Bigg Boss Kannada: ಬಿಗ್‌ಬಾಸ್ ಶುರುವಾದಾಗ, ಚೆನ್ನಾಗಿ ಟಾಸ್ಕ್ ಆಡಿ, ಮಿತವಾಗಿ ಮಾತನಾಡಿ, ಸಾಫ್ಟ್ ಆ್ಯಂಡ್ ಸ್ವೀಟ್ ಎನ್ನಿಸಿಕೊಂಡಿದ್ದ ಮೋಕ್ಷಿತಾ ಪೈ, ಬರು ಬರುತ್ತಾ ವಾಚಾಳಿ ಎನ್ನಿಸಿಕೊಂಡರು. ಜಗಳ ಮಾಡಿದರೆ, ಮನೆಯಲ್ಲಿ ಇರಬಹುದು ಅನ್ನೋದು ಅವರ ಪ್ಲಾನ್ ಆಗಿದೆಯೋ ಏನೋ ಎಂಬಂತೆ, ಸಣ್ಣ ಪುಟ್ಟ ವಿಷಯಕ್ಕೂ ದೊಡ್ಡದಾಗಿ ಕಿರುಚಾಡಲು ಶುರು ಮಾಡಿದರು.
ಇದೀಗ ಮೋಕ್ಷಿತಾ ಪೈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋವೊಂದು ಓಡಾಡುತ್ತಿದ್ದು, ಈಕೆ 20 ವರ್ಷ ವಯಸ್ಸಿನಲ್ಲೇ ಜೈಲು ಸೇರಿ ಬಂದವಳು ಎಂದು ಗೊತ್ತಾಗಿದೆ. ರಿಯಾಲಿಟಿ ಶೋ, ಸೋಶಿಯಲ್ ಮೀಡಿಯಾದಲ್ಲಿ ತಾನೊಬ್ಬ ಜವಾಬ್ದಾರಿಯುತ ಅಕ್ಕ ಅನ್ನುವ ರೀತಿ ಪೋಸ್ ಕೊಡುತ್ತಿದ್ದ ಮೋಕ್ಷಿತಾ, ತನ್ನ ಬುದ್ಧಿಮಾಂದ್ಯ ತಮ್ಮನನ್ನು ತಾನೇ ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿ, ಎಲ್ಲರ ಸಿಂಪತಿ ಗಿಟ್ಟಿಸಿಕೊಂಡಿದ್ದರು.
ಬಿಗ್‌ಬಾಸ್ ಬರುವುದಕ್ಕೂ ಮುನ್ನ ಪಾರು ಸಿರಿಯಲ್‌ನಲ್ಲಿ ನಟಿಸುತ್ತಿದ್ದ ನಟಿ, ಆಗಲೇ ಮನೆ ಕಟ್ಟಿಸಲು ಮುಂದಾಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಕೂಡ ಆಗಿದ್ದಾರೆ. ಇದೀಗ ಇನ್ನೊಮ್ಮೆ ಟ್ರೋಲ್ ಆಗಿರುವ ಮೋಕ್ಷಿತಾ ಮೇಲೆ ಕಿಡ್ನ್ಯಾಪ್ ಮಾಡಿರುವ ಆರೋಪವಿದೆ. ಕೇಸ್ ಕೂಡ ದಾಖಲಾಗಿ, ಆಕೆ ಸೆರೆವಾಸ ಅನುಭವಿಸಿ ಬಂದಾಗಿದೆ.
ಮೋಕ್ಷಿತಾ ಬಿಕಾಂ ಮುಗಿದ ಬಳಿಕ, ಬೆಂಗಳೂರಿನಲ್ಲಿ ಸಣ್ಣ ಕೆಲಸ ಮಾಡುತ್ತಾ, ಮಕ್ಕಳಿಗೆ ಟ್ಯೂಷನ್ ಹೇಳಿ ಕೊಡುತ್ತಿದ್ದರು. ಚೆನ್ನಾಗಿ ದುಡ್ಡು ಮಾಡಬೇಕು ಎನ್ನುವ ಆಸೆ ಅದಾಗಲೇ, ಅವಳ ಮನಸ್ಸಿಗೆ ಬಂದಿತ್ತು. ಹೆಚ್ಚು ಮಕ್ಕಳಿಗೆ ಟ್ಯೂಷನ್ ಹೇಳಿಕೊಟ್ಟು, ಚೆನ್ನಾಗಿ ದುಡ್ಡು ಸಂಪಾದನೆ ಮಾಡಬಹುದಿತ್ತು. ಆದರೆ ಆಸೆ ಅತೀಯಾಗಿ, ಬಾಯ್‌ಫ್ರೆಂಡ್ ಜೊತೆ ಸೇರಿ, ತನ್ನ ಟ್ಯೂಷನ್‌ಗೆ ಬರುತ್ತಿದ್ದ ಶ್ರೀಮಂತರ ಮಗಳನ್ನೇ ಕಿಡ್ನ್ಯಾಪ್ ಮಾಡುವ ಪ್ಲಾನ್ ಮಾಡಿದ್ದಳು.
ನಾಗಭೂಷಣ್ ಎಂಬ ಗೆಳೆಯನೊಂದಿಗೆ ಸೇರಿ, ತನ್ನ ಟ್ಯೂಷನ್‌ಗೆ ಬರುತ್ತಿದ್ದ ರೆಸ್ಟೋರೆಂಟ್ ಮಾಲೀಕನ ಪುತ್ರಿಯನ್ನ ಕಿಡ್ನ್ಯಾಪ್ ಮಾಡುವ ಸ್ಕೆಚ್ ಹಾಕಿದ್ದಳು. ನಾಗಭೂಷಣ್ ಆಕೆಯನ್ನೇ ಫಾಲೋ ಮಾಡಿ, ಕಿಡ್ನ್ಯಾಪ್ ಮಾಡಿ, ತನ್ನ ಮನೆಯಲ್ಲೇ ಇರಿಸಿಕೊಂಡು, 25 ಲಕ್ಷ ರೂಪಾಯಿ ಕೊಟ್ಟರೆ, ಮಗಳನ್ನು ಬಿಡುವುದಾಗ, ಆ ಬಾಲಕಿಯ ಅಪ್ಪನಿಗೆ ಡಿಮ್ಯಾಂಟ್ ಇಟ್ಟಿದ್ದ.
ಆದರೆ, ಮೋಕ್ಷಿತಾ ಮತ್ತು ಆಕೆಯ ಗೆಳೆಯ ನಾಗಭೂಷಣ್ ಹಣೆಬರಹಗೆಟ್ಟು ಇಬ್ಬರೂ ಸಿಕ್ಕಿಹಾಕಿಕೊಂಡು, ಜೈಲು ಸೇರಿದ್ದರು. ಟಿವಿಯಲ್ಲಿ ಬರುತ್ತಿದ್ದ ಕ್ರೈಂ ಸ್ಟೋರಿಯಲ್ಲಿ ಈ ಜೋಡಿ ಅದಾಗಲೇ ಮಿಂಚಿತ್ತು. ಅದಾದ ಬಳಿಕ ಐಶ್ವರ್ಯಾ ಪೈ ಮೋಕ್ಷಿತಾ ಪೈ ಆಗಿ ಬದಲಾದರು ಎನ್ನಲಾಗಿದೆ.