ಕನ್ನಡ ಬಿಗ್ ಬಾಸ್ ಸೀಸನ್-7ರ ಆಟದಲ್ಲಿ ಗೆದ್ದು ಟ್ರೋಪಿ ಎತ್ತಿಡಿದಿದ್ದ ಶೈನ್ ಶೆಟ್ರು ಇದೀಗ ಡೈರೆಕ್ಟ್ ಆಗಿ ಬಾಲಿವುಡ್ ಅಂಗಳಕ್ಕೆ ಕಾಲಿಡ್ತಿದ್ದಾರೆ. ಬಿಗ್ ಬಾಸ್ ಮುಗಿದ್ಮೇಲೆ ಶೈನ್ ಸ್ಮಾಲ್ ಸ್ಕ್ರೀನ್ ನಲ್ಲಿ ಮಿಂಚ್ತಾರಾ..? ಇಲ್ಲ ಬಿಗ್ ಸ್ಕ್ರೀಗೆ ಹೋಗ್ತಾರಾ..? ಅನ್ನೋ ಪ್ರಶ್ನೆ ಸಿನಿರಸಿಕರನ್ನು ಕಾಡ್ತಿತ್ತು. ಅದಕ್ಕೀಗ ಶೈನ್ ಉತ್ತರ ಕೊಟ್ಟಿದ್ದಾರೆ. ಗಾಂಧಿನಗರದಿಂದ ಡೈರೆಕ್ಟ್ ಆಗಿ ಬಾಲಿವುಡ್ ಅಂಗಳಕ್ಕೆ ಲ್ಯಾಂಡ್ ಆಗ್ತಿದೆ.

ಬಿಟೌನ್ ಗೆ ಪಯಾಣ ಮಾಡಿರೋ ಶೆಟ್ರು ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರ ನಾವ್ ಕೊಡ್ತೀವಿ ಕೇಳಿ. ಶೈನ್ ಬಾಲಿವುಡ್ ಸಿನಿಮಾದಲ್ಲಿ ನಟಿಸ್ತಿಲ್ಲ. ಬದಲಾಗಿ ಹಿಂದಿ ಆಲ್ಬಂ ಸಾಂಗ್ ಒಂದಕ್ಕೆ ಹೆಜ್ಜೆ ಹಾಕಲಿದ್ದಾರೆ. ವಿಶೇಷ ಅಂದ್ರೆ ಈ ಹಾಡನ್ನು ಸಂಚಿತ್ ಹೆಗ್ಡೆ ಹಾಡಲಿದ್ದಾರೆ.
‘ಧೂಂಡೇ’ ಅನ್ನೋ ಟೈಟಲ್ ನಡಿ ಸಾಂಗ್ ರೆಡಿಯಾಗ್ತಿದ್ದು, ಪಯಣದ ಹಾಡಿಲ್ಲಿ ನಾಯಕ ತನ್ನನ್ನು ತಾನು ಪ್ರಶ್ನಿಸಿಕೊಳ್ಳುತ್ತಾ ಹೊಸ ಜೀವನವನ್ನು ನೋಡುತ್ತಿರುತ್ತಾನೆ. ಇದೊಂದು ಫ್ಯಾಂಟಸಿ ಪ್ರಯಾಣದ ಕಥೆಯ ಬ್ಯೂಟಿಫುಲ್ ಟ್ರ್ಯಾಕ್ ಎನ್ನಲಾಗ್ತಿದೆ.

ಇನ್ನೂ, ಧೂಂಡೇ ಹಾಡಿಗೆ ಯತೀಶ್ ರಾಜ್ ಎಂಬುವವರು ನಿರ್ದೇಶನ ಮಾಡುತ್ತಿದ್ರೆ, ಡ್ಯಾನಿ ಕುರಿಯನ್ ಮತ್ತು ಸುಮಿತ್ ಬಂಗೇರಾ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಒಟ್ಟು 10 ದಿನಗಳ ಕಾಲ ಶೂಟಿಂಗ್ ನಡೆಸಲಾಗ್ತಿದ್ದು, ಅದಕ್ಕಾಗಿಯೇ ಒಂದು ಕಲ್ಪಾನಿಕ ಹಳ್ಳಿಯನ್ನು ಸೃಷ್ಟಿಸಲಾಗಿದೆಯಂತೆ.

ಶೈನ್ ಶೆಟ್ರು ಇದೀಗ ಹೊಸ ಹುರುಪಿನೊಂದಿಗೆ ಹಿಂದಿ ಆಲ್ಬಂ ಸಾಂಗ್ ನಲ್ಲಿ ಮಿಂಚಲು ರೆಡಿಯಾಗಿದ್ದು, ಈ ಹಾಡು ಕ್ಲಿಕ್ ಆದ್ರೆ ಹಿಂದಿ ಸಿನಿಮಾಗಳು ಅವರನ್ನು ಹುಡುಕಿಕೊಂಡು ಬರಲಿ ಅನ್ನೋದು ಕನ್ನಡಿಗರ ಆಶಯ.