Sunday, May 26, 2024

Latest Posts

Bigg Boss : ಕನ್ನಡದ ಬಿಗ್ ಬಾಸ್ ಸೀಸನ್ 10ಕ್ಕೆ ಕೌಂಟ್ ಡೌನ್.! ಸ್ಪರ್ಧಿಗಳು ಯಾರೆಲ್ಲ..?!

- Advertisement -

Film News : ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋ ಆರಂಭ ಆಗೋಕೆ ಇನ್ನೇನು ದಿನಗಣನೆ ಆರಂಭವಾಗಿದೆ. ಈಗಾಗ್ಲೇ ವಾಹಿನಿ ಬಿಗ್ ಬಾಸ್ ಗೆ ಸಂಬಂಧ ಪಟ್ಟಂತೆ ಎರಡನೇ ಪ್ರೋಮೋವನ್ನು ರಿಲೀಸ್ ಮಾಡಿದೆ.

ಈ ಪ್ರೋಮೋದಲ್ಲಿ ಹ್ಯಾಪಿ ಬಿಗ್ ಬಾಸ್ ಅಂತ ಹೇಳಲಾಗಿದೆ. ಅಷ್ಟೇ ಅಲ್ಲದೆ 100 ದಿನಗಳ ಹಬ್ಬ ಇದು ಅನ್ನೋದನ್ನ ಒತ್ತಿ ಹೇಳಲಾಗಿದ್ದು, ಬಿಗ್ ಬಾಸ್ ಸೀಸನ್ 10ಕ್ಕೆ ರೆಡಿನಾ ಅಂತ ಕೇಳಲಾಗಿದೆ. ಇದರೊಂದಿಗೆ ಇದೀಗ ಕುತೂಹಲಕ್ಕೆ ಕಾರಣವಾಗಿರೋ ವಿಷಯ ಏನಪ್ಪ ಅಂದ್ರೆ, ಬಿಗ್ ಬಾಸ್ ಸೀಸನ್ 10ರಲ್ಲಿ ಯಾರೆಲ್ಲಾ ಇರ್ತಾರೆ.? ಯಾರು ಯಾರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರೆ? ಯಾವ ರಂಗದಿಂದ ಯಾರೆಲ್ಲ ಬರುತ್ತಾರೆ? ಎಂಬ ಪ್ರಶ್ನೆ ಎದುರಾಗಿದೆ.

ಬಿಗ್ ಬಾಸ್ ಸೀಸನ್ 10ರ ಎರಡನೇ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಊರ ಹಬ್ಬಕ್ಕೆ ಇಲ್ಲಿದೆ ರೀಸನ್; ಶುರುವಾಗ್ತಿದೆ HAPPY ‘BIGG BOSS KANNADA’ ಹತ್ತನೇ ಸೀಸನ್! ಎಂಬ ಟೈಟಲ್ ಅಡಿಯಲ್ಲಿ ಹೊಸ ಪ್ರೋಮೋ ರಿಲೀಸ್ ಆಗಿದೆ. ಈ ಬಾರಿ 100 ದಿನಗಳ ಬಿಗ್ ಬಾಸ್ ಹಬ್ಬ ಗ್ಯಾರೆಂಟಿ ಅನ್ನೋದು ಕಿಚ್ಚಿನ ಮಾತು ಪ್ರೋಮೋ ನೋಡಿ ‘ನಾವು ಬಿಗ್ ಬಾಸ್ ನೋಡೋಕೆ ಒಂದೇ ಕಾರಣ, ಅದು ಕಿಚ್ಚ ಸುದೀಪ್’ ಅಂತ ಕೆಲವರು ಕಾಮೆಂಟ್ ಮಾಡಿದ್ದಾರೆ.

ಈ ಬಾರಿ ಯಾರು ಯಾರು ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ? ಯಾವ ಕ್ಷೇತ್ರದಿಂದ ಯಾರೆಲ್ಲ ಬರುತ್ತಾರೆ ಎಂಬ ಕುತೂಹಲ ಶುರುವಾಗಿದೆ. ಧಾರಾವಾಹಿ ನಟ, ನಟಿಯರು, ಯುಟ್ಯೂಬರ್ಸ್, ಸಾಮಾಜಿಕ ಹೋರಾಟಗಾರರು, ರಾಜಕಾರಣಿಗಳು ಈ ಸೀಸನ್‌ನಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ. ತಾವರೆಕೆರೆ, ದೊಡ್ಡ ಆಲದ ಮರದ ಮಧ್ಯೆ ಇರುವ ಪ್ರದೇಶದಲ್ಲಿ ‘ಬಿಗ್ ಬಾಸ್’ ಮನೆ ರೆಡಿ ಮಾಡಲಾಗ್ತಿದೆ. ಪ್ರತಿ ಸೀಸನ್‌ಲ್ಲೂ ಒಂದೊಂದು ರೀತಿಯ ಥೀಮ್ ಇಟ್ಟುಕೊಂಡು ಬಿಗ್ ಬಾಸ್ ಮನೆ ರೆಡಿ ಮಾಡ್ತಾರೆ. ಈ ಬಾರಿ ಯಾವ ರೀತಿ ಮನೆ ಡಿಸೈನ್ ಮಾಡಲಾಗುವುದು ಎಂಬ ಕುತೂಹಲ ಶುರುವಾಗಿದೆ.

ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅನುಂಬಂಧ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರ ಆಗಲಿದೆ. ಅದಾಗಿ ಅಕ್ಟೋಬರ್ ತಿಂಗಳಿನಿಂದ ಬಿಗ್ ಬಾಸ್ ಆರಂಭವಾಗಲಿದ್ದು, 16 ಸ್ಪರ್ಧಿಗಳು ದೊಡ್ಮನೆ ಪ್ರವೇಶ ಮಾಡಲಿದ್ದಾರೆ. ವಿಶೇಷ ಅಂದ್ರೆ, ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ, ಪ್ರತಿದಿನ ಜಿಯೋ ಸಿನಿಮಾದಲ್ಲಿ 24*7 ಲೈವ್ ಪ್ರಸಾರ ಆಗಲಿದೆ. ಆ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಿತ್ಯ ಒಂದೂವರೆ ಗಂಟೆಗಳ ಕಾಲ ಬಿಗ್ ಬಾಸ್ ಎಪಿಸೋಡ್ ಟೆಲಿಕಾಸ್ಟ್ ಆಗಲಿದೆ.

ಈಗಾಗ್ಲೇ ‘ನಾಗಿಣಿ 2’ ಧಾರಾವಾಹಿ ನಟಿ ನಮ್ರತಾ ಗೌಡ, ನಿನಾದ್ ಹರಿತ್ಸ, ಸೋಶಿಯಲ್ ಮೀಡಿಯಾ ಸ್ಟಾರ್‌ಗಳಾದ ಭೂಮಿಕಾ ಬಸವರಾಜ್, ಬಿಂದು ಗೌಡ, ವರ್ಷ ಕಾವೇರಿ, ಬುಲೆಟ್ ಪ್ರಕಾಶ್ ಮಗ ರಕ್ಷ್‌, ನಟಿ ರೇಖಾ ವೇದವಸ್ಯಾಸ, ನಟ ರಾಜೇಶ್ ಧ್ರುವ ಮುಂತಾದವರು ಬಿಗ್ ಬಾಸ್ ಶೋನಲ್ಲಿ ಭಾಗವಹಿಸುತ್ತಾರೆ ಎನ್ನಲಾಗಿದೆ. ಆದ್ರೆ, ಇನ್ನೂ ಅಧಿಕೃತವಾಗಿ ಯಾವುದೂ ಫೈನಲ್ ಆಗಿಲ್ಲ.

Kanthara : ಕಾಂತಾರಾ 2 ಬಜೆಟ್ ಎಷ್ಟು ಕೋಟಿ ಗೊತ್ತಾ..?!

Varsha Varun : ಯಾರ ಕಣ್ಣು ಬಿತ್ತೋ ಇವರ ಪ್ರೀತಿ ಮೇಲೆ..?!

Dharshan : ಐತಿಹಾಸಿಕ ಸಿನಿಮಾ ಮಾಡ್ತಾರಾ ದರ್ಶನ್..?! ಏನಿದು ಪೋಸ್ಟರ್..?!

- Advertisement -

Latest Posts

Don't Miss