Sunday, September 8, 2024

Latest Posts

ಎಲ್.ಪಿ.ಜಿ ಬಳಕೆದಾರರಿಗೆ ಮತ್ತೆ ಬಿಗ್ ಶಾಕ್.

- Advertisement -

ರಾಷ್ಟ್ರೀಯ ಸುದ್ದಿ : ಎಲ್.ಪಿ.ಜಿ ಬಳಕೆದಾರರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರು ಇದೀಗ ಮತ್ತಷ್ಟು ಬೆಲೆ ತೆರಬೇಕಿದೆ. 14.2 ಕೆಜಿ ಸಿಲಿಂಡರ್ ದರದಲ್ಲಿ 50 ರೂ ಏರಿಕೆ ಮಾಡಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಎಲ್.ಪಿ.ಜಿ ಸಿಲಿಂಡರ್ ದರ 1105 ರೂ ಗೆ ಏರಿಕೆಯಾಗಿದೆ. ಇನ್ನು ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ 350 ರೂ ಹೆಚ್ಚಳ ಆಗಿದ್ದು ಈ ಮೂಲಕ 2119 ರೂ ಗೆ ಏರಿಕೆಯಾಗಿದೆ. 

8 ತಿಂಗಳ ನಂತರ ಕೇಂದ್ರ ಸರ್ಕಾರ ಎಲ್.ಪಿ.ಜಿ ಸಿಲಿಂಡರ್ ದರವನ್ನ ಏರಿಕೆ ಮಾಡಿದೆ. ಬೆಂಗಳೂರಿನಲ್ಲಿ 1105, ದೆಹಲಿಯಲ್ಲಿ 1103, ಮುಂಬೈನಲ್ಲಿ 1129, ಚೆನ್ನೈನಲ್ಲಿ 1118 ತಲುಪಿದೆ. ಕೇಂದ್ರ ಸರ್ಲಕಾಋ ಎಲ್.ಪಿ.ಜಿ ಸಬ್ಸಿಡಿ ನೀಡುವುದನ್ನ ನಿಲ್ಲಿಸರುವ ಕಾರಣ ಜನರು ಇದೀಗ ಪೂರ್ಣ ಪ್ರಮಾಣದ ದರ ಪಾತಿ ಮಾಡಿ ಸಿಲಿಂಡರ್ ಖರೀದಿ ಮಾಡಬೇಕಿದೆ.

ವಿಮಾನದ ಇಂಧನ ದರ ಇಳಿಕೆ : ಈ ನಡುವೆ ಮೈಮಾನಿಕ ಇಂಧನದ ದರವನ್ನ ಲೀಟರ್ ಗೆ 4 ರೂ 6 ಪೈಸೆ ಇಳಿಕೆ ಮಾಡಲಾಗಿದೆ. ಮೈಮಾನಿಕ ಇಂಧನ ಬೆಲೆ 1000 ಲೀಟರ್ ಗೆ 1 ಲಕ್ಷದ 700 ರೂ ತಲುಪಿದೆ.

 

 

 

 

- Advertisement -

Latest Posts

Don't Miss