Wednesday, October 15, 2025

Latest Posts

ತಿಮರೋಡಿಗೆ ಬಿಗ್ ರಿಲೀಫ್! ಗಡಿಪಾರಿಗೆ ಮಧ್ಯಂತರ ತಡೆ

- Advertisement -

ಸೌಜನ್ಯ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ತಲೆ ಮೇಲೆ, ಎರಡೆರಡು ತೂಗುಗತ್ತಿ ನೇತಾಡುತ್ತಿದೆ. ಹಲವು ಪ್ರಕರಣಗಳ ಹಿನ್ನೆಲೆ ತಿಮರೋಡಿ ಅವರನ್ನ ದಕ್ಷಿಣ ಕನ್ನಡದಿಂದಲೇ ಗಡಿಪಾರು ಮಾಡಲಾಗಿತ್ತು. ಅದರೆ, ಇದನ್ನು ಪ್ರಶ್ನಿಸಿ ತಿಮರೋಡಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಗಡಿಪಾರು ಆದೇಶ ರದ್ದು ಮಾಡುವಂತೆ ಮನವಿ ಮಾಡಿದ್ದರು. ಇಂದು ಹೈಕೋರ್ಟ್‌ ನಲ್ಲಿ ವಿಚಾರಣೆ ನಡೆದಿದ್ದು, ಗಡಿಪಾರು ವಿಚಾರದಲ್ಲಿ ತಿಮರೋಡಿಗೆ ಸದ್ಯಕ್ಕೆ ಬಿಗ್ ರಿಲೀಫ್‌ ಸಿಕ್ಕಿದೆ.

ಗಡಿಪಾರು ಆದೇಶಕ್ಕೆ ಹೈಕೋರ್ಟ್‌ ಇಂದು ಮಧ್ಯಂತರ ಆದೇಶ ಹೊರಡಿಸಿದೆ. ಗಡಿಪಾರಿಗೆ ಬಲವಂತದ ಕ್ರಮ ಕೈಗೊಳ್ಳಬೇಡಿ ಎಂದಿರುವ ನ್ಯಾಯಾಲಯ ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿದೆ. ಈ ಮಧ್ಯೆ ತಿಮರೋಡಿ ಅವರು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ, ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿದ್ದಾರೆ. ತಿಮರೋಡಿ ಜಾಮೀನಿನ ವಿಚಾರಣೆಯೂ ಇಂದೇ ನಡೆಯಲಿದೆ.

ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಆರೋಪದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ಕಳೆದ ಸೆಪ್ಟೆಂಬರ್‌ 21, 25ರಂದು ವಿಚಾರಣೆಗೆ ಬರಲು ನೋಟಿಸ್‌ ನೀಡಲಾಗಿತ್ತು. ಆದ್ರೆ ತಿಮರೋಡಿ ಗೈರಾಗಿದ್ರು. ಇದೀಗ 3ನೇ ಬಾರಿ ನೋಟಿಸ್‌ ನೀಡಿದ್ದು ವಿಚಾರಣೆಗೆ ಹಾಜರಾಗದೇ ಇದ್ರೆ, ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಸದ್ಯ, ತಿಮರೋಡಿ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡಿದ್ದು, ಜಾಮೀನು ಸಿಗದಿದ್ದರೆ ಬಂಧನ ಸಾಧ್ಯತೆಯೂ ಹೆಚ್ಚಿದೆ. ಈಗಾಗಲೇ ತಿಮರೋಡಿಗಾಗಿ 2 ಪೊಲೀಸರ ತಂಡ ಹುಡುಕಾಟ ನಡೆಸಿದೆ.

ಧರ್ಮಸ್ಥಳ ಪ್ರಕರಣ ಸಂಬಂಧ ಎಸ್‌ಐಟಿ ವಿಚಾರಣೆ ಮುಂದುವರಿದಿದೆ. ನಾಲ್ಕು ಮಂದಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಿಗೆ ನೋಟಿಸ್ ನೀಡಿದ್ದು, ಇಂದು ವಿಚಾರಣೆ ನಡೆಸಲಾಗ್ತಿದೆ. ಕೇಶವ್ ಬೆಳಾಲ್, ಪ್ರಭಾಕರ ಪೂಜಾರಿ, ಗೀತಾ ಹಾಗೂ ಚಂದನ್ ಕಾಮತ್ ವಿಚಾರಣೆಗೆ ಹಾಜರಾಗಿದ್ದಾರೆ. ಯುಡಿಆರ್ ಪ್ರಕರಣಗಳಲ್ಲಿ ಶವ ಹೂತ ಕೇಸ್‌ಗಳಿಗೆ ಬಿಲ್ ಪಾವತಿಯಾಗಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಎಸ್‌ಐಟಿ ಮುಂದಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss