- Advertisement -
www.karnatakatv.net: ಭಾರತೀಯ- ಅಮೆರಿಕನ್ ವೈಮಾನಿಕ ಮತ್ತು ರಕ್ಷಣಾ ಪರಿಣಿತ ರವಿ ಚೌಧರಿ ಅವರನ್ನು ಯು ಎಸ್ ನ ಪೆಂಟಗಾನ್ ನಲ್ಲಿ ಪ್ರಮುಖ ಹುದ್ದೆಯೊಂದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶನ ಮಾಡಿರುವುದಾಗಿ ಶ್ವೇತ ಭವನ ತಿಳಿಸಿದೆ.
ಅಮೆರಿಕ ವಾಯುಪಡೆಯ ಮಾಜಿ ಅಧಿಕಾರಿ ಹಾಗೂ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಚೌಧರಿ ಸದ್ಯ ವಾಯುಪಡೆಯ ಇಂಧನ ಪರಿಸರ ಮತ್ತು ಪರಿಸರ ವಿಭಾಗದ ಸಹಾಯಕ ಕಾರ್ಯದರ್ಶಿ ಹುದ್ದೆಗೆ ನಾಮನಿರ್ದೇಶಿತರಾಗಿದ್ದಾರೆ. ಇನ್ನು ಇದಕ್ಕೆ ಅಮೆರಿಕದ ಸೆನೆಟ್ ನಿಂದ ದೃಢೀಕರಣ ಮಾತ್ರ ಬಾಕಿ ಇದೆ. ಅಮೆರಿಕದ ಸಾರಿಗೆ ಇಲಾಖೆಯಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ನಲ್ಲಿ ಕಮರ್ಷಿಯಲ್ ಸ್ಪೇಸ್ ಅಡ್ವಾನ್ಸ್ಡ್ ಪ್ರೋಗ್ರಾಮ್ ಮತ್ತು ಇನ್ನೋವೇಷನ್ ವಿಭಾಗದ ನಿರ್ದೇಶಕರಾಗಿದ್ದರು ಎಂದು ಶ್ವೇತ ಭವನದಲ್ಲಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
- Advertisement -