ಬೀದರ್: ಜಿಲ್ಲಾಡಳಿತವು ಬೀದರ್ ಉತ್ಸವ ನಡೆಸಲು ನಿರ್ಧರಿಸಿದ್ದು, 2023 ಜನೆವರಿ 7,8,9 ರಂದು ನಡೆಸಲು ದಿನಾಂಕ ಘೋಷಿಸಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಸುವ ಉದ್ದೇಶದಿಂದ 10ವರ್ಷದ ನಂತರ ಬೀದರ್ ಉತ್ಸವ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲೆಯ ಕೆಲವು ಸಂಘ ಸಂಸ್ಥೆಗಳು, ಸಾರ್ವಜನಿಕರು ಮತ್ತು ಸಾಹಿತಿಗಳ ಜೊತೆಗೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸಭೆ ನಡೆಸಿದ್ದರು. ಬೀದರ್ ಉತ್ಸವ ನಡೆಸಲು ಬಹುತೇಕ ಜನರು ಒಪ್ಪಿದ್ದಾರೆ. ಸಭೆಯಲ್ಲಿ ಪರ ಮತ್ತು ವಿರೋಧಗಳು ವ್ಯಕ್ತವಾಗಿವೆ. ಕೊಟ್ಯಾಂತರ ರೂಪಾಯಿ ಹಣ ಸುರಿದು ಉತ್ಸವ ಮಾಡುವ ಮೊದಲು ನಗರದಲ್ಲಿನ ರಸ್ತೆಗಳನ್ನು ಸರಿಪಡಿಸಿ ನಂತರ ಉತ್ಸವ ಮಾಡಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡರು.
ಮಂಡ್ಯದಲ್ಲಿ ವಿಧ್ಯಾರ್ಥಿ ಪೊಲೀಸ್ ಕೆಡಿಟ್ ಯೋಜನೆಗೆ ಚಾಲನೆ
ನಗರದ ಹಲವು ರಸ್ತೆಗಳು ಹಾಳಾಗಿದ್ದು, ವಾಹನಗಳು ಓಡಾಡಲು ಕಷ್ಟವಾಗುತ್ತಿದೆ. ರಸ್ತೆಯಲ್ಲಾ ಧೂಳು ತುಂಬಿಕೊಂಡಿದೆ. ರಸ್ತೆಗಳು ಇಷ್ಟೆಲ್ಲಾ ಹಾಳಾದರೂ ಇದರ ಬಗ್ಗೆ ಚಿಂತಿಸುತ್ತಿಲ್ಲ ಬದಲಾಗಿ ಲಕ್ಷಾಂತರ ಹಣ ಖರ್ಚು ಮಾಡಿ ಉತ್ಸವ ಮಾಡಲು ಮುಂದಾಗುತ್ತಿದ್ದಾರೆ ಎಂದು ಜನರು ಬೇಸರ ವ್ಯಕ್ತ ಪಡಿಸಿದರು. ಜಿಲ್ಲೆಯಲ್ಲಿ ಪ್ರವಾಸಕ್ಕೆಂದು ಜನರು ಬರುತ್ತಿರುತ್ತಾರೆ, ಪ್ರವಾಸೋದ್ಯಮ ಸ್ಥಳಗಳನ್ನು ಪರಿಚಯಿಸಲು ಗೈಡ್ಗಳನ್ನು ನೇಮಿಸಿ ಮತ್ತು ಪುರಾತತ್ವದ ಕೆಲವು ಸಮಾಧಿ, ಕೋಟೆಗಳು ನಾಶವಾಗುತ್ತಿವೆ ಜಿಲ್ಲಾಡಳಿತ ಮತ್ತು ಪುರಾತತ್ವ ಇಲಾಖೆ ಇದನ್ನು ಸರಿಪಡಿಸಿ ನಂತರ ಉತ್ಸವ ಮಾಡಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ಮದುವೆಗೆ ವಧು ಸಿಗುತ್ತಿಲ್ಲವೆಂದು ತಹಶೀಲ್ದಾರರಿಗೆ ಮನವಿ ಮಾಡಿಕೊಂಡ ಧಾರವಾಡದ ಯುವ ರೈತರು