Thursday, September 25, 2025

Latest Posts

ಬಿಜೆಪಿಯಿಂದ ಬಿಹಾರ ಸಿಎಂ ಹೈಜಾಕ್?

- Advertisement -

ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ರಾಜಕೀಯ ಪಕ್ಷಗಳ ವಾಕ್ಸಮರವೂ ಜೋರಾಗಿದೆ. ಬಿಜೆಪಿ ಮತ್ತು ಜೆಡಿಯು ಪಾರ್ಟಿಯನ್ನು, ಮೀಸಲಾತಿ ಕಳ್ಳರೆಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಟೀಕಿಸಿದ್ದಾರೆ.

ಬಿಹಾರದಲ್ಲಿ ನಿತಿಶ್‌ ಕುಮಾರ್‌ ಅವರದ್ದು ಏನೂ ಉಳಿದಿಲ್ಲ. ನಿತೀಶ್ ಕುಮಾರ್ ಅವರನ್ನು ಬಿಜೆಪಿ ಹೈಜಾಕ್ ಮಾಡಿದೆ. ಅಲ್ಲೇನಿದ್ರೂ, ಮೋದಿ, ಅಮಿತ್ ಶಾ ಸರ್ಕಾರವಿದೆ. ಭ್ರಷ್ಟ ಅಧಿಕಾರಿಗಳನ್ನು ಮುಂದಿಟ್ಟುಕೊಂಡು, ರಾಜ್ಯಭಾರ ಮಾಡುತ್ತಿದ್ದಾರೆ. ಸಮಾಜದ ದುರ್ಬಲ ವರ್ಗಗಳಿಗೆ, ನ್ಯಾಯ ಒದಗಿಸುವ ಕೆಲಸಕ್ಕೆ ಕಲ್ಲು ಹಾಕುತ್ತಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.

ಅತಿ ಪಿಚ್ಡಾ ನ್ಯಾಯ್ ಸಂಕಲ್ಪ್ ಯಾತ್ರೆಯಲ್ಲಿ ಮಾತನಾಡಿದ ತೇಜಸ್ವಿ ಯಾದವ್, ನಿತೀಶ್ ಕುಮಾರ್ ಪ್ರಜ್ಞಾಹೀನ ಪರಿಸ್ಥಿತಿಯಲ್ಲಿದ್ದಾರೆ. ಅವರನ್ನು ಬಿಜೆಪಿ ಸುಮ್ಮನೆ ಮುಂದಕ್ಕೆ ಬಿಟ್ಟಿದೆ. ಕೇವಲ ಇಬ್ಬರು ವ್ಯಕ್ತಿಗಳಿಂದ ಬಿಹಾರ ಸರ್ಕಾರ ನಡೆಯುತ್ತಿದೆ. ದೂರದೃಷ್ಟಿ ಇಲ್ಲದ ಮುಖ್ಯಮಂತ್ರಿಗಳನ್ನು, ನಾವು ಹೊಂದಿರುವುದು ನಮ್ಮ ದೌರ್ಭಾಗ್ಯ.

ನಮ್ಮ ಹಿಂದಿನ ಸರ್ಕಾರದ ಅಭಿವೃದ್ದಿ ಯೋಜನೆಗಳನ್ನು, ನಿತೀಶ್ ಕುಮಾರ್ ಹಲವು ಬಾರಿ ನಕಲು ಮಾಡಿದ್ದಾರೆ. ನಿತೀಶ್ ಕುಮಾರ್ ಮೀಸಲಾತಿ ಕಳ್ಳರು. ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಅಂತಾ ತೇಜಸ್ವಿ ಯಾದವ್‌ ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರೀಯ ಜನತಾ ದಳದ ಮತ್ತೋರ್ವ ನಾಯಕರಾದ ಮಂಗನಿ ಲಾಲ್ ಮಂಡಲ್, ನಿತೀಶ್ ಕುಮಾರ್ ಅವರನ್ನು ಶಿಖಂಡಿಗೆ ಹೋಲಿಸಿದ್ದಾರೆ. ಅವರೊಬ್ಬರು ದೊಡ್ಡ ಸುಳ್ಳುಗಾರ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಹಿಂದುಳಿದ ವರ್ಗಕ್ಕೆ ಮೋಸ ಮಾಡಿದ ನಾಯಕ ಎಂದು ಜರಿದಿದ್ದಾರೆ.

- Advertisement -

Latest Posts

Don't Miss