Hubli News: ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಕೇಸ್ ನ ಆರೋಪಿಗಳು ಅಮಾಯಕರು ಅಂತ ಜಮೀರ್ ಅಹ್ಮದ್ ಪತ್ರ ಬರೆದಿದ್ರು. ಕಾಂಗ್ರೆಸ್ ಪಕ್ಷ ಭಯೋತ್ಪಾದಕ ಬೆಂಬಲಿಗ ಪಕ್ಷ. ಕಾಂಗ್ರೆಸ್ ನವರಿಗೆ ಮತಾಂದಂತೆಯ ಪಿತ್ತ ತಲೆಗೇರಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಹಳೇ ಹುಬ್ಬಳ್ಳಿಯಲ್ಲಿ ನಡೆದ ಘಟನೆಯ ಕೇಸ್ ತೆಗೆದಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ನನಗೆ ಅಧಿಕೃತವಾಗಿ ಸಿಕ್ಕಿಲ್ಲ, ಇದು ತುಷ್ಟಿಕರಣದ ಪರಾಕಾಷ್ಟೆ ಕಾಂಗ್ರೆಸ್ ಪಕ್ಷ ತಲುಪಿದೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ, ಪೊಲೀಸ್ ಸಿಬ್ಬಂದಿ, ಅಧಿಕಾರಿಗಳ ಮೇಲೆ ಹಲ್ಲೆ ಮಾಡಲಾಗಿದೆ. ಇದು ಹಿಂದೂ ಮುಸ್ಲಿಂ ಪ್ರಶ್ನೆ ಅಲ್ಲಾ, ದೇಶದ್ರೋಹಿ ಹಾಗೂ ವ್ಯವಸ್ಥೆ ನಡುವಿನ ಹೋರಾಟ. ದೇಶದ್ರೋಹಿ ಶಕ್ತಿಗಳು ಭಾರತದ ಸಂವಿಧಾನ, ಕಾನೂನು ವ್ಯವಸ್ಥೆ ನಡುವಿನ ಹೋರಾಟ. ಇದು ವ್ಯವಸ್ಥಿತವಾಗಿ ನಡೆದಿರೋ ಅಟ್ಯಾಕ್ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಅವತ್ತಿನ ಅಧಿಕಾರಿಗಳ ಹೆಸರು ತಗೊಂಡ್ರೆ ಅವರ ಮೇಲೆ ದ್ವೇಷ ಸಾಧನೆ ಮಾಡಬಹುದು. ಅಧಿಕಾರಿ ಒಬ್ರ ಹೇಳಿದ್ರು, ಹೆಚ್ಚು ಕಡಿಮೆ ಆಗಿದೆ ಸತ್ತೋಗ್ತೀದ್ದೆ ಅಂದಿದ್ರು. 155 ಆರೋಪಿಗಳನ್ನಿ ಬಂಧಿಸಿದ್ರು, 2 ವರ್ಷಕ್ಕಿಂತ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಸರ್ಕಾರ, ಸರ್ಕಾರಿ ವಕೀಲರನ್ನ ಬದಲು ಮಾಡ್ತು. ಕಾಂಗ್ರೆಸ್ ಜಮೀರ್ ಅಹ್ಮದ್ ಸೇರಿ ಹಲವರು ಅಮಾಯಕರು ಅಂತ ಪತ್ರ ಬರೆದ್ರು. ಗೃಹ ಸಚಿವರು ಪತ್ರ ಬರೆದ್ರು, ವಕೀಲರು ಬದಲಾದ್ರು. ಆರೋಪಿಗಳನ್ನಿ ಬಿಡುಗಡೆ ಮಾಡಲು ಇಷ್ಟೇಲ್ಲ ಪ್ರಯತ್ನ ಮಾಡಿದ್ರು. ಹಲವು ಅತ್ಯಂತ ಗಂಭೀರ ಸೆಕ್ಷನ್ ಗಳನ್ನು ಹಾಕಿ ಇವರನ್ನ ಬಂಧಿಸಲಾಗಿತ್ತು. ಸಮಾಜ ಆಸ್ತಿ ಹಾನಿ ಹಿನ್ನೆಲೆ ಮತ್ತೊಂದು ಪ್ರಕರಣ ದಾಖಲಾಯ್ತು. ಸಂಘಟಿತ ಭಯೋತ್ಪಾದಕ ಅಪರಾಧ ಕೃತ್ಯ. ಭಯೋತ್ಪಾದನ ಮಾಡಿದವರ ಕೇಸ್ ಹಿಂಪಡೆದು ಸಮಾಜಕ್ಕೆ ಕಂಟಕ ತಂದಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಭಯೋತ್ಪಾದಕ ಬೆಂಬಲಿಗ ಪಕ್ಷ.. ಪೊಲೀಸರು, ಕಾನೂನು ಇದನ್ನ ಹಿಂದೆ ತಗೆಯೋದು ಒಳ್ಳೇದಲ್ಲ ಅಂದಿದ್ದಾರೆ. ಎಲ್ಲವನ್ನು ಹೊರತು ಪಡಿಸಿ ಹಿಂದೆ ತೆಗೆದಿದ್ದಾರೆ ಅಂದ್ರೆ ಇವರ ಉದ್ದೇಶ ಏನು?
ನಮ್ಮ ಸಮಯದಲ್ಲಿ ಕಾಶ್ಮೀರದಲ್ಲಿ ದೊಡ್ಡ ಘಟನೆಗಳೇನು ನಡೆದಿಲ್ಲ. 90% ಭಯೋತ್ಪಾದನೆ ಕಡಿಮೆ ಆಗಿದೆ, ಕಟ್ಟುನಿಟ್ಟಿನ ಕ್ರಮ ನಾವು ಕೈಗೊಂಡಿದ್ದೇವೆ. ಯುಪಿಎ ಕಾಲದಲ್ಲಿ ದೇಶದಲ್ಲಿ ಎಲ್ಲಾ ಕಡೆಗಳಲ್ಲಿ ಭಯೋತ್ಪಾದನೆ ನಡೀತಾ ಇತ್ತು. ಪ್ರಪಂಚದ ಎಲ್ಲಾ ಕಡೆಗಳಲ್ಲೂ ದೇಶದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಇದೆ.
ಕಾಂಗ್ರೆಸ್ ಭಯೋತ್ಪಾದಕ ಮುಸ್ಲಿಂ ಶಕ್ತಿ ಪರವಾಗಿ ನಿಂತಿದೆ. ಇದು ಕಾಂಗ್ರೆಸ್, ಬಿಜೆಪಿ ಪ್ರಶ್ನೆ ಅಲ್ಲಾ, ದೇಶದ ಸುರಕ್ಷತೆ ಪ್ರಶ್ನೆ ಇದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಎನ್ ಐ ಎ ಕೋರ್ಟ್ ನಲ್ಲಿದೆ, ಯಾವ ಸರ್ಕಾರವು ಕೈ ಹಾಕಲ್ಲ. ಕಾಂಗ್ರೆಸ್ ನವರಿಗೆ ಯಾವ ಪ್ರಮಾಣದಲ್ಲಿ ಮತಾಂದಂತೆಯ ಪಿತ್ತ ತಲೆಗೆ ಏರಿದೆ. ಸಮಾಜದ ದೃಷ್ಟಿಯಿಂದ ನಾವು ಪ್ರತಿಭಟನೆ ಹಮ್ಮಿಕೊಳ್ತೇವೆ. ಸರ್ಕಾರ ಇದನ್ನ ಅರ್ಥ ಮಾಡಿಕೊಳ್ಳಬೇಕು. ನಾಳೆ ಪೊಲೀಸ್ ಠಾಣೆಯನ್ನೇ ಸುಟ್ಟು ಹಾಕಬಹುದು. ನಾವು ಇದನ್ನ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡ್ತೇವೆ. ಇದರ ಬಗ್ಗೆ ಸರ್ಕಾರ ನಾಳೆ ಒಳಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು.
ಇಲ್ಲವಾದಲ್ಲಿ ಭಾನುವಾರ ಮೊದಲ ಹಂತದ ಪ್ರತಿಭಟನೆ ಹಮ್ಮಿಕೊಳ್ತೀವೆ. ಎನ್ ಐ ಎ ನಲ್ಲಿನ ಕೇಸ್ ತಗಿಯೋಕೆ ಬರಲ್ಲ, ಇವರು ತೆಗೆದಿದ್ದಾರೆ. ಓಟ್ ಬ್ಯಾಂಕ್ ಗಾಗಿ ರಾಜ್ಯ ಸರ್ಕಾರ ಹೀಗೆ ಮಾಡ್ತಾ ಇದೆ ಎಂದು ಜೋಶಿ ಹರಿಹಾಯ್ದಿದ್ದಾರೆ.
ರತನ್ ಟಾಟಾ ವಿಧಿವಶ ಹಿನ್ನೆಲೆ ಜೋಶಿ ಸಂತಾಪ ಸೂಚಿಸಿದ್ದು, ರತನ್ ಟಾಟಾ ಕೇವಲ ಉದ್ಯಮಿ ಆಗಿರಲಿಲ್ಲ.
ರಾಷ್ಟ್ರದ ಬಗ್ಗೆ ಚಿಂತನೆ ಹೇಗೆ ಮಾಡಬೇಕು ಎಂದು ತೋರಿಸಿಕೊಟ್ಟವರು. ಅವರಿಗೆ ನಾನು ಶ್ರದ್ಧಾಂಜಲಿಯನ್ನ ಸಲ್ಲಿಸ್ತೇನೆ. ಅಂತವರ ಅಗಲಿಕೆ ತುಂಬಲಾರದ ನಷ್ಟ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.