ಕರ್ನಾಟಕ ಟಿವಿ ಬೆಂಗಳೂರು : ಪಂಚ ರಾಹ್ಯಗಳ ಫಲಿತಾಂಶ ನಂತರ ರಾಜ್ಯ ಬಿಜೆಪಿ ನಾಯಕರು ಫುಲ್ ಬ್ಯುಸಿಯಾಗಿದ್ದಾರೆ. ಅಧಿವೇಶನದ ನಂತರ ಅಂದ್ರೆ ಯುಗಾದಿ ನಂತರ ರ ಸಿಎಂ ಬದಲಾವಣೆ ಹಾಗೂ ಸಚಿವ ಸಂಪುಟ ಪುನರ್ ರಚನೆಯಾಗುತ್ತೆ ಅಂತ ಹೇಳಲಾಗ್ತಿದೆ. ಸಿಎಂ ಬದಲಾಗ್ತಾರೋ , ಬಿಡ್ತಾರೋ ಆದ್ರೆ ಕ್ಯಾಬಿನೆಟ್ ಮಾತ್ರ ಪುನರ್ ರಚನೆಯಾಗಲಿದೆ.
ಮಾಜಿ ಸಚಿವರಾಗುವ ಲಿಸ್ಟ್ ನಲ್ಲಿ ಯಾರ್ಯಾರು ಇದ್ದಾರೆ..?
ಕೆ.ಎಸ್ ಈಶ್ವರಪ್ಪ, ಶಿವಮೊಗ್ಗ ಕ್ಷೇತ್ರ
ಗೋವಿಂದ ಕಾರಜೋಳ, ಮುಧೋಳ ಕ್ಷೇತ್ರ
ಆರ್. ಅಶೋಕ್, ಪದ್ಮನಾಭನಗರ
ಪ್ರಭು ಚವ್ಹಾಣ್, ಔರಾದ್ ಕ್ಷೇತ್ರ
ಶ್ರೀಸಿಸಿ. ಪಾಟೀಲ್, ನರಗುಂದ ಕ್ಷೇತ್ರ
ನಾರಾಯಣಗೌಡ, ಕೆ.ಆರ್ ಪೇಟೆ ಕ್ಷೇತ್ರ
ಎಸ್. ಅಂಗಾರ, ಸುಳ್ಯ ಕ್ಷೇತ್ರ
ಜೆ.ಸಿ ಮಾಧುಸ್ವಾಮಿ, ಚಿಕ್ಕನಾಯಕನಹಳ್ಳಿ ಕ್ಷೇತ್ರ
ಅರಗ ಜ್ಞಾನೇಂದ್ರ, ತೀರ್ಥಹಳ್ಳಿ ಕ್ಷೇತ್ರ
ಶಶಿಕಲಾ ಜೊಲ್ಲೆ, ನಿಪ್ಪಾಣಿ ಕ್ಷೇತ್ರ
ಹೊಸದಾಗಿ ಸಚಿವರಾಗುವ ಭಾಗ್ಯ ಯಾರಿಗಿದೆ..?
ಬಿ.ವೈ ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ
ರಾಜೀವ್ ಪಿ, ಕುಡಚಿ ಕ್ಷೇತ್ರ
ಪ್ರೀತಂ ಗೌಡ್, ಹಾಸನ ಕ್ಷೇತ್ರ
ಪೂರ್ಣಿಮಾ ಶ್ರೀನಿವಾಸ್, ಹಿರಿಯೂರು ಕ್ಷೇತ್ರ / ತೇಜಸ್ವಿನಿ ರಮೇಶ್ ಎಂಎಲ್ ಸಿ
ಎನ್. ಮಹೇಶ್, ಕೊಳ್ಳೆಗಾಲ ಕ್ಷೇತ್ರ
ದತ್ತಾತ್ರೇಯ ಪಾಟೀಲ್ ರೇವೂರ, ಕಲಬುರಗಿ ದಕ್ಷಿಣ ಕ್ಷೇತ್ರ/ ರಾಜ್ಕುಮಾಅರ್ ಪಾಟೀಲ್ ತೇಲ್ಕೂರ್
ಅರವಿಂದ್ ಬೆಲ್ಲದ್, ಹು-ಧಾ ಪಶ್ಚಿಮ ಕ್ಷೇತ್ರ / ಬಸನಗೌಡ ಪಾಟೀಲ್ ಯತ್ನಾಳ್, ವಿಜಯಪುರ ಕ್ಷೇತ್ರ
ಎಸ್.ಎ ರವೀಂದ್ರ ನಾಥ್, ದಾವಣಗೆರೆ ಉತ್ತರ ಕ್ಷೇತ್ರ/ರೇಣುಕಾಚಾರ್ಯ ಹೊನ್ನಾಳಿ ಕ್ಷೇತ್ರ
ಸತೀಶ್ ರೆಡ್ಡಿ, ಬೊಮ್ಮನಹಳ್ಳಿ ಕ್ಷೇತ್ರ/ ವಿಶ್ವನಾಥ್, ಯಲಹಂಕ ಕ್ಷೇತ್ರ
ಎಸ್.ಎ ರಾಮದಾಸ್, ಕೆ.ಆರ್ ಕ್ಷೇತ್ರ / ರವಿಸುಬ್ರಹ್ಮಣ್ಯ, ಬಸವನಗುಡಿ ಕ್ಷೇತ್ರ
ರಮೇಶ್ ಜಾರಕಿಹೊಳಿ, ಗೋಕಾಕ್ ಕ್ಷೇತ್ರ / ಬಾಲಚಂದ್ರ ಜಾರಕಿಹೊಳಿ ಅರಭಾವಿ ಕ್ಷೇತ್ರ
ಸಿ.ಪಿ ಯೋಗೀಶ್ವರ್, ಎಂಎಲ್ ಸಿ
ಜ್ಯೋತಿ ಗಣೇಶ್, ತುಮಕೂರು ನಗರ ಕ್ಷೇತ್ರ / ಡಾ ರಾಜೇಶ್ ಗೌಡ, ಶಿರಾ ಕ್ಷೇತ್ರ
ರಾಜುಗೌಡ, ಸುರಪುರ ಕ್ಷೇತ್ರ
ಈ ಮೇಲ್ಕಂಡಂತೆ ಕ್ಯಾಬಿನೆಟ್ ನಿಂದ ಹೊರ ಹೋಗುವ ಮತ್ತು ಒಳ ಬರುವ ಸಂಬಂಧ ಚರ್ಚೆಯಾಗ್ತಿರುವ ಹೆಸರುಗಳು. 100ಕ್ಕೆ ನೂರರಷ್ಟು ಯುಗಾದಿ ನಂತರ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದ್ದು ಸಂಪುಟ ಪುನರ್ ರಚನೆ ಫಿಕ್ಸ್.. ಹೈಕಮಾಂಡ್ ನ ೆರಡನೇ ಆಲೋಚನೆಯೂ ಜಾರಿಯಾದ್ರೆ ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಆಗಲಿದ್ದು ಹೊಸದಾಗಿ ಮುರುಗೇಶ್ ನಿರಾಣಿ, ಶೋಭಾ ಕರಂದ್ಲಾಜೆ, ಸಿಟಿ ರವಿ ಅಥವಾ ಪ್ರಹ್ಲಾದ್ ಜೋಶಿ ಕರ್ನಾಟಕ ಮುಂದಿನ ಸಿಎಂ ಆಗಿ ಪ್ರಮಾಣ ವಚನ ಸಹ ಸ್ವೀಕರಿಸುವ ಸಾಧ್ಯತೆ ಇದೆ.. ಮಾಝಿ ಸಿಎಂ ಯಡಿಯೂರಪ್ಪ ಪುತ್ರ ಸಚಿವ ಸ್ಥಾನಕ್ಕಿಂತಲೂ ಮಿಗಿಲಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಕಡೆ ಆಸಕ್ತಿ ಇದ್ದು ಬಿಜೆಪಿ ಹೈಕಮಾಂಡ್ ಏನು ಮಾಡುತ್ತೆ ಅನ್ನೋದು ಇನ್ನೆರಡ್ಮೂರು ವಾರದಲ್ಲಿ ಗೊತ್ತಾಗಲಿದೆ.
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ ಬೆಂಗಳೂರು