ಪತ್ರಕರ್ತರನ್ನ ಅವಾಚ್ಯವಾಗಿ ಬೈದ ಅಮೆರಿಕಾ ಅಧ್ಯಕ್ಷ ಜೋ ಬೈಡನ್..!

ಅಧ್ಯಕ್ಷ ಅಥವಾ ಪ್ರಧಾನಮಂತ್ರಿ ಅಂದರೆ, ಅದೊಂದು ಮಹತ್ವದ ಸ್ಥಾನ. ಆ ಸ್ಥಾನದಲ್ಲಿದ್ದವರು, ಒಂದು ದೇಶದಲ್ಲಿ ಆಡಳಿತ ನಡೆಸಲು ಅರ್ಹತೆಯುಳ್ಳ, ಉಚ್ಛ ಸ್ಥಾನದಲ್ಲಿರುವ ನಾಯಕರಾಗಿರ್ತಾರೆ. ಆದ್ರೆ ಇಂಥದ್ದೊಂದು ಉಚ್ಛ ಸ್ಥಾನದಲ್ಲಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಪತ್ರಕರ್ತರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಜೋ ಬೈಡನ್ ಅಮೆರಿಕ ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಂಡ ಕಾರಣಕ್ಕೆ ಸುದ್ದಿಗೋಷ್ಠಿ ನಡೆಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಣದುಬ್ಬರದ ಕುರಿತು ಪ್ರಶ್ನೆ ಕೇಳಿದಾಗ, ಬೈಡನ್ ಈ ರೀತಿ ಬೈದಿದ್ದಾರೆ. ಹಣದುಬ್ಬರವೇ, ವಾಟ್ ಅ ಸ್ಟುಪಿಡ್ ಸನ್ ಆಫ್ ಎ ಬಿಚ್ ಎಂದು ಬೈದಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿತ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಬೈಡನ್ ಇಂಥ ಸ್ಥಾನದಲ್ಲಿದ್ದುಕೊಂಡು ಈ ರೀತಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.

ಜೋ ಬೈಡನ್ ವೈಟ್‌ ಹೌಸ್‌ನಲ್ಲಿ ಪತ್ರಿಕಾಗೋಷ್ಠಿ ಮುಗಿದ ಬಳಿಕ ಪತ್ರಕರ್ತರೆಲ್ಲಾ ತೆರಳುತ್ತಿದ್ದರು. ಈ ಸಮಯದಲ್ಲಿ ಅಲ್ಲಿನ ಫ್ಯಾಕ್ಸ್ ನ್ಯೂಸ್ ವರದಿಗಾರರೊಬ್ಬರು, ಹಣದುಬ್ಬರ ಹೆಚ್ಚಾಗಿರುವುದಕ್ಕೆ ರಾಜಕೀಯದವರು ಕಾರಣಾನಾ..? ಇದಕ್ಕೇನು ನೀವು ಏನು ಹೇಳ್ತೀರಾ ಅಂತಾ ಕೇಳಿದ್ದಾನೆ. ಇದಕ್ಕೆ ಕೋಪಗೊಂಡ ಬೈಡನ್, ಅವಾಚ್ಯವಾಗಿ ನಿಂದಿಸಿದ್ದಾರೆ.  

About The Author