Political news
ಇನ್ನೇನು ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ಶುರುವಾಗಲಿದ್ದು ಬಿಜೆಪಿ ಪಕ್ಷ ಮೇಲಿಂದ ಮೇಲೆ ಪ್ರಧಾನಿಗಳನ್ನು ರಾಜ್ಯಕ್ಕೆ ಕರೆಸುವ ಮೂಲಕ ಪ್ರಚಾರವನ್ನು ಚುರುಕುಗೊಳಿಸುತ್ತದೆ .ಅದೇ ರೀತಿ ಬಿಜೆಪಿಯ ಚಾಣಕ್ಯ ಅಂತ ಕರೆಸಿಕೊಳ್ಳುವ ಕೇಂದ್ರ ಗೃಹಮಂತ್ರಿಗಳಾದ ಅಮಿತ್ ಷಾ ಅವರು ಸಹ ಈಗಾಗಲೆ ಬೇಟಿ ನೀಡಿ ಅವರ ಚಾಣಾಕ್ಷತನದಿಂದ ಪ್ರಚಾರದಲ್ಲಿ ಕೊಂಚ ಬದಲಾವಣೆಗಳನ್ನು ತಂದಿದ್ದಾರೆ. ಇದರಿಂದಾಗಿ ರಾಜ್ಯದ ನಾಯಕರಲ್ಲಿ ಇನ್ನಷ್ಟು ಬಲವನ್ನು ತುಂಬಿದ್ದಾರೆ.ಅದೇ ರೀತಿ ಅವರು ತನ್ನ ಬುದ್ದಿವಂತಿಕೆಯನ್ನು ಉಪಯೋಗಿಸಿ ಇನ್ನೊಂದು ಸೂಕ್ಷತೆಯನ್ನು ಗಮನಿಸಿದ್ದಾರೆ.ಅದೇನೆಂದರೆ ಈಗಾಗಲೆ ಮುಂಚುಣೆಯಲ್ಲಿರುವ ಕಾಂಗ್ರೇಸ್ ಮತ್ತು ಜನತಾದಳದ ಟಿಕೇಟ್ ಆಕಾಂಕ್ಷಿಗಳನ್ನು ಗುರುತಿಸಿ ಅವರನ್ನು ಕರೆಮಾಡುವ ಮುಖಾಂತರ ಅಥವಾ ಇನ್ಯಾವುದರ ಮಾರ್ಗದಿದಂದ ಅವರನ್ನು ಸಂಪರ್ಕ ಮಾಡಿ ಪದೇ ಪಧೇ ಅವರಿಗೆ ಕರೆ ಮಾಡುವ ಮೂಲಕ ಅವರನ್ನು ಬಿಜೆಪಿ ಪಕ್ಷಕ್ಕೆ ಸೆಳೆಯಲು ಮುಂದಾಗಿದ್ದಾರೆ.
ಈಗಾಗಲೇ ಹಳೆ ಮೈಸೂರು ಭಾಗದ ಚಾಮಾರಾಜದ ಕಾಂಗ್ರೇಸ್ ಮಾಜಿ ಶಾಸಕ ವಾಸು ಅವರ ಪುತ್ರ ಕವೀಶ್ ಗೌಡರಿಗೆ ಅಮಿತ್ ಷಾ ಅವರು ಎರಡು ಬಾರಿ ಕರೆ ಮಾಡುವ ಮೂಲಕ ಅವರನ್ನು ಬಿಜೆಪಿಗೆ ಕರೆತರಲು ಯಶಸ್ವಿಯಾಗುತಿದ್ದಾರೆ. ಕವೀಶ್ ಗೌಡ ಬಿಜೆಪಿ ಸೇರಲು ಸಜ್ಜಾಗಿದ್ದಾರೆ.