ಸಿನಿಮಾ ಸುದ್ದಿ: ತೆಲುಗಿನ ಮೆಗಾಸ್ಟಾರ್ ಜಿರಂಜೀವಿ ನಟನೆಯ ಭೋಳಾ ಶಂಕರ ಸಿನಿಮಾ ಇದೆ ಆಗಸ್ಟ್ 11 ರಂದು ಅದ್ದೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ. ಈಗ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.ಈ ಟ್ರೇಲರ್ ಅನ್ನು ಲಕ್ಷಾಂತರ ಜನ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಣೆ ಮಾಡಿದ್ದಾರ ಟ್ರೇಲರ್ ವೀಕ್ಷಿಸಿದ ಸಿನಿರಸಿಕರಿಗೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ ಇನ್ನು ಈ ಸಿನಿಮಾದಲ್ಲಿ ನಾಯಕಿಯಾಗಿ ತಮನ್ನಾ ಬಾಟಿಯ ನಟಿಸಿದ್ದು ಕೀರ್ತಿ ಸುರೇಶ್ ನಾಯಕನ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕಳನಟನಾಗಿ ಕನ್ನಡದ ರವಿಶಂಕರ್ ನಟಿಸಿದ್ದಾರೆ
‘ನನ್ನ ಹಿಂದೆ ಮಾಫಿಯಾ ಇದೆ’ ಎಂದು ರವಿಶಂಕರ್ ಹೇಳುತ್ತಾರೆ. ‘ಮಾಫಿಯಾ ನಿನ್ನ ಹಿಂದೆ ಇದ್ದರೆ ಜಗತ್ತೇ ನನ್ನ ಹಿಂದೆ ಇದೆ’ ಎಂದು ರವಿಶಂಕರ್ ಗೆ ತಿರುಗೇಟು ನೀಡುವ ಚಿರು ಡೈಲಾಗ್ ಸಿನಿರಸಿಕರಿಗೆ ಬಹಳ ಹಿಡಿಸಿದೆ. ಸಿನಿಮಾದಲ್ಲಿ ಚಿರಂಜೀವಿ ಅವರು ಮಾಸ್ ಆ್ಯಂಡ್ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ. ವೆನ್ನೆಲ ಕಿಶೋರ್ ಕೂಡ ಟ್ರೇಲರ್ನಲ್ಲಿ ಗಮನ ಸೆಳೆದಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕ್ಲ್ಯಾಶ್ ಏರ್ಪಡುತ್ತಿದೆ. ತಮಿಳಿನಲ್ಲಿ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ರಿಲೀಸ್ (ಆಗಸ್ಟ್ 10) ಆಗಲಿದೆ. ಹಿಂದಿಯಲ್ಲಿ ಅಕ್ಷಯ್ ಕುಮಾರ್ ನಟನೆಯ ‘ಒಹ್ ಮೈ ಗಾಡ್ 2’ ಸಿನಿಮಾ ರಿಲೀಸ್ (ಆಗಸ್ಟ್ 11) ಆಗುತ್ತಿದೆ. ಇದರ ಜೊತೆಗೆ ‘ಭೋಲಾ ಶಂಕರ್’ ಕೂಡ ಸ್ಪರ್ಧೆಗೆ ಇಳಿದಿದೆ. ಎಲ್ಲಾ ಸಿನಿಮಾಗಳು ಬೇರೆಬೇರೆ ಶೈಲಿಯಲ್ಲಿ ಇದೆ.ಆಗಸ್ಟ್ ತಿಂಗಳಲ್ಲಿ ಬಹಳಷ್ಟು ಸಿನಿಮಾಗಳು ಬಿಡುಗಡೆಯ ಆಗುತ್ತಿದ್ದು ಯಾವ ಸಿನಿಮಾ ಪ್ರೇಕ್ಷಕರ ಮನಸ್ಸು ಗೆಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ.
Chamundi Hills : ಚಾಮುಂಡಿ ತಾಯಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್ ಕುಮಾರ್
Darling Krishna:ಸಿನಿಮಾ ಪ್ರಚಾರಕ್ಕೆ ಮೆಟ್ರೋ ಪ್ರಯಾಣ ಮಾಡಿದ ಡಾರ್ಲಿಂಗ್ ಕೃಷ್ಣ
Jawan: ಜವಾನ್ ಸಿನಿಮಾದ ಹಾಡಿನ ಚಿತ್ರೀಕರಣ್ಕಕ್ಕೆ ಸುರಿದ ದುಡ್ಡು ಎಷ್ಟು ಕೋಟಿ ಗೊತ್ತಾ?