Bigg Boss Kannada: ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟ ನ್ಯೂಸ್ ಆ್ಯಂಕರ್ ರಾಧಾ ಹಿರೇಗೌಡರ್‌

Bigg Boss News: ಬಿಗ್‌ಬಾಸ್ ಕನ್ನಡ ಸೀಸನ್ 11 ಬರೀ ನೆಗೆಟಿವ್ ವಿಷಯಗಳಿಂದಲೇ ಟ್ರೋಲ್ ಆಗುತ್ತಿದೆ. ಮೊದಲೆಲ್ಲ ಬಿಗ್‌ಬಾಸ್ ಅಂದ್ರೆ, ಟಾಸ್ಕ್, ಮನೋರಂಜನೆ ಅಂತಿತ್ತು. ಆದರೆ ಈಗ ಅಸಭ್ಯವಾಗಿ ನಡೆದುಕೊಳ್ಳುವುದು. ಅಸಭ್ಯವಾಗಿ ಒಬ್ಬರನ್ನೊಬ್ಬರು ಬೈಯ್ಯುವುದು. ಜಗಳವಾಡುವುದು ಇದೇ ಆಗಿದೆ.

ಈ ಸೀಸನ್‌ ಮನೋರಂಜನೆ ಹೆಚ್ಚಿಸಲು ಬಿಗ್‌ಬಾಸ್ ಸಿಂಗರ್ ಹನುಮಂತುನನ್ನು ವೈಲ್ಡ್ ಕಾರ್ಡ್ ಎಂಟ್ರಿಯಾಗಿ ತಂದಿತ್ತು. ಬರುವಾಗ ಭಾರೀ ಖುಷಿಯಿಂದ ಇದ್ದ ಹನುಮಂತು, ಮನೆಗೆ ಬಂದು, ಕ್ಯಾಪ್ಟನ್‌ ಸ್ಥಾನ ಸಿಕ್ಕ ಬಳಿಕ, ಕಂಗಾಲಾಗಿ ಹೋಗಿದ್ದಾನೆ. ನನಗೆ ಕ್ಯಾಪ್ಟನ್ ಸ್ಥಾನ ನಿಭಾಯಿಸಲು ಸಾಧ್ಯವಾಗುತ್ತಿಲ್ಲವೆನ್ನುತ್ತಿದ್ದಾನೆ. ಅಲ್ಲದೇ ತನ್ನನ್ನು ತಾನೇ ಬಿಗ್‌ಬಾಸ್ ಮನೆಯಿಂದ ಹೊರಹೋಗಲು ನಾಮೀನೇಟ್ ಮಾಡಿಕೊಂಡಿದ್ದಾನೆ.

ಇದೀಗ ಬಿಗ್‌ಬಾಸ್‌ಗೆ ನ್ಯೂಸ್ ಆ್ಯಂಕರ್ ರಾಧಾ ಹೀರೇಗೌಡರ್‌ ಎಂಟ್ರಿ ಕೊಟ್ಟಿದ್ದು, ಬ್ಲೇಸರ್ ಧರಿಸಿ, ಜರ್ನ್‌ಲಿಸ್ಟ್ ರೀತಿಯೇ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕಾರಣವೇನು ಅಂದ್ರೆ, ಬಿಗ್‌ಬಾಸ್ ನಡೆಸುತ್ತಿರುವ ರಾಜಕಾರಣಿಗಳ ಟಾಸ್ಕ್. ಈ ಟಾಸ್ಕ್‌ನಲ್ಲಿ ಎರಡು ರಾಜಕೀಯ ಪಕ್ಷವಿದ್ದು, ಒಂದು ಪಕ್ಷದಲ್ಲಿ 7 ಜನರಿದ್ದಾರೆ. ಒಂದು ಪಕ್ಷದ ಹೆಸರು ಧರ್ಮಪರ ಸೇನಾ ಪಕ್ಷ. ಮತ್ತೊಂದು ಪಕ್ಷದ ಹೆಸರು ಪ್ರಾಮಾಣಿಕ ಸಮರ್ಥರ ನ್ಯಾಯವಾದಿ ಪಕ್ಷ.

ಐಶ್ವರ್ಯಾ ಮತ್ತು ತ್ರಿವಿಕ್ರಿಮ್ ಆಯಾ ಪಕ್ಷಗಳ ಲೀಡರ್ ಆಗಿದ್ದು, ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇವರ ಪರ ಇವರ ಪಕ್ಷದ ಕಾರ್ಯಕರ್ತರು ಪ್ರಚಾರ ಆರಂಭಿಸಿದ್ದಾರೆ. ಹೀಗಾಗಿ ರಾಜಕೀಯ ಪಕ್ಷಗಳ ನಡುವೆ ಜಿದ್ದಾಜಿದ್ದಿ ಪೈಪೋಟಿ ಏರ್ಪಡಬೇಕು ಅಂದ್ರೆ, ಅಲ್ಲಿ ನ್ಯೂಸ್ ಡಿಬೇಟ್ ಇರಲೇಬೇಕು. ಹಾಗಾಗಿಯೇ ರಾಧಾ ಹಿರೇಗೌಡರ್‌ ಅವರನ್ನು ಕರೆಸಿದ್ದಾರೆ.

About The Author