮಿಸಿದ ಭಕ್ತರು ಜಲರಥೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಸಿದ್ದಾರೂಢರ ಆಶೀರ್ವಾದ ಪಡೆದುಕೊಂಡರು.

About The Author