- Advertisement -
www.karnatakatv.net: ಸಿನಿಮಾ- ಬಿಗ್ ಬಾಸ್ ಪ್ರಿಯರಿಗೆ ಸಿಹಿ ಸುದ್ದಿ..ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತಿದ್ದ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ 8ನೇ ಸೀಸನ್ ಮತ್ತೆ ಆರಂಭವಾಗಲಿದೆ. 100 ದಿನಗಳು ನಡೆಯಬೇಕಾಗಿದ್ದ ಕಾರ್ಯಕ್ರಮ ಕೊರೋನಾದಿಂದಾಗಿ ಇದೇ ಮೊದಲ ಬಾರಿಗೆ 72 ದಿನಕ್ಕೆ ಅಂತ್ಯಗೊಂಡಿತ್ತು. ಇದೀಗ ಇದೇ ಸೀಸನ್ ಮತ್ತೆ ಶುರುವಾಗಲಿದ್ದು ಹೊಸದಾಗಿ ಆರಂಭಿಸಲು ಕಲರ್ಸ್ ವಾಹಿನಿ ಸಿದ್ಧತೆ ಮಾಡಿಕೊಂಡಿದೆ. ಜೂನ್ 23ರಿಂದ ಅಂದರೆ ಇದೇ ಬುಧವಾರದಿಂದ ಸೀಸನ್ 8ರ ಎರಡನೇ ಇನ್ನಿಂಗ್ಸ್ ಸಂಜೆ 6 ಗಂಟೆಗೆ ಶುರುವಾಗಲಿದೆ.ಕಲರ್ಸ್ ವಾಹಿನಿಯವರು ಕಾರ್ಯಕ್ರಮದ ಹೊಸ ಪ್ರೊಮೊ ರಿಲೀಸ್ ಮಾಡಿದ್ದಾರೆ. ಅದೇ 12 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಆಟ ಆಡಲಿದ್ದಾರೆ. ಇನ್ನು, ಈ ಬಾರಿಯ ಬಿಗ್ ಬಾಸ್ ಸೀಸನ್ 8ರಲ್ಲಿ ಸಖತ್ ಟ್ವಿಸ್ಟ್ ಗಳಿರಲಿವೆಯಂತೆ.
- Advertisement -