ಒಂಟಿಮನೆಯ ಆಟದಲ್ಲಿ ಯಾರು ಯಾವಾಗ ನಾಮಿನೇಟ್ ಅಗ್ತಾರೆ…?ಸೇಫ್ ಆಗ್ತಾರೆ ಅನ್ನೋದೇ ಗೊತ್ತಾಗೋದಿಲ್ಲ. ದೊಡ್ಮನೆ ಒಳಗೆ ಎಂಟ್ರಿ ಕೊಟ್ಟ ಮೊದಲ ದಿನವೇ ಪ್ರಶಾಂತ್ ಸಂಬರ್ಗಿ, ಮಂಜು ಪಾವಗಡ, ಧನುಶ್ರಿ, ನಿಧಿ ಸುಬ್ಬಯ್ಯ ಇತರೆ ಸ್ಪರ್ಧಿಗಳಿಂದ ನಾಮಿನೇಟ್ ಆಗಿದ್ದರು. ನಿರ್ಮಲಾ ಅವರನ್ನ ಬಿಗ್‌ಬಾಸ್ ನೇರವಾಗಿ ನಾಮಿನೇಟ್ ಮಾಡಿದ್ದರು.
ಎರಡನೇ ದಿನದಲ್ಲಿ ಮಂಜು ಪಾವಗಡ, ಪ್ರಶಾಂತ್ ಸಂಬರ್ಗಿ, ಧನುಶ್ರಿ, ನಿಧಿ ಸುಬ್ಬಯ್ಯ ಅವರಿಗೆ ವಿಶೇಷ ಅವಕಾಶ ಕೊಟ್ಟ ಬಿಗ್‌ಬಾಸ್, ಮನೆಯ ಯಾವುದಾದರೂ ಒಬ್ಬ ಸ್ಪರ್ಧಿಯನ್ನು ಆಯ್ಕೆ ಮಾಡಿಕೊಂಡು ಬಿಗ್‌ಬಾಸ್ ನೀಡುವ ಆಟದಲ್ಲಿ ಅವರನ್ನು ಸೋಲಿಸಿದರೆ ನಾಮಿನೇಟ್ ನಿಂದ ಸೇಫ್ ಆಗುವ ಅವಕಾಶ ನೀಡಲಾಯಿತು.
ಈ ವೇಳೆ ಪ್ರಶಾಂತ್ ಸಂಬರ್ಗಿ ಬಲಹೀನ ಅನ್ನೋ ಕಾರಣ ನೀಡಿ ವಿಶ್ವನಾಥ್ ಹಾವೇರಿಯನ್ನು ಆಯ್ಕೆ ಮಾಡಿಕೊಂಡ್ರು. ಗೇಮ್ ನಲ್ಲಿ ಗೆದ್ದ ಪ್ರಶಾಂತ್ ಸೇಫ್ ಆದ್ರೆ ವಿಶ್ವನಾಥ್ ನಾಮಿನೇಟ್ ಆದ್ರು.
ಬಳಿಕ ಲ್ಯಾಗ್ ಮಂಜು, ವೈನ್ ಸ್ಟೋರ್ ಖ್ಯಾತಿಯ ರಘು ಗೌಡ ಆಯ್ಕೆ ಮಾಡಿಕೊಂಡರು. ರಘು ನನ್ನ ಸಮಾನ ಪ್ರತಿಸ್ಪರ್ಧಿ, ಸೋತರು ಬಲಾಡ್ಯನೊಂದಿಗೆ ಸೋತೆ ಎಂಬ ತೃಪ್ತಿ ಇರುತ್ತದೆ. ಹೀಗಾಗಿ ರಘುವನ್ನು ಮಂಜು ಆಯ್ಕೆ ಮಾಡಿಕೊಂಡ್ರು.

ಐಸ್‌ಕ್ರೀಮ್ ಕಪ್‌ನ ಚಿತ್ರಗಳನ್ನು ನೋಡಿಕೊಂಡು ಅದನ್ನೇ ಹೋಲುವ ಮಾದರಿಯನ್ನು ನಿರ್ಮಿಸುವ ನೆನಪಿನ ಶಕ್ತಿ, ಬುದ್ಧಿಕೌಶಲ್ಯದ ಆಟದಲ್ಲಿ ಬುದ್ಧಿವಂತಿಕೆಯಿಂದ ಆಡಿದ ಮಂಜು ಪಾವಗಡ ವಿಜೇತರಾದರು. ಆ ಮೂಲಕ ಮಂಜು ಪಾವಗಡ ಡೇಂಜರ್ ಝೋನ್ ನಿಂದ ಸೇಫ್ ಜೋನ್‌ಗೆ ಬಂದರು. ಮಂಜು ಜೊತೆ ಆಟದಲ್ಲಿ ಸೋತ ರಘು ಗೌಡ ನಾಮಿನೇಟ್ ಆಗಿದ್ದಾರೆ.