Thursday, March 13, 2025

Latest Posts

ಮನೆ ಕಟ್ಟೋ ಕನಸು ನನಸಾಗಬೇಕು ಅಂದ್ರೆ ಹೀಗೆ ಮಾಡಿ..

- Advertisement -

ಸ್ವಂತ ಮನೆ ಕಟ್ಟೋ ಕನಸು ಹಲವರದ್ದಾಗಿರುತ್ತದೆ. ಆದ್ರೆ ಯಾವುದೋ ಅಡೆತಡೆಯಿಂದ ಆ ಕೆಲಸ ಪೂರ್ಣಗೊಂಡಿರುವುದಿಲ್ಲ. ಹಾಗಾದ್ರೆ ಮನೆ ಕಟ್ಟೋ ಕನಸು ನನಸಾಗಬೇಕು ಅಂದ್ರೆ ಏನು ಮಾಡಬೇಕು ಅನ್ನೋದನ್ನ ನಾವು ಹೇಳ್ತೀವಿ ಕೇಳಿ..

ಭೂ ವರಾಹ ಸ್ವಾಮಿ ಮಂತ್ರವನ್ನ ದಿನಕ್ಕೆ 21 ಬಾರಿ ಪಠಿಸಿದ್ರೆ ಸ್ವಂತ ಸೂರು ನಿರ್ಮಿಸುವ ನಿಮ್ಮ ಕನಸು ನನಸಾಗುತ್ತದೆ. ಆ ಮಂತ್ರ ಯಾವುದೆಂದರೆ,

ಓಂ ನಮೋ ಭಗವತೇ ವರಾಹ ರೂಪಯೇ ಭೂರ್ಭುವಸ್ವಃ
ಭೂ ಪತಯೇ ಭೂಪತಿತ್ವಂ ಮೇ ದೇಹಿ ದಾಪಯ ಸ್ವಾಹ

ಈ ಮಂತ್ರವನ್ನ ದಿನಕ್ಕೆ 21 ಬಾರಿ ಪಠಿಸಬೇಕು. ಈ ಮಂತ್ರವನ್ನು ಒಂದು ಕಾಗದದಲ್ಲಿ ಬರೆದುಕೊಂಡು, ಆ ಕಾಗದವನ್ನು ದೇವರ ಕೋಣೆಯಲ್ಲಿಟ್ಟು, ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿ ಶುಭ್ರಗೊಂಡು, ಈ ಮಂತ್ರವನ್ನು ಪಠಿಸಬೇಕು.

ಈ ಮಂತ್ರವನ್ನು ಪಠಿಸುವುದರಿಂದ ಶ್ರೀ ವಿಷ್ಣು ಸ್ವರೂಪಿಯಾದ ಭೂ ವರಾಹ ಸ್ವಾಮಿ ಆಶೀರ್ವಾದ ದೊರಕಿ, ಸ್ವಂತ ಮನೆ ಕಟ್ಟುವ ಕನಸು ನನಸಾಗುತ್ತದೆ.

ಭೂ ವರಾಹ ಸ್ವಾಮಿ ಮುಖದ ಮೇಲೆ ಭೂಮಿಯ ಚಿತ್ರವಿರುವುದನ್ನು ನೀವು ನೋಡಿರುತ್ತೀರಿ. ಇದು ವಿಷ್ಣು ಭೂ ವರಾಹ ರೂಪ ತಾಳಿ ರಾಕ್ಷಸನಿಂದ ಭೂಮಿಯನ್ನು ರಕ್ಷಿಸಿದ ಎಂಬ ಪುರಾಣದ ಕಥೆ ಹೇಳುತ್ತದೆ. ಹಿರಣ್ಯ ಶುಕ್ರನೆಂಬ ರಾಕ್ಷಸ ಭೂಮಿಯನ್ನು ಚಾಪೆಯಂತೆ ಸುತ್ತಿ ಓಯ್ಯುವಾಗ ವಿಷ್ಣು ವರಾಹ ರೂಪ ತಾಳಿ ಭೂಮಿಯನ್ನ ರಕ್ಷಿಸುತ್ತಾನೆ. ಹೀಗಾಗಿ ವರಾಹ ಸ್ವಾಮಿಗೆ ಭೂ ವರಾಹ ಸ್ವಾಮಿ ಎಂಬ ಹೆಸರು ಬಂದಿದೆ.

ಹೀಗಾಗಿ ಈ ಮಂತ್ರವನ್ನ ಪಠಿಸುವುದರಿಂದ ಭೂಲಾಭ ಉಂಟಾಗಿ ಮನೆ ಕಟ್ಟುವ ಕನಸು ಈಡೇರುತ್ತದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

- Advertisement -

Latest Posts

Don't Miss