Sunday, July 6, 2025

Latest Posts

ಅಮೆಜಾನ್ ಪ್ರೈಮ್ ಸದಸ್ಯರಿಗೆ ಬಿಗ್ ಶಾಕ್..!

- Advertisement -

www.karnatakatv.net: ಪ್ರಖ್ಯಾತ ಇ-ಕಾಮರ್ಸ್ ಜಾಲತಾಣ ಸಂಸ್ಥೆ ಅಮೆಜಾನ್ ತನ್ನ ಪ್ರೈಮ್ ಸದಸ್ಯರಿಗೆ ಒಂದಲ್ಲ ಒಂದು ಆಫರ್ ನೀಡುವುದರ ಮುಖಾಂತರ ಹೆಸರುವಾಸಿಯಾಗಿದೆ. ಬೇರೆಲ್ಲ ಒಟಿಟಿ ಪ್ಲಾಟ್‌ಫಾರಂ ಮತ್ತು ಇ-ಕಾಮರ್ಸ್ ಗೆ ಹೋಲಿಸಿದರೆ ಅಮೆಜಾನ್ ವಿಷೇಷವಾದ ರಿಯಾಯಿತಿಯಲ್ಲಿ ಬಳಕೆದಾರರಿಗೆ ಆಫರ್ ನೀಡುತ್ತದೆ. ಆದರೆ ಈ ಬಾರಿ ಅಮೆಜಾನ್ ತನ್ನ ಗ್ರಾಹಕರಿಗೆ ಶಾಕ್ ನೀಡಲು ಮುಂದಾಗಿದೆ. ಪ್ರೆöÊಮ್ ತನ್ನ ವಾರ್ಷಿಕ ಯೋಜನೆಯಲ್ಲಿ ಏರಿಕೆ ಮಾಡಲಿದೆ ಎಂದು ವರದಿಯಾಗಿದೆ. ಬರೋಬ್ಬರಿ 500 ರೂ ಹೆಚ್ಚಳ ಮಾಡಲಿದೆಯಂತೆ ಅಮೆಜಾನ್.

ಅಮೆಜಾನ್ ಪ್ರೈಮ್ ನ ಸದ್ಯದ ವಾರ್ಷಿಕ ಯೊಜನೆಯು 999ರೂ ಆಗಿದೆ. ವರ್ಷದ ಆರಂಭದಲ್ಲಿ ಅಮೆಜಾನ್ ಪ್ರೈಮ್ ತನ್ನ ಮಾಸಿಕ ಯೋಜನೆಯನ್ನು ತೆಗೆದುಹಾಕಿತ್ತು ಬಳಿಕ ಇತ್ತೀಚೆಗಷ್ಟೆ 129 ರುಪಾಯಿಗಳ ಒಂದು ತಿಂಗಳ ಪ್ರೈಮ್ ಚಂದಾದಾರಿಕೆಯನ್ನು ಮರಳಿತಂದಿತ್ತು, ಇದರ ಬೆನ್ನಲ್ಲೇ ಅಮೆಜಾನ್ ಆಘಾತಕಾರಿ ಸುದ್ದಿ ನೀಡಿದೆ . ತನ್ನ ವಾರ್ಷಿಕ ಯೋಜನೆಯಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿದೆ .

ಹೌದು , ಅಮೆಜಾನ್ ಪ್ರೈಮ್ ತನ್ನ ವಾರ್ಷಿಕ ಯೋಜನೆಯಲ್ಲಿ ಏರಿಕೆ ಮಾಡಲಿದೆ ಎಂದು ವರದಿಯಾಗಿದೆ , ಬರೋಬ್ಬರಿ 500 ರೂಗಳ ಹೆಚ್ಚಳ ಮಾಡಲಿದೆಯಂತೆ . ಅಮೆಜಾನ್ ಪ್ರೈಮ್ ನ ಸದ್ಯದ ವಾರ್ಷಿಕ ಯೋಜನೆ 999 ರು ಆಗಿದೆ . ಇದು ಕೆಲವೇ ದಿನಗಳಲ್ಲಿ ವಾರ್ಷಿಕ ಯೋಜನೆಗೆ 1499 ರೂ ಏರಿಕೆಯನ್ನು ಮಾಡಲಿದೆಯಂತೆ ಎನ್ನಲಾಗಿದೆ .

ಈಗ ಅಮೆಜಾನ್ ತನ್ನ ಗ್ರಾಹಕರಿಗೆ ಮೂರು ಚಂದದಾರಿಕೆಯನ್ನು ಪಟ್ಟಿ ಮಾಡಿದೆ. ವಾರ್ಷಿಕ ಯೋಜನೆ 999 ರೂ, ಮೂರು ತಿಂಗಳಯೋಜನೆ 329 ರೂ . ಮತ್ತು ಮಾಸಿಕ ಯೋಜನೆ 129 ರೂ . ಪರಿಚಯಿಸಿದೆ. ವಾರ್ಷಿಕ ಮತ್ತು ಮೂರು ತಿಂಗಳ ಯೋಜನೆಯನ್ನು ಎಲ್ಲಾ ಎಲೆಕ್ಟಾçನಿಕ್ ಪಾವತಿ ವಿಧಾನಗಳ ಮೂಲಕ ಮಾಡಬಹುದು ಮತ್ತು ಅಮೆಜಾನ್ ಮೂಲಕ ಮಾಡಬಹುದಾಗಿದೆ . ಆದರೆ 129 ರೂ ವಿನಿ ಯೋಜನೆಯನ್ನು ಕ್ರೆಡಿಟ್ ಕಾರ್ಡ್ ಅಥವಾ ಆಯ್ದ ಡೆಬಿಟ್ ಕಾರ್ಡ್ ಮೂಲಕ ಮಾತ್ರ ಖರೀದಿಬಹುದು . ಅಮೆಜಾನ್‌ನ ನಿಯಮಗಳು ಮತ್ತು ಷರತ್ತುಗಳ ಪುಟವು , ತಿಂಗಳ ಪ್ರೆöÊಮ್ ಚಂದದಾರಿಕೆಯನ್ನು ಆರ್ಬಿಐನ ಇ-ಆದೇಶದ ಮಾರ್ಗಸೂಚಿಗಳನ್ನು ಅನುಸರಿಸಿದ ಬ್ಯಾಂಕುಗಳ ಮೂಲಕ ಖರೀದಿಸಬಹುದು ಎಂದು ಹೇಳಿದೆ .ಆರ್ ಬಿಐನ ಮಾರ್ಗಸೂಚಿಗಳನ್ನು ಅನುಸರಿಸದ ಬ್ಯಾಂಕುಗಳು . ಆವುದೇ ಸ್ವಯಂಚಾಲಿತ ಪಾವತಿಗಾಗಿ ವಿನಂತಿಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುವುದಿಲ್ಲ. ಈ ಎಲ್ಲ ಮಾರ್ಗಸೂಚಿಗಳಿಂದಾಗಿ , ಅಮೆಜಾನ್ ಮುಂದಿನ ಸೂಚನೆ ಬರುವವರೆಗೆ ಅಮೆಜಾನ್ ಉಚಿತ ಪ್ರಯೋಗಕ್ಕಾಗಿ ಹೊಸ ಸದಸ್ಯರ ಸೈನ್-ಅಪ್‌ಗಳನ್ನು ನಿಲ್ಲಿಸಿದೆ

ಸಂಪತ್ ಶೈವ,ನ್ಯೂಸ್ ಡೆಸ್ಕ್- ಕರ್ನಾಟಕ ಟಿವಿ

- Advertisement -

Latest Posts

Don't Miss