ಮೈಸೂರು ಅರಮನೆ ಥೀಮ್‌ನಲ್ಲಿ ಬಿಗ್ ಬಾಸ್ ಮನೆ – ಸೆಟ್ ರಿವೀಲ್ ಮಾಡಿದ ‘ಕಿಚ್ಚ’

ಕಿಚ್ಚ ಸುದೀಪ್ ನಿರೂಪಣೆಯ ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ ಸೀಸನ್ 12 ಸೆಪ್ಟೆಂಬರ್ 28 ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗುತ್ತಿದೆ. ಈ ಭಾರಿಯ ಬಿಗ್ ಬಾಸ್ ಶೋ ಸೆಟ್ ಹೇಗಿರಲಿದೆ ಅನ್ನೋದನ್ನ ಎಲ್ಲರು ಕಾತುರದಿಂದ ಕಾಯ್ತಾಯಿದ್ರು. ಅದಕ್ಕೆ ಬಿಗ್ ಬಾಸ್ ಟೀಮ್ ಫುಲ್ ಸ್ಟಾಪ್ ಇಟ್ಟಿದೆ.

ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್‌ ನ ಮನೆಯ ವಿಡಿಯೋ ಒಂದನ್ನ ಬಿಡುಗಡೆ ಮಾಡಿದೆ. ಈ ಬಾರಿ ಬಿಗ್ ಬಾಸ್ ಮನೆಯನ್ನು ಮೈಸೂರು ಅರಮನೆಯ ಥೀಮ್‌ನಲ್ಲಿ ಅದ್ದೂರಿಯಾಗಿ ನಿರ್ಮಿಸಲಾಗಿದೆ. ಇನ್ನೂ ಬಿಗ್ ಬಾಸ್‌ನ ಸೆಟ್ ಅನ್ನು ಪರಿಚಯಿಸುವ ವಿಡಿಯೋದಲ್ಲಿ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಮಾತನಾಡಿದ್ದಾರೆ.

ಮೈಸೂರು ದಸರಾ ಸಂದರ್ಭದಲ್ಲಿ ಆರಂಭವಾಗುತ್ತಿರುವುದರಿಂದ, ಸೆಟ್ ವಿನ್ಯಾಸವನ್ನೂ ಮೈಸೂರು ಅರಮನೆ ಶೈಲಿಯಲ್ಲಿ ಮಾಡಿದ್ದಾರೆ. ಕಲರ್ಸ್ ಕನ್ನಡ ಸೋಷಿಯಲ್ ಮೀಡಿಯಾದಲ್ಲಿ ‘ಕರುನಾಡನ್ನು ಬಿಂಬಿಸುವ ಬಿಗ್ ಬಾಸ್ ಅರಮನೆಗೆ ಅಧಿಪತಿ ಕಿಚ್ಚ ಸುದೀಪ್’ ಎಂಬ ಶೀರ್ಷಿಕೆಯಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದು ಕುತೂಹಲ ಹೆಚ್ಚಿಸಿದೆ.

ಈ ಭಾರಿಯ ಬಿಗ್ ಬಾಸ್ ನಲ್ಲಿ ಯಾರೆಲ್ಲಾ ಭಾಗಿಯಾಗುತ್ತಾರೆ ಎಂಬ ಬಗ್ಗೆ ರಾಜ್ಯದ ಜನರಿಗೂ ಕುತೂಹಲ ಇದೆ. ಸುದ್ದಿ ಸೋರಿಕೆಗಳ ನಡುವೆ, ಕಾಕ್ರೋಚ್ ಸುಧೀ ಭಾಗಿಯಾಗುವ ಸುಳಿವು ಈಗಾಗಲೇ ಬಂದಿದೆ. ಆದರೆ ಉಳಿದ ಸ್ಪರ್ಧಿಗಳ ಹೆಸರುಗಳನ್ನು ಇನ್ನೂ ರಹಸ್ಯವಾಗಿಯೇ ಇಟ್ಟುಕೊಂಡಿರುವ ಕಲರ್ಸ್ ಕನ್ನಡ, ಪ್ರೇಕ್ಷಕರ ಕುತೂಹಲವನ್ನು ಗರಿಷ್ಠ ಮಟ್ಟಕ್ಕೇರಿಸಿದೆ.

ವರದಿ : ಲಾವಣ್ಯ ಅನಿಗೋಳ

About The Author