Wednesday, December 18, 2024

Latest Posts

BENGALURU : ವಕೀಲೆ ಜೀವಾ ಆತ್ಮ*ಹತ್ಯೆ! SIT ತನಿಖೆಗೆ ಹೈಕೋರ್ಟ್‌ ಆದೇಶ

- Advertisement -

ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿಗಳ ಅವ್ಯವಹಾರ ಪ್ರಕರಣದ ಆರೋಪಿಯಾಗಿದ್ದ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಕೂಡಲೇ ಆರಂಭಿಸುವಂತೆ ಹೈಕೋರ್ಟ್‌ ಎಸ್‌ಐಟಿಗೆ ಮಂಗಳವಾರ ಆದೇಶಿಸಿದೆ.

ಅಲ್ಲದೆ, ಪ್ರಕರಣದ ತನಿಖೆ ಸಂಬಂಧ ಸಿಬಿಐ ಅಧಿಕಾರಿಯ ಜತೆ ಇಬ್ಬರು ಎಸ್‌.ಪಿ. ಶ್ರೇಣಿ ಪೊಲೀಸ್‌ ಅಧಿಕಾರಿಗಳನ್ನು ಎಸ್‌ಐಟಿಗೆ ನೇಮಕ ಮಾಡಿದ್ದ ತನ್ನ ಈ ಹಿಂದಿನ ಆದೇಶವನ್ನು ಹೈಕೋರ್ಟ್‌ ಸ್ಥಿರೀಕರಿಸಿದೆ.

ರಾಜ್ಯ ಪ್ರಾಸಿಕ್ಯೂಷನ್‌ ತೆಗೆದಿದ್ದ ತಕರಾರನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಮಂಗಳವಾರ ಪರಿಶೀಲಿಸಿ ‘‘ಹೈಕೋರ್ಟ್‌ ನೀಡಿರುವ ಆದೇಶವನ್ನು ಸಂಪೂರ್ಣ ಅನುಪಾಲನೆ ಮಾಡುತ್ತೇವೆಂದು ಸಿಧಿಬಿಐ ತಿಳಿಸಿರುವ ಕಾರಣ ಈ ಹಿಂದೆ ನೀಡಲಾದ ಆದೇಶದಲ್ಲಿ ಯಾವುದೇ ಮಾರ್ಪಾಡು ಮಾಡುವುದಿಲ್ಲ’’ ಅಂತ ಆದೇಶಿಸಿತು.

ಸಿಬಿಐ ಪರ ವಕೀಲ ಪಿ. ಪ್ರಸನ್ನಕುಮಾರ್‌, ‘‘ನ್ಯಾಯಪೀಠ ನೀಡಿರುವ ಆದೇಶ ಪಾಲಿಸಲು ಸಿಬಿಐ ಬದ್ಧವಾಗಿದೆ. ಆದೇಶದಲ್ಲಿ ಯಾವುದೇ ಮಾರ್ಪಾಡು ಮಾಡುವಂತೆ ನಾವು ಕೇಳುತ್ತಿಲ್ಲ. ಆದೇಶದ ಪ್ರಕಾರ ತನಿಖೆ ನಡೆಸುತ್ತೇವೆ. ಯಾರನ್ನೂ ಬದಲಾಯಿಸುವುದಿಲ್ಲ” ಅಂತ ತಿಳಿಸಿದರು. ಇದಕ್ಕೆ ಪ್ರತಿಯಾಗಿ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್‌. ಜಗದೀಶ್‌, ಸಿಬಿಐ ವಿವರಣೆ ಮತ್ತು ನ್ಯಾಯಪೀಠದ ಆದೇಶಕ್ಕೆ ಸಹಮತ ವ್ಯಕ್ತಪಡಿಸಿದರು.

 

 

ಈ ಹಿಂದೆ ಇದೇ ನ್ಯಾಯಪೀಠ ಈ ಕುರಿತಾದ ಅರ್ಜಿ ವಿಚಾರಣೆ ನಡೆಸಿ ಜೀವಾ ಆತ್ಮಹತ್ಯೆಯ ತನಿಖೆಗೆ ಎಸ್‌ಐಟಿ ರಚನೆ ಮಾಡಿ ಆದೇಶಿಸಿತ್ತು. ‘ಎಸ್‌ಐಟಿಯಲ್ಲಿ ಸಿಬಿಐನ ಎಸ್‌.ಪಿ ವಿನಾಯಕ ವರ್ಮ, ಕರ್ನಾಟಕ ಗೃಹ ರಕ್ಷಕ ದಳದ ಎಸ್‌.ಪಿ. ಹಕಾಯ ಅಕ್ಷಯ್‌ ಮಚೀಂದ್ರ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್‌.ಪಿ. ನಿಶಾ ಜೇಮ್ಸ್‌ ಸದಸ್ಯರಾಗಿ ಇರುತ್ತಾರೆ, ’ಧಿ’ ಅಂತ ನ್ಯಾಯಪೀಠ ತಿಳಿಸಿತ್ತು.

ಈ ಆದೇಶದ ಬಗ್ಗೆ ರಾಜ್ಯ ಪ್ರಾಸಿಕ್ಯೂಷನ್‌ ವಿವರಣೆ ಬಯಸಿ ತಕರಾರು ವ್ಯಕ್ತಪಡಿಸಿತ್ತು. ‘ತಂಡದ ಮೂವರೂ ಅಧಿಕಾರಿಗಳು ಎಸ್‌.ಪಿ ಕೇಡರ್‌ ಅಧಿಕಾರಿಗಳಾಗಿದ್ದು, ಒಬ್ಬರು ಮತ್ತೊಬ್ಬರ ಅಧೀನದಲ್ಲಿಕೆಲಸ ಮಾಡುವುದು ಹೇಗೆ’ ಎಂದು ಪ್ರಶ್ನಿಸಿತ್ತು. ಅಂತೆಯೇ, ‘ತಂಡಕ್ಕೆ ಡಿಜಿ ಅಥವಾ ಡಿಐಜಿ ದರ್ಜೆ ಅಧಿಕಾರಿಯನ್ನು ನಿಯುಕ್ತಿಗೊಳಿಸಬೇಕು’ ಅಂತ ಮನವಿ ಮಾಡಿತ್ತು.

ಅದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ‘‘ಯಾವ ಅಧಿಕಾರಿಯೂ ಮತ್ತೊಬ್ಬರ ಅಧೀನದಲ್ಲಿಕೆಲಸ ಮಾಡುವುದಿಲ್ಲ. ಇದೇನೂ ತಿರುಪತಿ ಲಡ್ಡು ವಿವಾದದಷ್ಟು ದೊಡ್ಡ ಪ್ರಕರಣವಲ್ಲ. ಆ ಪ್ರಕರಣದಲ್ಲಿಐಜಿಯನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿತ್ತೆಂದರೆ ಅದರಲ್ಲಿಅಂತಹ ಅವಶ್ಯಕತೆ ಕಾಣುತ್ತಿಲ್ಲ. ಮೂವರು ಎಸ್‌.ಪಿ.ಗಳೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಾರೆ. ತಾರತಮ್ಯದ ಭಾವನೆ ಉದ್ಭವವಾಗವುದಿಲ್ಲ. ಹೀಗಾಗಿ, ಕೂಡಲೇ ತನಿಖೆ ಆರಂಭಿಸಬೇಕು ’ ಅಂತ ತಾಕೀತು ಮಾಡಿತು.

- Advertisement -

Latest Posts

Don't Miss