Thursday, September 25, 2025

Latest Posts

S.L ಭೈರಪ್ಪಗೆ ವಿಶೇಷ ಗೌರವ ಮೈಸೂರಲ್ಲಿ ತಲೆಎತ್ತಲಿದೆ ಸ್ಮಾರಕ

- Advertisement -

ಕನ್ನಡದ ಹಿರಿಯ ಕಾದಂಬರಿಕಾರ ಎಸ್‌ ಎಲ್‌ ಭೈರಪ್ಪನವರು ನೆನ್ನೆ ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ಅವರ ಪಾರ್ಥಿವ ಶರೀರಕ್ಕೆ ಗಣ್ಯರಿಂದ ಅಂತಿಮ ನಮನವನ್ನು ಸಲ್ಲಿಸಲಾಗುತ್ತಿದೆ. ಇನ್ನು ಇಂದು ಸಂಜೆ ಮೈಸೂರಿನ ಕಲಾಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಚಾಮುಂಡಿ ಬೆಟ್ಟದ ತಪಲಿನಲ್ಲಿ ಅವರ ಅಂತ್ಯಕ್ರಿಯೆ ನರೆವೆರಲಿದೆ.

ಕಾದಂಬರಿಗಳ ದೈತ್ಯ ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು. ಅಪಾರ ಓದುಗರನ್ನ ಸಂಪಾದಿಸಿದವರು ಭೈರಪ್ಪನವರು. ಅವರ ನಿಧನದಿಂದ ಸಾರಸ್ವತ ಲೋಕ ಬಹಳ ಬಡವಾಗಿದೆ. ಅವರದ್ದು ಜಗತ್ ಪ್ರಸಿದ್ಧ ಆಗಿರುವಂತಹ ಕಾದಂಬರಿಗಳು. ಅವರ, ಕೆಲವು ಕಾದಂಬರಿಗಳನ್ನು ನಾನು ಓದಿದ್ದೇನೆ. ಅವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಸಿದ್ದರಾಮಯ್ಯ ಹೇಳಿದರು. ಭೈರಪ್ಪ ಅವರು ಹೆಚ್ಚಿನ ಸಮಯ ಮೈಸೂರಿನಲ್ಲೇ ಇದ್ದವರು. ಹೀಗಾಗಿ ಅವರ ಸ್ಮಾರಕವನ್ನು ಮೈಸೂರಿನಲ್ಲೇ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಇತ್ತ ಸಾಕಷ್ಟು ಜನರು ಅವರ ಅಭಿಮಾನಿಗಳು ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಿಲ್ಲವೆಂದು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಭೈರಪ್ಪನವರು ಯಾವತ್ತೂ ಕೂಡ ನನಗೆ ಜ್ಞಾನಪೀಠ ಬೇಕೆಂದು ಕೇಳಿದವರಲ್ಲ. ಈ ಬಗ್ಗೆ ಮಾತನಾಡಿರುವ ಸಿದ್ದರಾಮಯಯ್ಯನವರು ಭೈರಪ್ಪನವರ ಕಾದಂಬರಿಗಳು ಅನೇಕ ಭಾಷೆಗಳಿಗೆ ಅನುವಾದಗೋವೆ. ಬಹುಶಃ ಕನ್ನಡದ ಇತರ ಯಾವ ಸಾಹಿತಿಯ ಕೃತಿಗಳೂ ಅಷ್ಟೊಂದು ಸಂಖ್ಯೆಯಲ್ಲಿ ಬೇರೆ ಭಾಷೆಗಳಿಗೆ ಅನುವಾದಗೊಂಡಿಲ್ಲ. ಸರಸ್ವತಿ ಸಮ್ಮಾನ್ ಪುರಸ್ಕೃತ ಭೈರಪ್ಪ ಅವರಿಗೆ ಜ್ಞಾನಪೀಠ ಪ್ರಶಸ್ತಿ ಕೂಡ ಸಿಗಬೇಕಿತ್ತು. ಅವರು ಅದಕ್ಕೆ ಅರ್ಹರಾಗಿದ್ದರು ಎಂದು ಹೇಳಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss