www.karnatakatv.net ಬೆಂಗಳೂರು: ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8ನ್ನು ಮತ್ತೆ ಅನ್ ಲಾಕ್ ನಂತರ ಮತ್ತೆ ಮುಂದುವರೆಸಿದ್ದಾರೆ. ಎಲ್ಲಾ ಸ್ಪರ್ಧಿಗಳು ಕೇವಲ ಆಟ ಮಾತ್ರ ಆಡದೆ ಒಬ್ಬರ ಮೇಲೊಬ್ಬರು ಆರೋಪಿಸಿಕೊಳ್ಳುತ್ತಿದ್ದಾರೆ. ಅದು ಇತ್ತೀಚೆಗೆ ಜಗಳಕ್ಕೂ ದಾರಿ ಮಾಡಿಕೊಡುತ್ತಿದೆ. ಬಿಗ್ ಬಾಸ್ ಗೆಲ್ಲುವ ಸ್ಪರ್ಧಿ ಎಂದೇ ಹೇಳಲಾಗುತ್ತಿರುವ ಅರವಿಂದ್ ಕೆಪಿ. ಹಾಗೂ ಪ್ರಶಾಂತ್ ಸಂಬರಗಿ ನಡುವೆ ದೊಡ್ಡ ಜಗಳವೇ ನಡೆದಿದೆ. ಹಾಗೆಯೇ ದಿವ್ಯ ಉರುಡುಗ ಅವರ ಕ್ಯಾಪ್ಟನ್ಸಿ ಇನ್ನೇನು ಕೊನೆಯಾಗಿತ್ತಿದೆ ಎಂದು ಬಿಗ್ ಬಾಸ್ ಆದೇಶಿಸುತ್ತಿದ್ದಂತೆ ಎಲ್ಲಾ ಸ್ಪರ್ಧಿಗಳು ದಿವ್ಯಾಗೆ ಶುಭಾಶಯ ತಿಳಿಸಿದ್ದಾರೆ. ಆದರೆ ಪ್ರಶಾಂತ್ ಮಾತ್ರ ದಿವ್ಯ ಡಿಸಿಶನ್ ಮೇಕಿಂಗ್ ಬಗ್ಗೆ ಋಣಾತ್ಮಕ ಕಾಮೆಂಟ್ ಗಳನ್ನೇ ಕೊಟ್ಟಿದ್ದಾರೆ. ಪ್ರಶಾಂತ್ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಅರವಿಂದ್. ಹಾಗೂ ಅರವಿಂದ್-ಪ್ರಶಾಂತ್ ನಡುವೆ ಇದೇ ವಿಚಾರಕ್ಕೆ ಜಗಳ ಆರಂಭವಾಗಿದ್ದು ಜೋರು ಧ್ವನಿಯಲ್ಲಿ ಪ್ರಶಾಂತ್ ಅರವಿಂದ್ ರನ್ನು ನಿಂದಿಸಿದ್ದಾರೆ. ಇನ್ನೇನು ದೊಡ್ಡ ಗಲಾಟೆ ಆರಂಭವಾಗುತ್ತಿದೆ ಎನ್ನುವಷ್ಟರಲ್ಲಿ ಉಳಿದ ಸ್ಪರ್ಧಿಗಳು ತಡೆದಿದ್ದಾರೆ.