Bigboss news:
ಬಿಗ್ ಬಾಸ್ ಮನೆಯೊಳಗೆ ದಿನದಿಂದ ದಿನಕ್ಕೆ ಅನೇಕ ವಿಚಾರಗಳುರಂಗೇರುತ್ತಿವೆ. ಎಲ್ಲಾ ಸ್ಪರ್ಧಿಗಳ ಬೇರೆ ಬೇರೆ ಮುಖ ಅನಾವರಣಗೊಳ್ಳುತ್ತಿದೆ. ಹಲವು ಕಾರಣದಿಂದ ಎರಡು ಸ್ಪರ್ಧಿಗಳ ಮಧ್ಯೆ ಜಗಳಗಳು ಏರ್ಪಡುತ್ತಿವೆ. ಯಾರು ಯಾರ ವಿರುದ್ಧ ಯಾವಾಗ ತಿರುಗಿ ಬೀಳುತ್ತಾರೆ ಎಂಬುದನ್ನು ಊಹಿಸಲು ಪ್ರೇಕ್ಷಕರಿಗೆ ಕಷ್ಟವಾಗುತ್ತಿದೆ.
ರೂಪೇಶ್ ಶೆಟ್ಟಿ ಹಾಗೂ ಮನೆಯ ಕ್ಯಾಪ್ಟನ್ ಅರ್ಜುನ್ ಮಧ್ಯೆ ಜಟಾಪಟಿ ಏರ್ಪಟ್ಟಿದೆ. ‘ಅರ್ಜುನ್ ಅವರು ನನ್ನ ಕ್ಯಾರೆಕ್ಟರ್ ಹಾಳು ಮಾಡಿದ್ದಾರೆ’ ಎಂಬ ಆರೋಪವನ್ನು ಶೆಟ್ರು ಮಾಡಿದ್ದಾರೆ. ಇಬ್ಬರ ಜಗಳ ತಾರಕಕ್ಕೇರಿದೆ. ಬಿಗ್ ಬಾಸ್ ಮನೆಯಲ್ಲಿ ಊಟದ ವಿಚಾರಕ್ಕೆ ಸಾಕಷ್ಟು ಜಗಳಗಳು ಏರ್ಪಟ್ಟಿವೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ನೀಡುವ ದಿನಸಿಗಳಿಗೆ ಮಿತಿ ಇದೆ. ಹೀಗಾಗಿ, ಯಾರಾದರೂ ಆಹಾರವನ್ನು ವೇಸ್ಟ್ ಮಾಡಿದರೆ ದೊಡ್ಡದೊಡ್ಡ ಜಗಳಗಳೇ ಏರ್ಪಡುತ್ತವೆ. ರೂಪೇಶ್ ಹಾಗೂ ಅರ್ಜುನ್ ಮಧ್ಯೆ ಜಗಳ ಆಗೋಕೂ ಇದೇ ವಿಚಾರ ಕಾರಣ ಆಗಿದೆ.
ರೂಪೇಶ್ ಅವರು ತಾವು ಹಾಕಿಕೊಂಡಿದ್ದ ಚಪಾತಿಯನ್ನು ಕಸದಬುಟ್ಟಿಗೆ ಎಸೆದಿದ್ದರು. ಇದನ್ನು ನೋಡಿದ ಅರ್ಜುನ್ ಅವರು ‘ಚಪಾತಿಯನ್ನು ಕಸದ ಬುಟ್ಟಿಗೆ ಎಸೆದವರು ಯಾರು’ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ರೂಪೇಶ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ‘ಅದನ್ನು ತಿನ್ನೋಕೆ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ನಾನೇ ಎಸೆದೆ’ ಎಂದಿದ್ದಾರೆ. ಈ ಮಾತನ್ನು ಕೇಳಿ ಅರ್ಜುನ್ ಕೋಪಗೊಂಡಿದ್ದಾರೆ.ಇಬ್ಬರೂ ಕಿತ್ತಾಡಿಕೊಂಡಿದ್ದಾರೆ.
ಸಾನ್ಯಾ ಅಯ್ಯರ್ ವಾಷ್ ರೂಂ ನಲ್ಲಿ ಕಿರುಚಾಡಿದ್ಯಾಕೆ…! ಯಾರನ್ನು ಕಂಡು ಭಯ ಪಟ್ಟರು ಸಾನ್ಯಾ…!