Tuesday, September 16, 2025

Latest Posts

Biggboss kannada 10 : ವರ್ತೂರ್ ಸಂತೋಷ್ 2ನೇ ಮದುವೆ! ಹುಡುಗಿ ಯಾರು ಗೊತ್ತಾ?

- Advertisement -

ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ ವರ್ತೂರ್ ಸಂತೋಷ್ ಸದಾ ವಿವಾದಗಳಿಂದಲೇ ಸದ್ದು ಮಾಡಿದ್ರು. ಹುಲಿ ಉಗುರಿನ ವಿವಾದಕ್ಕೆ ವರ್ತೂರು ಸಂತೋಷ್​​ನನ್ನು ಪೊಲೀಸರು ಬಂಧಿಸಿದ್ರು. ಬಿಗ್ ಬಾಸ್ ಇತಿಹಾಸದಲ್ಲೇ ನಡೆಯದ ಘಟನೆಯೊಂದು ನಡೆದು ಹೋಗಿತ್ತು. ರಾತ್ರೋ ರಾತ್ರಿ ವರ್ತೂರು ಸಂತೋಷ್ ಬಿಗ್​ ಬಾಸ್​ ಮನೆಯಿಂದ ಹೊರಗೆ ಬಂದಿದ್ರು. ಬಳಿಕ ಮತ್ತೆ ಸಂತೋಷ್ ದೊಡ್ಮನೆ ಸೇರಿದ್ರು. ಇದಾದ ಬಳಿಕ ವರ್ತೂರು ಸಂತೋಷ್ ಮದುವೆ ಹಾಗೂ ವಿಚ್ಛೇದನ ವಿಚಾರ ದೊಡ್ಡ ಸುದ್ದಿ ಆಗಿತ್ತು. ಇದೀಗ ವರ್ತೂರು ಸಂತೋಷ್ 2ನೇ ಮದುವೆಗೆ ರೆಡಿಯಾಗಿದ್ದಾರೆ. ಶೀಘ್ರವೇ ಹಸೆಮಣೆ ಏರೋದಾಗಿ ವರ್ತೂರು ಸಂತೋಷ್ ಹೇಳಿದ್ದಾರೆ.

ಹೌದು ಹಳ್ಳಿಕಾರ ಒಡೆಯ ಅಂತಲೇ ಫೇಮಸ್ ಆಗಿರುವ ವರ್ತೂರು ಸಂತೋಷ್ , ಬಿಗ್​ ಬಾಸ್ ಮನೆಯಲ್ಲಿದ್ದ ವೇಳೆ ಮದುವೆಯಾಗಿದೆ ಎನ್ನುವ ವಿಚಾರ ಬಯಲಾಗಿತ್ತು. ಮೊದಲ ಪತ್ನಿಯ ತಂದೆ ಮಾಧ್ಯಮಗಳ ಮುಂದೆ ಬಂದು ವರ್ತೂರು ಸಂತೋಷ್​ ವಿರುದ್ಧ ಆರೋಪಗಳ ಮಾಡಿದ್ರು. ಕೆಲ ದಿನಗಳ ಕಾಲ ವರ್ತೂರು ಸಂತೋಷ ಮದುವೆ ಬಗ್ಗೆ ಮಾತಾಡಿರಲಿಲ್ಲ. ಬಳಿಕ ಸ್ಪರ್ಧಿಗಳ ಜೊತೆ ಮದುವೆ ವಿಚಾರ ಬಗ್ಗೆ ಹೇಳಿಕೊಂಡ್ರು.

ಅಂದಹಾಗೆ ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ಇಬ್ಬರು ತುಂಬಾ ಕ್ಲೋಸ್ ಆಗಿದ್ರು. ಇದನ್ನು ನೋಡಿದ ಜನ ಹೊರಗೆ ಬಂದ್ಮೇಲೆ ಇಬ್ಬರೂ ಮದುವೆ ಆಗ್ತಾರೆ ಅಂತಿದ್ರು. ದೊಡ್ಮನೆಯಿಂದ ಹೊರಗೆ ಬಂದ್ಮೇಲೆ ಇಬ್ಬರ ಸ್ನೇಹ ಮುಂದುವರೆದಿತ್ತು. ಆಗಾಗ ಭೇಟಿಯಾಗೋದನ್ನ ಕಂಡು ಇಬ್ಬರ ನಡುವೆ ಪ್ರೀತಿ ಚಿಗುರಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದ್ರೆ ನಾನು ಪ್ರೀತಿ ಮಾಡ್ತೀರೋ ಹುಡುಗಿ ತನಿಷಾ ಅಲ್ಲ ಅಂತ ವರ್ತೂರು ಸಂತೋಷ್​ ಹೇಳಿದ್ದಾರೆ.

 

ಇನ್ನು ಈ ಬಗ್ಗೆ ಮಾತಾಡಿದ ವರ್ತೂರು ಸಂತೋಷ್​, ನನ್ನ ಜೀವನದಲ್ಲೇ ಏನೇನೋ ನಡೆದು ಹೋಗಿದೆ ಅದೆಲ್ಲಾ ಕರುನಾಡಿನ ಜನತೆಗೆ ಗೊತ್ತಿದೆ ಎಂದಿದ್ದಾರೆ. ಅಲ್ಲದೆ ಹಾರಿ ಹೋದ ಬಳ್ಳಿಯಿಂದ ಹೂವು ಅರಳೋದಿಲ್ಲ. ಹಿಂದಿನ ಕಥೆ ಮುಗಿದಿದೆ , ನನ್ನ ಜೀವನದಲ್ಲಿ ಹೊಸ ಪ್ರೀತಿಕಥೆ ಶುರುವಾಗಿದೆ ಎಂದಿದ್ದಾರೆ.

ಅಲ್ಲದೇ ನನ್ನ ಜೀವನಕ್ಕೆ ಒಂದು ಹುಡುಗಿಯ ಪ್ರವೇಶವಾಗಿದೆ. ನಾವಿಬ್ಬರೂ ತುಂಬಾ ಚೆನ್ನಾಗಿದ್ದೇವೆ. ಫೋನ್, ಮೆಸೇಜ್​ ಹಾಗೂ ಮೀಟ್ ಮಾಡ್ತಾ ಖುಷಿಯಾಗಿದ್ದೇವೆ. ಆದ್ರೆ ಆ ಹುಡುಗಿ ತನಿಷಾ ಅಲ್ಲ ನಮ್ಮ ಸಂಬಂಧಿಕರ ಹುಡುಗಿಯನ್ನ ನಾನು ಮದುವೆ ಆಗೋದಾಗಿ ವರ್ತೂರು ಸಂತೋಷ್ ಹೇಳಿಕೊಂಡಿದ್ದಾರೆ.

- Advertisement -

Latest Posts

Don't Miss