Friday, August 29, 2025

Latest Posts

BIGGBOSS KANNADA 11: ನೀವಿಬ್ರು ರಾಧಾ ಕೃಷ್ಣ ಇದ್ದಂಗೆ ತ್ರಿವಿಕ್ರಮ್ ತಾಯಿ ಹೀಗಂದಿದ್ಯೇಕೆ

- Advertisement -

ಬಿಗ್ ಬಾಸ್ ಸೀಸನ್ 11 ಈಗ ಯಶಸ್ವಿಯಾಗಿ 14ನೇ ದಿನಕ್ಕೆ ಕಾಲಿಟ್ಟಿದೆ. 2025 ಹೊಸ ವರ್ಷ ಆರಂಭವಾಗುವ ಮುನ್ನವೇ ಬಿಬಿ ಮನೆಯಲ್ಲಿ ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ಇಷ್ಟು ದಿನ ಮನೆಯವರನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಸ್ಪರ್ಧಿಗಳು ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಇಂದು ರಿಲೀಸ್ ಆಗಿರುವ ಪ್ರೋಮೋದಲ್ಲಿ ಭವ್ಯಾ ಗೌಡ ತಾಯಿ ಹಾಗೂ ತ್ರಿವಿಕ್ರಮ್ ತಾಯಿ ಎಂಟ್ರಿ ಕೊಟ್ಟಿದ್ದಾರೆ.

ಹೌದು ಪ್ರತಿ ಸೀಸನ್ ನಲ್ಲಿ ಪಾಸ್ ಆ್ಯಂಡ್ ಫ್ರೀಸ್ ಟಾಸ್ಕ್ ಇದ್ದೇ ಇರುತ್ತೆ. ಸದ್ಯ ಈ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ಅದೇ ಗೇಮ್ ಜಾರಿಯಲ್ಲಿದೆ. ಸದ್ಯ ಮನೆಯ ಮುಖ್ಯ ದ್ವಾರ ತೆರೆದಾಗ ಇಡೀ ಮನೆಗೆ ಪಾಸ್ ಹೇಳಲಾಗುತ್ತದೆ. ಏನ್ ಆಯ್ತು ಎಂದು ಎಲ್ಲರೂ ಗಾಬರಿಯಲ್ಲಿ ನೋಡುತ್ತಿರುವಾಗ ಭವ್ಯಾ ಗೌಡ ತಾಯಿ ಮತ್ತು ಸಹೋದರಿ ಆಗಮಿಸುತ್ತಾರೆ. ‘ಹಾಯ್ ಬಂಗಾರಿ’ ಅಂತ ಭವ್ಯಾ ಗೌಡ ತಾಯಿ ಅಪ್ಪಿಕೊಳ್ಳುತ್ತಾರೆ. ಭವ್ಯಾ ಗೌಡ ಅಕ್ಕ ದಿವ್ಯಾ ಗೌಡ ಮತ್ತು ಅಗಲಿರುವ ಹಿರಿಯ ಅಕ್ಕನ ಮಗಳು ಆಗಮಿಸಿದ್ದಾರೆ. ಇದೇ ಸಮಯಕ್ಕೆ ತ್ರಿವಿಕ್ರಮ್ ತಾಯಿ ಆಗಮಿಸುತ್ತಾರೆ. ಆದರೆ ತ್ರಿವಿಕ್ರಮ್ ಮಾತ್ರ ಆಕ್ಟಿವಿಟಿ ರೂಮ್‌ನಲ್ಲಿ ಟಾಸ್ಕ್‌ ಮಾಡುತ್ತಿರುತ್ತಾರೆ.

 

ಬಿಗ್ ಬಾಸ್ ನೀಡಿರುವ ಪಸಲ್ ಟಾಸ್ಕ್‌ನ ಸಂಪೂರ್ಣಗೊಳ್ಳಿಸಿದ್ದರೆ ಮಾತ್ರ ತ್ರಿವಿಕ್ರಮ್ ತಾಯಿಯನ್ನು ಭೇಟಿ ಮಾಡಲು ಸಾಧ್ಯ. ಆದರೆ ನಿಗಧಿ ಮಾಡಿದ ಸಮಯದಲ್ಲಿ ಮುಗಿಸಲು ಆಗದ ಕಾರಣ ಮುಖ್ಯ ದ್ವಾರದಿಂದ ತ್ರಿವಿಕ್ರಮ್ ತಾಯಿ ಹೊರಟು ಬಿಡುತ್ತಾರೆ. ಆದರೆ ಭವ್ಯಾ ಗೌಡ ಜೊತೆ ಮಾತನಾಡಿದ ಅವರು’ನನ್ನ ಮಗನಿಗೆ ತಾಯಿ ಆಗಿ ಫ್ರೆಂಡ್ ಆಗಿ ಎಲ್ಲ ತರದಲ್ಲೂ ತುಂಬಾ ಚೆನ್ನಾಗಿ ಇದು ಮಾಡ್ತಿದ್ಯಾ. ರಾಧಾ ಕೃಷ್ಣ ತರ ಇದ್ದೀರಿ’ ಅಂತ ಖುಷಿಯಿಂದ ಮಾತನಾಡಿದ್ದಾರೆ. ಈಗಾಗಲೆ ಫ್ಯಾನ್ ಪೇಜ್‌ಗಳಲ್ಲಿ ತ್ರಿವ್ಯಾ, ತ್ರಿವಿಕ್ರಮ್- ಭವ್ಯಾ ಅಂತ ಲವ್ ಟ್ರೋಲ್ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.

- Advertisement -

Latest Posts

Don't Miss