ಮುಡಾದಿಂದ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಸೈಟ್ ಪಡೆದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸೈಟ್ ಕೇಳಿ ಪಾರ್ವತಿ ಬರೆದಿದ್ದ ಪತ್ರವನ್ನು ಸಿಎಂ ಇತ್ತೀಚಿಗೆ ಟ್ವೀಟ್ ಮಾಡಿದ್ರು. ಮುಡಾದಿಂದ ಸೈಟ್ ಕೇಳಿದ್ದ ಬೇರೆ ಪತ್ರವನ್ನು ಸಿಎಂ ಪೋಸ್ಟ್ ಮಾಡಿದ್ರಾ ಎಂಬ ಅನುಮಾನ ಮೂಡಿದೆ.
ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಅವರು ಪತ್ನಿ ಮುಡಾಗೆ ಬರೆದಿದ್ದ ಅರ್ಜಿಯ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಎರಡನೇ ಪುಟದ 3ನೇ ಸಾಲಿನ ನಾಲ್ಕು ಪದಗಳಿಗೆ ವೈಟ್ನರ್ ಹಚ್ಚಲಾಗಿತ್ತು. ‘ದೇವನೂರು 3ನೇ ಹಂತದ ಬಡಾವಣಯಲ್ಲಿ ಅಥವಾ ನಂತರ’ ಎಂದು ಬರೆದಿದ್ದ ಪದಗಳಿಗೆ ವೈಟ್ನರ್ ಹಚ್ಚಲಾಗಿತ್ತು. ಸಿಎಂ ಪತ್ನಿ ಬರೆದ ಪತ್ರಕ್ಕೆ ಮುಡಾ ಅಧಿಕಾರಿಗಳು ವೈಟ್ನರ್ ಹಚ್ಚಿದ್ದರು. ವೈಟ್ನರ್ ಪ್ರಕರಣಕ್ಕೆ ತೆರೆ ಎಳೆಯಲು ಹೋಗಿ ಸಿಎಂ ಯಡವಟ್ಟು ಮಾಡಿಕೊಂಡ್ರಾ? ಎಂದು ಇದೀಗ ಉದ್ಭವವಾಗಿದೆ.
ಸಿಎಂ ಪೋಸ್ಟ್ ಮಾಡಿದ ಪತ್ರಕ್ಕೂ, ಆರ್ಟಿಐನಲ್ಲಿ ಪಡೆದ ಪತ್ರಕ್ಕೂ ವ್ಯತ್ಯಾಸ ಕಂಡುಬಂದಿದೆ. ಪತ್ನಿ ಪಾರ್ವತಿ ಬರೆದಿದ್ದ ಪತ್ರವೇ ಬೇರೆ? ಸಿಎಂ ಟ್ವೀಟ್ ಮಾಡಿದ್ದ ಪತ್ರವೇ ಬೇರೆ? ಆಗಿದೆ ಎನ್ನಲಾಗಿದೆ. ಪಾರ್ವತಿ ಬರೆದಿದ್ದ ನಕಲಿ ಪತ್ರವನ್ನು ಸಿಎಂ ಟ್ವೀಟ್ ಮಾಡಿದ್ರಾ? ಎನ್ನುವ ಪ್ರಶ್ನೆ ಮೂಡಿದೆ. ಸಿಎಂ ಬಿಡುಗಡೆ ಮಾಡಿದ ದಾಖಲೆಯಲ್ಲಿ ಪತ್ನಿ ಸಹಿಯಲ್ಲಿ ವ್ಯತ್ಯಾಸ ಕಂಡುಬಂದಿದೆ.
ಆರ್ಐಟಿ ಪ್ರತಿಗೂ ಹಾಗೂ ಸಿಎಂ ಬಿಡುಗಡೆ ಮಾಡಿದ ಪತ್ರಕ್ಕೂ ಭಾರೀ ವ್ಯತ್ಯಾಸ ಇದೆ. ಒಂದೇ ದಾಖಲೆಯಲ್ಲಿ ಎರಡು ರೀತಿ ಸಹಿ ಹೇಗೆ ಸಾಧ್ಯ? ಒಂದೇ ದಾಖಲೆ, ಒಬ್ಬರದ್ದೇ ಸಹಿ, ಸಹಿಯಲ್ಲೇ 5-6 ವ್ಯತ್ಯಾಸ ಇದೆ. 8 ಅಕ್ಷರಗಳ ಸಹಿಯಲ್ಲಿ 4 ಅಕ್ಷರಗಳಿಗೆ ಹೋಲಿಕೆಯೇ ಇಲ್ಲ ಎಂಬುದು ಗಮನಾರ್ಹ ಸಂಗತಿ.