Wednesday, July 2, 2025

Latest Posts

Big Boss: ಬಿಗ್ ಬಾಸ್ ಮನೆಯಲ್ಲಿ ಯಾಕಿದ್ದೀಯಾ? ; ರಜತ್ ಪ್ರಶ್ನೆಗೆ ಚೈತ್ರಾ ಕಕ್ಕಾಬಿಕ್ಕಿ

- Advertisement -

ಬಿಗ್ ಬಾಸ್ ಸೀಸನ್ 11 ದಿನಕ್ಕೋದು ರೊಚಕತೆಯನ್ನು ಪಡೆದುಕೊಳ್ಳುತ್ತಿದೆ.ಹೊಸ ಹೊಸ ಆಟಗಳನ್ನು ಬಿಗ್ ಬಾಸ್ ಆಡಿಸುತ್ತಿದ್ದಾರೆ. ದಿನ ಕಳೆದಂತೆ ಬಿಗ್​ಬಾಸ್​ ಮನೆಯಲ್ಲಿರೋ ಸ್ಪರ್ಧಿಗಳ ನಡುವೆ ಭಿನ್ನಾಭಿಪ್ರಾಯಗಳು ಮೂಡುತ್ತಿವೆ. ಪ್ರತಿ ವಾರದಂತೆ ಈ ವಾರ ಕೂಡ ಬಿಗ್​ಬಾಸ್​ ನಾಮಿನೇಷನ್​ ಪ್ರಕ್ರಿಯೆ ವಿಭಿನ್ನವಾಗಿ ನಡೆದಿದೆ.

ಹೀಗಾಗಿ ಬಿಗ್​ಬಾಸ್​ ಮನೆಯಲ್ಲಿ ನಾಮಿನೇಷನ್ ಬೆಂಕಿ ಹೊತ್ತುಕೊಂಡಿದೆ. ಈ ಬಾರಿ ನಡೆದ ವಿಭಿನ್ನ ನಾಮಿನೇಷನ್ ಟಾಸ್ಕ್​ನಲ್ಲಿ ಸ್ಪರ್ಧಿಗಳು ಮನೆಯಿಂದ ಆಚೆ ಕಳುಹಿಸಲು ಇಷ್ಟ ಪಡುವ ಸ್ಪರ್ಧಿಗಳ ತಲೆ ಮೇಲೆ ಬಾಟಲಿಯಿಂದ ಹೊಡೆದು ನಾಮಿನೇಟ್ ಮಾಡಬೇಕು. ಅಂತೆಯೇ ಭವ್ಯ ಗೌಡ ಅವರು, ಐಶ್ವರ್ಯಾ ಅವರ ತಲೆಗೆ ಬಾಟಲಿ ಹೊಡೆದಿದ್ದರು. ಮೋಕ್ಷಿತಾ ಉಗ್ರಂ ಮಂಜು ತಲೆಗೆ ಬಾಟಲಿಯಿಂದ ಹೊಡೆದಿದ್ದಾರೆ.

 

ಇನ್ನೂ ಈಗ ರಿಲೀಸ್ ಆದ ಹೊರ ಪ್ರೋಮೋದಲ್ಲಿ ರಜತ್​ ಚೈತ್ರಾ ಕುಂದಾಪುರ ತಲೆಗೆ ಬಾಟಲಿ ಹೊಡೆದಿದ್ದಾರೆ. ಮತ್ತೊಂದು ಕಡೆ ಉಗ್ರಂ ಮಂಜು ತ್ರಿವಿಕ್ರಮ್​ ತಲೆಗೆ ಬಾಟಲಿ ಹೊಡೆದು ನಾಮಿನೇಟ್ ಮಾಡಿದ್ದಾರೆ. ನಾಮಿನೇಟ್​ ಮಾಡುವಾಗ ರಜತ್​ ಚೈತ್ರಾ ಕುಂದಾಪುರಗೆ, ನಮ್ಮ ಪ್ರೀತಿಯ ಚೈತ್ರಾ ಅವರು ಬೇರೆ ಬೇರೆ ಟಾಸ್ಕ್​ನಲ್ಲಿ ಕಾಣಲಿಲ್ಲ, ಸೀರೆ ಒಗಿಯುವುದರಲ್ಲಿ ಕಾಣಲಿಲ್ಲ ನಿಮ್ಮ ಆ ಟ್ಯಾಲೆಂಟ್​ ಇನ್ನೂ ಯಾಕಾದ್ರೂ ಬಿಗ್​ಬಾಸ್​ ಮನೆಯಲ್ಲಿ ಇದ್ದೀಯಮ್ಮಾ ನಿಮ್ಮ ತಮ್ಮಯ್ಯ ಹೊರಡಮ್ಮ ಮನೆಗೆ ಅಂತ ಹೇಳಿದ್ದಾರೆ.

ಮತ್ತೊಂದು ಕಡೆ ಮಂಜು ತ್ರಿವಿಕ್ರಮ್​ನನ್ನೂ ನೇರವಾಗಿ ನಾಮಿನೇಟ್​ ಮಾಡಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಜೋರು ಮಾತುಕತೆ ನಡೆದಿದೆ. ಇಂದು ರಾತ್ರಿಯ ಎಪಿಸೋಡ್​ನಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಹೋಗುವ ಸ್ಪರ್ಧಿಗಳು ಯಾರು ಅಂತ ಗೊತ್ತಾಗಲಿದೆ.

- Advertisement -

Latest Posts

Don't Miss