ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದ ನಂತರ ಅದರ ರಾಜಕೀಯ ಕಂಪನಗಳು ಈಗ ಕರ್ನಾಟಕಕ್ಕೂ ತಲುಪಿವೆ. ಬಿಹಾರ ರಿಸಲ್ಟ್ ಪ್ರಾದೇಶಿಕ ಪಕ್ಷಗಳಿಗೆ ಬೂಸ್ಟ್ ನೀಡಿರುವುದರಿಂದ, ಜೆಡಿಎಸ್‌ಗೆ ಹೊಸ ಉತ್ಸಾಹ ಸಿಕ್ಕಿದಂತಾಗಿದೆ. ಇದೇ ಕಾರಣಕ್ಕೆ ಬಿಹಾರ ಎಫೆಕ್ಟ್ ಕರ್ನಾಟಕದಲ್ಲೂ ಗೋಚರಿಸುತ್ತಿದೆ.
ಬಿಹಾರದಲ್ಲಿ ನಿತೀಶ್ ಕುಮಾರ್‌ರ ಜೆಡಿಯು ಹೇಗೆ ಮೈತ್ರಿಯಲ್ಲಿ ಪ್ರಭಾವ ಬೀರಿತು ಎಂಬುದೇ ಈಗ ಜೆಡಿಎಸ್ ನಾಯಕತ್ವಕ್ಕೂ ಹೊಸ ಆತ್ಮವಿಶ್ವಾಸ ತಂದಿದೆ. ಜೆಡಿಎಸ್ ಈಗ ರಾಜ್ಯಾದ್ಯಂತ ಸಂಘಟನೆ ಬಲಪಡಿಸಲು ಕೋರ್ ಕಮಿಟಿ ಬದಲಾವಣೆ ಮಾಡಿ, ಹೊಸ ನೇಮಕಗಳನ್ನು ಸ್ಪೀಡ್‌ನಲ್ಲಿ ಮಾಡುತ್ತಿದೆ. 2028ರ ಚುನಾವಣೆಯತ್ತ ನೋಟ ಹಾಯಿಸಿ ಮೈತ್ರಿ ರಾಜಕೀಯಕ್ಕೆ ಪ್ಲಾನಿಂಗ್ ಶುರುವಾಗಿದೆ.
ಕಳೆದ ಲೋಕಸಭೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಹೆಚ್ಚು ಪರಿಣಾಮ ತೋರದಿದ್ದರೂ, ಈಗ ಬಿಹಾರದ ಗೆಲುವು ಮೈತ್ರಿ ಮಾದರಿ ಕೆಲಸ ಮಾಡುವ ಸಾಧ್ಯತೆ ರಾಜ್ಯ ರಾಜಕೀಯದಲ್ಲಿ ಮತ್ತೆ ಚರ್ಚೆಗೆ ಬಂದಿದೆ. ಕುಂಠಿತಗೊಂಡಿದ್ದ ಜೆಡಿಎಸ್ ಈಗ ಫುಲ್ ಆಕ್ಟೀವ್ ಮೋಡ್ ಗೆ ಬಂದು ಸಂಘಟನೆಯ ಗೇರ್ ಬದಲಿಸಿದೆ. ಮುಂದಿನ ದಿನಗಳಲ್ಲಿ ಏನು ದೊಡ್ಡ ನಿರ್ಧಾರ ಹೊರ ಬೀಳಬಹುದು ಎಂಬ ಕುತೂಹಲ ರಾಜ್ಯದಲ್ಲಿ ಹೆಚ್ಚಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

