Sunday, May 26, 2024

Latest Posts

ಹುಬ್ಬಳ್ಳಿ ಹ*ತ್ಯೆಗೆ ಬಿಗ್ ಟ್ವಿಸ್ಟ್: ಕೈ ಕಾರ್ಪೋರೇಟರ್ ಪುತ್ರಿ ನೇಹಾ ಹಿರೇಮಠ್ ಮ*ರ್ಡರ್‌ ಮಾಡಿದ್ಯಾಕೆ ಫಯಾಜ್?

- Advertisement -

Hubli News: ಹುಬ್ಬಳ್ಳಿ: ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ್ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಕೊಲೆಗೆ ಹುಬ್ಬಳ್ಳಿ ನಗರ ಬೆಚ್ಚಿ ಬಿದ್ದಿದೆ. ಆರೋಪಿ ಫಯಾಜ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ಫಯಾಜ್ ಯುವತಯನ್ನು ಕೊಲೆ ಮಾಡಿದ್ದೇಕೆ ಎಂಬುದರ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಿಮ್ಸ್ ಆಸ್ಪತ್ರೆಗೆ ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿ ನೀಡಿದ್ದು, ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಕೊಲೆ ಆರೋಪಿಯ ವಿರುದ್ಧ ಕುಟುಂಬಸ್ಥರ ಆಕ್ರೋಶ ಹೊರಹಾಕಿದ್ದಾರೆ.

ನಮ್ಮ ಹುಡುಗಿ ಸಂಕೋಚದ ಸ್ವಭಾವದವಳಾಗಿದ್ದಳು, ಮದುವೆ ಮಾಡುವ ಉದ್ದೇಶ ಹೊಂದಲಾಗಿತ್ತು. ಉನ್ನತ ವ್ಯಾಸಂಗ ಮಾಡಲಿ ಅಂತ ಕಾಲೇಜಿಗೆ ಸೇರಿಸಿದ್ದೆವು. ಅಷ್ಟರೊಳಗೆ ಈ ಕೃತ್ಯ ನಡೆದು ಹೋಗಿದೆ. ಕಾಲೇಜಿನೊಳಗೆ ರಕ್ಷಣೆ ಇಲ್ಲಂದರೆ ಬೇರೆ ಕಡೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ನೇಹಾ ಹಿರೇಮಠ ತಂದೆ ಹೇಳಿದ್ದೇನು?

ನನ್ನ ಮಗಳು ಬಿವಿಬಿ ಕಾಲೇಜಿನಲ್ಲಿ ಎಂಸಿಎ ಮೊದಲನೇ ವರ್ಷದಲ್ಲಿ ಓದುತ್ತಿದ್ದಳು. ಹೆಚ್ಓಡಿ ರೂಮ್ ಮುಂದೆಯೇ ಆಕೆಗೆ ಚಾಕುವಿನಿಂದ ಇರಿಯಲಾಗಿದೆ. ಕ್ಲಾಸ್ ರೂಮ್ನಿಂದ ಹೊರಗೆ ಬರುತ್ತಿದ್ದಂತೆ ಈ ರೀತಿಯ ಕೃತ್ಯ ನಡೆದಿದೆ. ಹುಡುಗ ಹಳೆ ಬಿಸಿಎ ಫ್ರೆಂಡ್ ಅಂತ ಗೊತ್ತಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾಲೇಜು ಆಡಳಿತ ಮಂಡಳಿಗೆ ಪ್ರಶ್ನೆ

ರಸ್ತೆಯಲ್ಲಿ ನಮ್ಮ ಕಾರ್ ನಿಂತಿತ್ತು. ಕಾರ್ ಬಳಿ ಬರೋಷ್ಟರಲ್ಲಿಯೇ ಹತ್ಯೆ ನಡೆದಿದೆ. ಕೆಎಲ್ಇ ದೊಡ್ಡ ಕಾಲೇಜು ಅಂತ ನಮ್ಮ ಮಗಳನ್ನು ಸೇರಿಸಿದ್ದೀವಿ. ಆದರೆ ಕಾಲೇಜ್ ಗೇಟ್ ಬಳಿ ಒಬ್ಬ ಸೆಕ್ಯೂರಿಟಿಯೂ ಇಲ್ಲ. ಹಾಗಾದ್ರೆ ಕಾಲೇಜಿಗೆ ಯಾರು ಬೇಕಾದ್ರು ಬರಬಹುದಾ ಎಂದು ಆಡಳಿತ ಮಂಡಳಿಯನ್ನು ನಿರಂಜನ್ ಹಿರೇಮಠ್ ಪ್ರಶ್ನೆ ಮಾಡಿದರು.

ಇರೋ ಒಬ್ಬಳು ಮಗಳು

ನಾವು ಊರೆಲ್ಲಾ ತಿರುಗಾಡುತ್ತಾ ಜನಸೇವೆ ಮಾಡಿಕೊಂಡು ಇರುತ್ತೇವೆ. ನಮ್ಮ ಮಗಳಿಗೆ ಹೀಗಾದ್ರೆ ಸಾರ್ವಜನಿಕರ ಸ್ಥಿತಿ ಏನಾಗಬೇಕು? ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಪೋಷಕರಿಗೆ ಭಯ ಆಗುತ್ತೆ ಅಲ್ಲವಾ? ನಮ್ಮ ಕೆಟ್ಟ ಗಳಿಗೆ ನಮ್ಮ ಮಗಳು ಹೋದಳು. ಇರೋ ಒಬ್ಬಳು ಮಗಳು, ನಮ್ಮ ಶ್ರೀಮತಿಗೆ ನಾನು ಹೇಗೆ ಸಾಂತ್ವಾನ ಹೇಳಲಿ. ಪೊಲೀಸರು ಮತ್ತು ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ ಮುಂಜಾಗ್ರತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಹುಬ್ಬಳ್ಳಿಯ ವಿದ್ಯಾನಗರ ಠಾಣೆ‌ ಪೊಲೀಸರು ಆರೋಪಿಯ ವಿಚಾರಣೆಯನ್ನು ನಡೆಸಿದ್ದಾರೆ. ಇತ್ತ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ನೇಹಾ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿದೆ.

ಕಾಲೇಜಿನಲ್ಲಿ ಮಕ್ಕಳಿಗೆ ಸುರಕ್ಷತೆ ಬೇಕು. ಕಾಲೇಜಿಗೆ ಸಂಬಂಧಿಸದ ವ್ಯಕ್ತಿ ಬರ್ತಾನೆ ಅಂದ್ರೆ ಏನರ್ಥಾ. ನಮ್ಮ ಮಗಳು ಫ್ಯಾನ್ಸಿ ಇಲ್ಲಾ ಬೇಕಾದ ಹಾಗೇ ಅಲ್ಲಿ ಇಲ್ಲಿ ತಿರುಗಾಡಿದವಳಲ್ಲ. ಆಕೆಯನ್ನು ನಾವೇ ಕರೆದುಕೊಂಡು ಬರುತ್ತಿದ್ದೀವಿ ಎಂದು ನೇಹಾ ತಾಯಿ ಹೇಳಿದ್ದಾರೆ.

ಕಾಂಗ್ರೆಸ್ ಕಾನೂನು ಸುವ್ಯವಸ್ಥೆಯ ಹೊಣೆಗಾರಿಕೆಯನ್ನು ಈ ಮಾತಂಧರ ಕೈಗಿಟ್ಟು ನಿದ್ದೆ ಹೋಗಿದೆ: ಪ್ರೀತಂಗೌಡ

ಯಾವುದೇ ಸಮಯದಲ್ಲೂ ಕರ್ನಾಟಕ ಸದಾ ಕೇರಳದ ಜೊತೆ ಇರಲಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

ಸರ್ಕಾರದ ಕುಮ್ಮಕ್ಕು ಇಂಥ ದುಷ್ಟಶಕ್ತಿಗಳಿಗೆ ಇರುವುದು ಸ್ಪಷ್ಟವಾಗಿದೆ: ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ

- Advertisement -

Latest Posts

Don't Miss